AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಕಾರ್ಮಿಕನೊಬ್ಬ ಅತೀ ಎತ್ತರದ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತಿರುವ ವಿಡಿಯೋ ವೈರಲ್; ಕೋಪಗೊಂಡ ನೆಟ್ಟಿಗರು

Viral Video : ಈ ಹುಡುಗ ಕುಳಿತಿರುವ ಅಪಾಯಕಾರೀ ಜಾಗ ಗಮನಿಸಿ. ಈ ಕಟ್ಟಡದ ಮಾಲೀಕರು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಹುಡುಗನನ್ನು ಶಾಲೆಗೆ ಕಳಿಸಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ಧಾರೆ.

ಬಾಲಕಾರ್ಮಿಕನೊಬ್ಬ ಅತೀ ಎತ್ತರದ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತಿರುವ ವಿಡಿಯೋ ವೈರಲ್; ಕೋಪಗೊಂಡ ನೆಟ್ಟಿಗರು
ಕಟ್ಟಡ ಕಾರ್ಮಿಕ ಅತ್ಯಂತ ಅಪಾಯಕಾರಿಯಾದ ಜಾಗದಲ್ಲಿ ಕುಳಿತಿರುವುದು
TV9 Web
| Edited By: |

Updated on:Jan 10, 2023 | 2:01 PM

Share

Viral : ಶ್ರಮಿಕ ವರ್ಗ ಯಾವತ್ತೂ ಅಪಾಯಕಾರಿ ಸ್ಥಿತಿಯಲ್ಲಿಯೇ ಕೆಲಸ ಮಾಡುವುದು ಅನಿವಾರ್ಯ. ಇತ್ತೀಚೆಗಷ್ಟೇ ಕೊಲ್ಕತ್ತೆಯ ಬೀದಿಯಲ್ಲಿ ಕೂಲಿಕಾರ್ಮಿಕನೊಬ್ಬ ತಲೆಯ ಮೇಲೆ ಹಲಗೆ, ಕಂಬಿಗಳನ್ನು ಎರಡೂ ಕೈಗಳಿಂದ ಹಿಡಿದು ಸೈಕಲ್​ ಓಡಿಸುತ್ತಿರುವ ವಿಡಿಯೋ ನೋಡಿದ್ದಿರಿ. ಇದೀಗ ಈ ವಿಡಿಯೋ ನೋಡಿ. ಈ ಬಾಲಕ ಅತೀ ಎತ್ತರದ ಕಟ್ಟಡ ಕೆಲಸದಲ್ಲಿ ಮುಳುಗಿದ್ದಾನೆ. ಅವನು ಕುಳಿತುಕೊಂಡಿರುವ ಜಾಗ ಗಮನಿಸಿ. ಒಂದೇ ಕ್ಷಣ ಏಮಾರಿದರೆ ನೇರ ನೆಲಕ್ಕೇ!

ನಮ್ಮಲ್ಲಿ ಎಷ್ಟೋ ಜನರಿಗೆ ಎತ್ತರ ಎಂದರೆ ಭಯ. ಎತ್ತರದ ಕಟ್ಟಡಗಳನ್ನು ಏರಿ ಕೆಳಗೆ ನೋಡಿದರೆ ತಲೆ ತಿರುಗುವ ಅನುಭವವಾಗುತ್ತದೆ. ಅಂಥದ್ದರಲ್ಲಿ ಈ ಹುಡುಗ ಹೀಗೆ ಇಂಥ ಅಪಾಯಕಾರಿ ಸ್ಥಳದಲ್ಲಿ ಕುಳಿತು ಕೆಲಸದಲ್ಲಿ ಮಗ್ನನಾಗಿದ್ದಾನೆ ಎಂದರೆ? ಅನಿವಾರ್ಯತೆ. ಕೆಳಗೆ ಇರುವೆಯಂತೆ ಕಾಣುವ ಜನರನ್ನು ಗಾಡಿಗಳನ್ನು ಗಮನಿಸಿದರೆ ಸಾಕು, ಎತ್ತರವನ್ನು ಊಹಿಸಲು.

ಇದನ್ನೂ ಓದಿ : ವಿಮಾನದಲ್ಲಿ ಸಹಪ್ರಯಾಣಿಕನೊಂದಿಗೆ ಶರ್ಟ್ ಬಿಚ್ಚಿ ಹೊಡೆದಾಟಕ್ಕಿಳಿದ ಯುವಕನ ವಿಡಿಯೋ ವೈರಲ್

ಡಾ. ಶೌಕತ್ ಷಾ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ಧಾರೆ. ಇವನಿಗೆ ಪ್ರಶಂಸೆ ಬೇಕಿದೆ ಎಂದು ಕ್ಯಾಪ್ಷನ್ ಬೇರೆ ಕೊಟ್ಟಿದ್ದಾರೆ. 11 ಸೆಕೆಂಡುಗಳ ಕ್ಲಿಪ್‌ ನೋಡಿದ ನೆಟ್ಟಿಗರು ಕೋಪಗೊಂಡಿದ್ಧಾರೆ. 5 ಲಕ್ಷ ಜನರು ಈ ವಿಡಿಯೋ ನೋಡಿದ್ಧಾರೆ. ಒಂದು ಹೊತ್ತಿನ ಊಟಕ್ಕಾಗಿ ಈ ಹುಡುಗ ಶಾಲೆಯನ್ನು ಬಿಟ್ಟು ಹೀಗೆ ಅಪಾಯಕರ ಜಾಗದಲ್ಲಿ ಕುಳಿತು ಕೆಲಸ ಮಾಡುವುದು ಸಲ್ಲದು ಎಂದು ಅನೇಕರು ಹೇಳಿದ್ದಾರೆ. ಇಂಥ ಮಕ್ಕಳಿಗೆ ಸುರಕ್ಷತೆಯ ಅಗತ್ಯವೂ ಇದೆ. ಹೀಗೆ ಮಕ್ಕಳನ್ನು ಕೆಲಸಕ್ಕೆ ಪೂರೈಸುವ ಗುತ್ತಿಗೆದಾರರು ಮತ್ತು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:00 pm, Tue, 10 January 23