ಪಾಕಿಸ್ತಾನದಲ್ಲಿ ಇನ್ನು ಟರ್ಕಿಷ್ ಐಸ್ಕ್ರೀಮ್ ನಿಷೇಧಿಸಲಾಗುತ್ತದೆಯಾ? ನೆಟ್ಟಿಗರು ಕೇಳುತ್ತಿದ್ದಾರೆ
Turkish Ice cream : ಐಸ್ಕ್ರೀಮ್ ಮಾರುವವನ, ಇಸಿದುಕೊಳ್ಳುವವನ ಅತಿರೇಕವನ್ನು ನೋಡಿದ ನೆಟ್ಟಿಗರು ಅಸಹ್ಯದ ಪರಮಾವಧಿ ಎನ್ನುತ್ತಿದ್ದಾರೆ. ಈಗ ಟರ್ಕಿ ಜೊತೆ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳಿ ಎಂದು ವ್ಯಂಗ್ಯವನ್ನಾಡುತ್ತಿದ್ದಾರೆ.
Viral Video : ಟರ್ಕಿಷ್ ಐಸ್ಕ್ರೀಮ್ (Turkish Icecream) ಎನ್ನುವುದು ಎಲ್ಲರಿಗೂ ಯಾವಾಗಲೂ ಮಜಾ ಕೊಡುತ್ತದೆ ಎಂದು ಹೇಳಲಾಗದು. ಕೆಲ ತಿಂಗಳುಗಳ ಹಿಂದೆ ಪುಟ್ಟ ಹುಡುಗಿಯೊಬ್ಬಳು ಈ ಐಸ್ಕ್ರೀಮ್ ತೆಗೆದುಕೊಳ್ಳುವಾಗ ರೋಸಿ ಹೋಗಿ ಅತ್ತಿದ್ದ ವಿಡಿಯೋ ಅನ್ನು ನೋಡಿ ಮರುಗಿದ್ದೀರಿ. ಆದರೆ ಪಾಕಿಸ್ತಾನಿ ಪತ್ರಕರ್ತರೊಬ್ಬರು ಹಂಚಿಕೊಂಡ ಈ ವಿಡಿಯೋ ನೋಡಿದ ಮೇಲೆ ಯಾರಿಗೂ ಕೋಪ ಉಕ್ಕದೇ ಇರದು. ಐಸ್ಕ್ರೀಮ್ ಮಾರುವವನು ಮಾಡಲಿರುವ ಮೋಜನ್ನು ಪಕ್ಕದಲ್ಲಿ ನಿಂತ ಮಕ್ಕಳ ಗುಂಪು ಕುತೂಹಲದಿಂದ ಎದುರು ನೋಡುತ್ತಿದೆ. ಮೋಜು ಶುರುವಾಗುತ್ತಿದ್ದಂತೆ ವ್ಯಕ್ತಿಯೊಬ್ಬ ಐಸ್ಕ್ರೀಮ್ ಸಿಕ್ಕಿಸಿದ ಕೋಲನ್ನು ಅತ್ತಿತ್ತ ತಿರುವಿ ಐಸ್ಕ್ರೀಮ್ ಅನ್ನು ಅಕ್ಷರಶಃ ಗಬಗಬನೆ ಬಾಯಿಗೆ ತುರುಕಿಕೊಳ್ಳುತ್ತಾನೆ.
Turkish ice cream tricks must be BANNED in Pakistan after this! pic.twitter.com/y06TXyj9Su
ಇದನ್ನೂ ಓದಿ— azhar khan (@azharkhn4) January 9, 2023
ಆದರೆ ಇದು ಮೋಜು? ಎನ್ನುವಂಥ ಅನುಮಾನವನ್ನು ಹುಟ್ಟುಹಾಕುವಂತಿದೆ ಈ ವಿಡಿಯೋ. ಐಸ್ಕ್ರೀಮ್ ಮಾರುವವನು ಮತ್ತು ಗ್ರಾಹಕನೂ ಅತಿರೇಕದಿಂದ ವರ್ತಿಸಿದ ಹಾಗಿದೆ. ಪಾಕಿಸ್ತಾನದಲ್ಲಿ ಟರ್ಕಿಶ್ ಐಸ್ ಕ್ರೀಮ್ ನಿಷೇಧಿಸಬೇಕು ಎಂಬ ಕ್ಯಾಪ್ಷನ್ನಲ್ಲಿ ಪಾಕಿಸ್ತಾನಿ ಪತ್ರಕರ್ತ ಅಜರ್ ಖಾನ್ ಎಂಬುವವರು ವಿಡಿಯೋ ಟ್ವೀಟ್ ಮಾಡಿದ್ದಾರೆ. ಈಗಾಗಲೇ 16,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ.
ಇದನ್ನೂ ಓದಿ : ಫಿಲಿಪೈನ್ಸ್ನಲ್ಲಿ ವೃದ್ಧನ ಮನೆಯನ್ನು ಹೆಗಲ ಮೇಲೆ ಹೊತ್ತೊಯ್ದ ವಿಡಿಯೋ ವೈರಲ್
ಐಸ್ಕ್ರೀಮ್ ಕೊಡುವ ತಂತ್ರವೂ ಅಸಹ್ಯವಾಗಿದೆ. ಅದನ್ನು ಹಠಾತ್ತನೇ ಇಸಿದುಕೊಂಡು ನುಂಗುವುವವನ ವರ್ತನೆಯೂ ಅಸಹ್ಯವಾಗಿದೆ. ಅವ ನುಂಗಿದ ರೀತಿ ಮತ್ತು ಥಟ್ಟನೇ ಇವ ಟಿಶ್ಯೂ ಕೊಡುವ ರೀತಿಗೆ ಇನ್ನೆಂದೂ ಟರ್ಕಿಷ್ ಐಸ್ಕ್ರೀಮ್ ತಿನ್ನಬಾರದು ಎನ್ನುವಷ್ಟು ಕೋಪ ಬರುತ್ತಿದೆ ಎನ್ನುತ್ತಿದ್ಧಾರೆ ನೆಟ್ಟಿಗರು.
ಇದನ್ನೂ ಓದಿ : ಬಾಲಕಾರ್ಮಿಕನೊಬ್ಬ ಅತೀ ಎತ್ತರದ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತಿರುವ ವಿಡಿಯೋ ವೈರಲ್; ಕೋಪಗೊಂಡ ನೆಟ್ಟಿಗರು
ಈಗ ಟರ್ಕಿ ಜೊತೆ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳಿ ಎಂದಿದ್ದಾರೆ ಕೆಲವರು. ಈ ಜನಕ್ಕೆ ಯಾಕೆ ಇಂಥ ಹುಚ್ಚೋ, ಸಮಾಧಾನದಲ್ಲಿ ಐಸ್ಕ್ರೀಮ್ ತಿನ್ನುವುದನ್ನು ಬಿಟ್ಟು ಇಂಥ ತಂತ್ರಗಳಿಗೆ ಯಾಕೆ ಹಾತೊರೆಯುತ್ತಾರೋ ಎಂದು ಕೇಳಿದ್ಧಾರೆ ಮತ್ತೊಬ್ಬರು. ಮಾರಾಟಗಾರರು ಈ ಅವಕಾಶವನ್ನೇ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ಮಗದೊಬ್ಬರು ಹೇಳಿದ್ಧಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:52 pm, Tue, 10 January 23