‘ನಿಮ್ಮ ಐಸ್ಕ್ರೀಮೇ ಬೇಡ’ ಎಲ್ಲ ಮಕ್ಕಳಿಗೂ ತಮಾಷೆ ಇಷ್ಟವಾಗುವುದಿಲ್ಲ ಐಸ್ಕ್ರೀಮಣ್ಣ; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

Turkish ice cream : ನನ್ನ ಮಗಳೇನಾದರೂ ಆಗಿದ್ದರೆ ಐಸ್ಕ್ರೀಮ್​ವಾಲಾನ ಮುಖಕ್ಕೆ ಎಸೆದೇ ಬರುತ್ತಿದ್ದಳು ಎಂದಿದ್ದಾರೆ ನೆಟ್ಟಿಗರೊಬ್ಬರು. ನನ್ನ ತಂದೆತಾಯಿ ಕೂಡ ಇಷ್ಟೊಂದು ತೊಂದರೆ ಕೊಟ್ಟಿಲ್ಲ ಎಂದಿದ್ದಾರೆ ಮತ್ತೊಬ್ಬರು.

‘ನಿಮ್ಮ ಐಸ್ಕ್ರೀಮೇ ಬೇಡ’ ಎಲ್ಲ ಮಕ್ಕಳಿಗೂ ತಮಾಷೆ ಇಷ್ಟವಾಗುವುದಿಲ್ಲ ಐಸ್ಕ್ರೀಮಣ್ಣ; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಟರ್ಕಿಷ್​ ಐಸ್ಕ್ರೀಮ್​ ತಂತ್ರಕ್ಕೆ ಕೋಪಗೊಂಡ ಬಾಲಕಿ
TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Nov 23, 2022 | 4:12 PM

Viral Video : ಪ್ರದರ್ಶನ ಮೇಳದಲ್ಲಿ, ಐಸ್ಕ್ರೀಮ್​ ಪಾರ್ಲರ್​ಗಳೆದುರಲ್ಲಿ, ಉತ್ಸವಗಳಲ್ಲಿ ಹೀಗೆ ಅನೇಕ ಕಡೆ ಐಸ್ಕ್ರೀಮ್​ವಾಲಾಗಳ ಈ ಟ್ರಿಕ್​ ನೋಡಿರುತ್ತೀರಿ. ಕೆಲವೊಮ್ಮೆ ಈ ಟ್ರಿಕ್​ಗೆ ನೀವು ಮುಖಾಮುಖಿಯಾಗಿರುತ್ತೀರಿ. ಇಲ್ಲೊಬ್ಬ ಟರ್ಕಿಷ್​ ಐಸ್ಕ್ರೀಮ್​ವಾಲಾ ಪುಟ್ಟ ಪೋರಿಯೊಬ್ಬಳಿಗೆ ಮಜಾ ಮಾಡಲು ಹೋಗಿ ನೆಟ್ಟಿಗರಿಂದ ಸರಿಯಾಗಿ ಬಯ್ಯಿಸಿಕೊಂಡಿದ್ದಾನೆ. ಎಲ್ಲ ಮಕ್ಕಳ ಮನಸ್ಸೂ ಒಂದೇ ಥರ ಇರುವುದಿಲ್ಲ ಅಲ್ಲವಾ? ಅದರಲ್ಲೂ ಐಸ್ಕ್ರೀಮ್ ಮುಂದೆ ಇಟ್ಟುಕೊಂಡು ಹೀಗೆ ಆಟವಾಡಿಸಲು ಹೋದರೆ ಏನಾಗುತ್ತದೆ? ನೋಡಿ ವಿಡಿಯೋ.

ಸಾಮಾನ್ಯವಾಗಿ ಈ ಟರ್ಕಿಷ್​  ಐಸ್ಕ್ರೀಮ್​ ಟ್ರಿಕ್​ ದೊಡ್ಡವರ ತಾಳ್ಮೆಯನ್ನೇ ಕಂಗೆಡಿಸುತ್ತದೆ. ಇನ್ನು ಪಂಚಪ್ರಾಣದಂತೆ ಪ್ರೀತಿಸುವ ಮಕ್ಕಳ ಮನಸ್ಸನ್ನು ಗಾಸಿ ಗೊಳಿಸದೇ ಇದ್ದೀತೆ? ಈ ವಿಡಿಯೋ ಅನ್ನು 84,000 ಜನರು ನೋಡಿದ್ದಾರೆ. ಇವರಲ್ಲಿ ಅನೇಕರ ಕೆಂಗಣ್ಣಿಗೆ ಐಸ್ಕ್ರೀಮ್​ವಾಲಾ ಗುರಿಯಾಗಿದ್ದಾನೆ.

ತಮಾಷೆ ಎನ್ನುವುದು ಒಂದೋ ಎರಡೋ ಸಲ. ಅದು ಜಾಸ್ತಿಯಾದರೆ ಇನ್ನೇನಾಗುತ್ತದೆ? ಚಿಕ್ಕಮಗುವನ್ನು ಇಷ್ಟೊಂದು ಅಳಿಸುತ್ತೀರಲ್ಲ, ಇದು ತಮಾಷೆ ಅಲ್ಲವೇ ಅಲ್ಲ ಎಂದಿದ್ದಾರೆ ಕೆಲವರು. ನನ್ನ ಮಗಳೇನಾದರೂ ಆಗಿದ್ದರೆ ಐಸ್ಕ್ರೀಮ್​ವಾಲಾನ ಮುಖಕ್ಕೆ ಎಸೆದೇ ಬರುತ್ತಿದ್ದಳು ಎಂದಿದ್ದಾರೆ ಇನ್ನೊಬ್ಬರು. ನನ್ನ ಅಪ್ಪ ಅಮ್ಮ ಕೂಡ ಇಷ್ಟೊಂದು ತೊಂದರೆ ಕೊಟ್ಟಿಲ್ಲ ಈತನಕ ಎಂದಿದ್ದಾರೆ ಮಗದೊಬ್ಬರು. ಇದು ಸರಿಯಲ್ಲ ಇದನ್ನು ಖಂಡಿಸುತ್ತೇನೆ ಎಂದಿದ್ದಾರೆ ಮತ್ತೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada