ಮೊಸಳೆಯ ಮುಖಕ್ಕೆ ಶರ್ಟ್ ಎಸೆಯುತ್ತಿದ್ದಂತೆ ಮುಂದೇನಾಗುತ್ತದೆ?
Alligator : ನಿಮಗೆ ತಿಳಿದಂತೆ ನೀವು ಮಾಡಲು ಹೋದರೆ, ಕಾಡುಪ್ರಾಣಿಗಳು ತಮಗೆ ತಿಳಿದಂತೆಯೇ ಮಾಡುತ್ತವೆ. ನೋಡಿ ಈ ಭಯಾನಕ ವಿಡಿಯೋ.
Viral Video : ಇದೊಂದು ಅತ್ಯಂತ ಅಪಾಯಕಾರಿ ವಿಡಿಯೋ. ನೆಟ್ಟಿಗರಂತೂ ಪದೇಪದೆ ನೋಡುತ್ತ ಬೆಚ್ಚಿಬೀಳುತ್ತಿದ್ದಾರೆ. ಮೊಸಳೆಗಳು ಒಮ್ಮೆ ಹಿಡಿದರೆ ಗೊತ್ತಲ್ಲ? ಬಾಯಿಗೆ ಸಿಕ್ಕವರು ಜೀವ ಬಿಡುವುದೇ. ಆದರೆ ಈ ವಯಸ್ಸಾದ ಮನುಷ್ಯ ಮಾತ್ರ ಧೈರ್ಯ ಮಾಡಿ ಅದನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಈ ದೊಡ್ಡ ಭಯಂಕರ ಮೊಸಳೆ ಮುಖಕ್ಕೆ ಮೊದಲು ಶರ್ಟ್ ಎಸೆಯುತ್ತಾನೆ. ನಂತರ ನಿಧಾನಕ್ಕೆ ಅದರ ಬಳಿ ನಡೆದು ಅದನ್ನು ಹಿಡಿಯಲು ಹೋಗುತ್ತಾನೆ. ಮುಂದೇನಾಗುತ್ತದೆ ನೋಡಿ ಈ ವಿಡಿಯೋದಲ್ಲಿ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ವೃದ್ಧ ಭಯವೇ ಇಲ್ಲವೆಂಬಂತೆ ಇದನ್ನು ಹಿಡಿದು ಬಲೆಗೆ ಹಾಕಲು ಪ್ರಯತ್ನಿಸುತ್ತಾನೆ. ಆದರೆ ಮೊಸಳೆ ಅವನ ಮೇಲೆ ಆಕ್ರಮಣ ಮಾಡಿಬಿಡುತ್ತದೆ. ಕಂಡೂಕಂಡೂ ತನ್ನ ಪ್ರಾಣಕ್ಕೇ ಅಪಾಯ ತಂದುಕೊಳ್ಳುತ್ತಾನೆ ಈ ಮನುಷ್ಯ. ಹೇಗೋ ಉರುಳಾಡಿ ಬಿದ್ದು ಆ ದೈತ್ಯ ಮೊಸಳೆಯಿಂದ ಬಿಡಿಸಿಕೊಂಡು ಸದ್ಯ ಪಾರಾಗುತ್ತಾನೆ.
ತರಬೇತಿಗೆ ಒಳಪಡಿಸಿದ್ದರೆ ಮಾತ್ರ ಇಂಥ ಅಪಾಯಕಾರಿ ಪ್ರಾಣಿಗಳ ಹತ್ತಿರ ಹೋಗಬಹುದು. ಆದರೆ ಇಂಥ ಅಪರಿಚಿತ ಪ್ರಾಣಿಗಳನ್ನು ಬಲೆಗೆ ಬೀಳಿಸಲು ನುರಿತ ತಜ್ಞರೇ ಬೇಕು. ಅಂಗಿಯನ್ನು ಯಾಕೆ ಅದರ ಮೇಲೆ ಎಸೆದ ಈ ವ್ಯಕ್ತಿ ಎನ್ನುವುದೇ ತಿಳಿಯುತ್ತಿಲ್ಲವಲ್ಲ ಎಂದಿದ್ದಾರೆ ನೆಟ್ಟಿಗರು. ಈ ವ್ಯಕ್ತಿ ಅದೃಷ್ಟಶಾಲಿ. ಕಾಲೋ ಕೈಯನ್ನೋ ಅದು ಎಳೆದುಕೊಂಡಿದ್ದರೆ ಅಷ್ಟೇ ಅವನ ಕಥೆ! ಎಂದಿದ್ದಾರೆ ಕೆಲವರು.
ಪರಿಣತರ ಮಾರ್ಗದರ್ಶನ ಮತ್ತು ಪರಿಣತಿ ಹೊಂದಿಲ್ಲದೆ ಎಂದೂ ಇಂಥ ಕೆಲಸಗಳಿಗೆ ಕೈಹಾಕಬೇಡಿ. ಇದು ಜೀವಕ್ಕೇ ಅಪಾಯ.
ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:34 pm, Wed, 23 November 22