AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Story: ಪ್ರೀತಿಸಿ ಕೈಕೊಟ್ಟ ಹುಡುಗಿಯ ಹೆಸರಲ್ಲೇ ಟೀ ಸ್ಟಾಲ್ ತೆರೆದ ಪ್ರೇಮಿ

ಯುವಕನೊಬ್ಬ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿ ತನಗೆ ದ್ರೋಹ ಬಗೆದ ಮಾಜಿ ಗೆಳತಿಯ ಹೆಸರನ್ನೇ ಟೀ ಅಂಗಡಿಗೆ ‘ಎಂ ಬೇವಾಫಾ ಚಾಯ್‌ವಾಲಾ’ ಎಂದು ಹೆಸರಿಟ್ಟಿದ್ದಾನೆ. ಇದರಲ್ಲೂ ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಈ ಯುವಕ ಜನರಿಗೆ ವಿವಿಧ ದರಗಳಲ್ಲಿ ಚಹಾವನ್ನು ಮಾರಾಟ ಮಾಡುತ್ತಿದ್ದಾನೆ.

Viral Story: ಪ್ರೀತಿಸಿ ಕೈಕೊಟ್ಟ ಹುಡುಗಿಯ ಹೆಸರಲ್ಲೇ ಟೀ ಸ್ಟಾಲ್ ತೆರೆದ ಪ್ರೇಮಿ
A girl who fell in love, a lover who opened a tea stall in her name
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Nov 22, 2022 | 6:04 PM

Share

ಯುವಕನೊಬ್ಬ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿ ತನಗೆ ದ್ರೋಹ ಬಗೆದ ಮಾಜಿ ಗೆಳತಿಯ ಹೆಸರನ್ನೇ ಟೀ ಅಂಗಡಿಗೆ ‘ಎಂ ಬೇವಾಫಾ ಚಾಯ್‌ವಾಲಾ’ ಎಂದು ಹೆಸರಿಟ್ಟಿದ್ದಾನೆ. ಈ ಘಟನೆ ಮಧ್ಯಪ್ರದೇಶದ ರಾಜ್‌ಗಢ್‌ನಲ್ಲಿ ನಡೆದಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ತನ್ನ ಮಾಜಿ ಗೆಳತಿಗೆ ತಿರುಗೆಟು ನೀಡಲು ಅವಳ ಮೊದಲಕ್ಷರಗಳನ್ನು ಬಳಸಿ ಟೀ ಸ್ಟಾಲ್ ಓಪನ್ ಮಾಡಿದ್ದಾನೆ. ಇತನ ಹೆಸರು ಅಂತಾರ್ ಗುಜ್ಜರ್ ಎಂದು, ಇದೀಗ ಈ ಬಗ್ಗೆ ಎಲ್ಲರನ್ನೂ ಗಮನ ಸೆಳೆದಿದ್ದಾನೆ.

ಇದರಲ್ಲೂ ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಈ ಯುವಕ ಜನರಿಗೆ ವಿವಿಧ ದರಗಳಲ್ಲಿ ಚಹಾವನ್ನು ಮಾರಾಟ ಮಾಡುತ್ತಿದ್ದಾನೆ. ದಂಪತಿಗಳಿಗೆ, ‘M Bewafa Chaiwala’ ನಲ್ಲಿ ಒಂದು ಕಪ್ ಚಹಾದ ಬೆಲೆ 10 ರೂ, ಆದರೆ ಅದೇ ಚಹಾಕ್ಕೆ ಪ್ರೀತಿಯಲ್ಲಿ ನೊಂದವರಿಗೆ ಅಥವಾ ಪ್ರೀತಿಯಲ್ಲಿ ದ್ರೋಹಕ್ಕೆ ಒಳಗಾದವರಿಗೆ ಕೇವಲ 5 ರೂಗಳಿಗೆ ಮಾರಾಟ ಮಾಡಲಾಗುತ್ತದೆ.

ಇದನ್ನು ಓದಿ:  ಈ ಫೋಟೋದಲ್ಲಿರುವ ಪಕ್ಷಿಯನ್ನು ಗುರುತಿಸಲಾರದೆ ಹೆಣಗಾಡಿದ ನೆಟ್ಟಿಗರು; ನೀವು ಗುರುತಿಸಬಲ್ಲಿರಾ..!

ಬಿಎ ಅಂತಿಮ ವರ್ಷದ ವಿದ್ಯಾರ್ಥಿಯೂ ಆಗಿರುವ ಅಂತಾರ್ ಐದು ವರ್ಷಗಳ ಹಿಂದೆ ಸಂಬಂಧಿಕರೊಬ್ಬರ ಮದುವೆಯಲ್ಲಿ ಹುಡುಗಿಯೊಬ್ಬಳ ಪರಿಚಯವಾಗಿತ್ತು, ನಂತರ ಇವರಿಬ್ಬರ ನಡುವೆ ಸ್ನೇಹ ಬೆಳೆದಿದೆ. ಸುಮಾರು 2 ವರ್ಷಗಳ ಕಾಲ ಇಬ್ಬರು ಪ್ರೀತಿಸುತ್ತಿದ್ದರು. ನಂತರ, ಅಂತರ್ ಮದುವೆಯ ಪ್ರಸ್ತಾಪ ಮಾಡಿದ್ದಾನೆ, ಆದರೆ ಆಕೆ ಅಂತರ್​​ನ ಪ್ರಸ್ತಾಪವನ್ನು ತಿರಸ್ಕರಿಸಿ ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಳು. ಅಂತರ್ ನಿರುದ್ಯೋಗಿ ಮತ್ತು ತನ್ನ ನಿಶ್ಚಿತ ವರನಿಗೆ ಎಲ್ಲವೂ ಇದೆ ಎಂದು ಹುಡುಗಿ ಅಂತರ್​ನಲ್ಲಿ ಮಾತನಾಡುವುದನ್ನು ನಿಲ್ಲಿಸಿದಳು.

ಪ್ರೀತಿಸಿದ ಹುಡುಗಿ ದ್ರೋಹ ಮಾಡಿದ್ದಾಳೆ ಎಂದು ಅಂತರಾರನು ಜೀವ ಕಳೆದುಕೊಳ್ಳವ ನಿರ್ಧಾರ ಕೂಡ ಮಾಡಿದ್ದ. ಆದರೆ ಅವನ ಸ್ನೇಹಿತನ ಬುದ್ಧಿ ಮಾತಿಗೆ ಬೆಲೆ ಕೊಟ್ಟು, ಎರಡು ವರ್ಷದ ಪ್ರೀತಿಗೆ ಎಳ್ಳುನೀರು ಬಿಟ್ಟಿದ್ದಾನೆ. ನಂತರ ತನ್ನ ಮಾಜಿ ಗೆಳತಿಯ ಮೊದಲಕ್ಷರಗಳನ್ನು ಬಳಸಿಕೊಂಡು ಅವಳಿಗೆ ನಾನು ಏನು? ಎಂದು ತೋರಿಸಲು ಚಹಾ ಅಂಗಡಿಯನ್ನು ತೆರೆದನು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Tue, 22 November 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ