Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸುಖಾಂತ’ ಅಂತ್ಯಸಂಸ್ಕಾರಕ್ಕೊಂದು ಸ್ಟಾರ್ಟ್​ಅಪ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ

Funeral : ನೀವು ಪ್ರದರ್ಶನ ಮೇಳಗಳಿಗೆ ಹೋದಾಗ ಬೆಡ್​ ಇದ್ದರೆ ಒಮ್ಮೆ ಮಲಗಿ ನೋಡುತ್ತೀರಿ, ಉಪ್ಪಿನಕಾಯಿ ಇದ್ದರೆ ನೆಕ್ಕಿ ನೋಡುತ್ತೀರಿ, ಆದರೆ ಇಲ್ಲಿ!? ಮುಂಬೈನಲ್ಲಿರುವ ಈ ಕಂಪೆನಿಯ ಸದಸ್ಯತ್ವ ಶುಲ್ಕ ರೂ. 37,500.

‘ಸುಖಾಂತ’ ಅಂತ್ಯಸಂಸ್ಕಾರಕ್ಕೊಂದು ಸ್ಟಾರ್ಟ್​ಅಪ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ
Found this Stall in Indian International Trade fare
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 21, 2022 | 6:24 PM

Viral : ಹಣವಿದ್ದರೆ ಎಲ್ಲವೂ ಸುಸೂತ್ರ. ಇಂದು ಯಾವ ಸಮಸ್ಯೆಗೂ ಉತ್ತರ ಬಹಳ ಸುಲಭವಾಗಿ ಸಿಗುತ್ತದೆ. ಹಾಗೆ ಸಾವಿಗೆ ಸಂಬಂಧಿಸಿಯೂ. ನಾಳೆ ನಾನು ಸತ್ತುಹೋದರೆ ನನ್ನ ಅಂತ್ಯಸಂಸ್ಕಾರ ಯಾರು ಮಾಡುತ್ತಾರೆ ಎಂದು ಕೊರಗಬೇಕಿಲ್ಲ. ಹಣವಿದ್ದರೆ ಅದೂ ಕೂಡ ಸುಗಮವೇ. ಏಕೆಂದರೆ ನಾಮಕರಣ, ಹುಟ್ಟುಹಬ್ಬ, ಸೀಮಂತ, ಮದುವೆ, ವಾರ್ಷಿಕೋತ್ಸವ ಮುಂತಾದ ಸಮಾರಂಭಗಳಿಗೆ ಇವೆಂಟ್​ ಮ್ಯಾನೇಜ್​ಮೆಂಟ್​ ಕಂಪೆನಿಗಳು ಹೇಗೆ ಸಾರಥ್ಯ ವಹಿಸುತ್ತವೆಯೋ ಹಾಗೆಯೇ ಅಂತ್ಯಸಂಸ್ಕಾರಕ್ಕೂ ಸಾರಥ್ಯ ವಹಿಸುವ ಹೊಸ ಸ್ಟಾರ್ಟ್​ ಅಪ್​ ಮುಂಬೈನಲ್ಲಿ ಶುರುವಾಗಿದೆ.

ಸುಖಾಂತ ಫ್ಯುನರಲ್​​ ಕಂಪೆನಿಯ ಮಳಿಗೆಯು ದೆಹಲಿಯ ಇಂಡಿಯಾ ಇಂಟರ್​ನ್ಯಾಷನಲ್​ ಟ್ರೇಡ್​ ಫೇರ್​ನಲ್ಲಿ ಕಾಣಿಸಿಕೊಂಡಿದೆ. ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಇದನ್ನು ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಹೌಹಾರುತ್ತಿದ್ದಾರೆ. ಏನಿದು, ನೀವು ಹೀಗೆ ಹೇಳುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಈ ಥರವೂ ಒಂದು ಕಂಪೆನಿ ಇರಲು ಸಾಧ್ಯವಾ ಎಂದು ಕೇಳುತ್ತಿದ್ದಾರೆ.

ಮನುಷ್ಯನ ಅಂತಿಮಯಾತ್ರೆಯು ಗೌರವದಿಂದ ಕೂಡಿರಬೇಕೆಂಬ ಉದ್ದೇಶವನ್ನು ಈ ಕಂಪೆನಿ ಹೊಂದಿದೆ. ಅಂತಿಮ ಸಂಸ್ಕಾರದ ಪೂರ್ವ ವಿಧಿವಿಧಾನ, ಅಂತ್ಯಸಂಸ್ಕಾರ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಇದು ಯೋಜಿಸಿ ಕೊಡುತ್ತದೆ. ಸಂಬಂಧಿಸಿದ ಪರಿಣತರು, ಅನುಭವಿಗಳನ್ನು ಈ ಕಂಪೆನಿಯು ಹೊಂದಿದೆ. ಪ್ರಸ್ತುತ ಮಳಿಗೆಯಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನಕ್ಕೆ ಬೇಕಾಗುವ ಎಲ್ಲ ಪರಿಕರಗಳನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು.

ಇದನ್ನೂ ಓದಿ : ಮೆನ್ಸ್​ ಡೇ ಪಂಚಾಂಗದಾಗೂ ಇಲ್ಲ ಮತ್ತ ಗೂಗಲ್​ ಡೂಡಲ್​ದಾಗೂ ಇಲ್ಲ; ಸೋನು ವೇಣುಗೋಪಾಲ

ಇಂತಹ ಸ್ಟಾರ್ಟ್​ ಅಪ್​ ಅಗತ್ಯವಿತ್ತೇ? ಎಂದು ನೆಟ್ಟಿಗರು ಬೆಚ್ಚಿ ಬೆದರಿ ನಕ್ಕು ಕೇಳುತ್ತಿದ್ದಾರೆ. ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ಸಮಾಜಮುಖಿಯಾಗಿ ತೊಡಗಿಕೊಂಡಿದ್ಧಾರೆ. ನಿಜ ಬದುಕಿನಲ್ಲಿ ವಾದ, ಜಗಳಗಳಿಂದ ಮುಕ್ತವಾಗಿ ಅಂತಿಮ ಯಾತ್ರೆಯನ್ನು ಗೌರವದಿಂದ ಪೂರೈಸಲಿ ಬಿಡಿ ಎಂದಿದ್ದಾರೆ ಒಬ್ಬರು. ಅಲ್ಲದೆ, ಈ ಪೋಸ್ಟ್​ನ ಥ್ರೆಡ್​ನಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ನಿರುದ್ಯೋಗ, ಹೆಚ್ಚುತ್ತಿರುವ ಜನಸಂಖ್ಯೆ, ನೌಕರಿಗಾಗಿ ವಲಸೆ, ಮಾಹಿತಿ ತಂತ್ರಜ್ಞಾನದ ಪ್ರಭಾವ, ಪೀಳಿಗೆಗಳ ಅಂತರ ಹೀಗೆ ಮುಂತಾದ ವಿಷಯಗಳು ಚರ್ಚೆಗೆ ಒಳಗಾಗಿವೆ.

ಸುಖಾಂತ ಫ್ಯೂನರಲ್ ಕಂಪೆನಿಯ ಸಂಸ್ಥಾಪಕರು ಸಂಜಯ್ ರಾಮಗುಡೆ. ಕಂಪೆನಿಯ ಸದಸ್ಯತ್ವ ಶುಲ್ಕ ರೂ. 37,500.

ಹೇಗಿದೆ ಈ ಯೋಜನೆ. ಏನಂತೀರಿ ನೀವು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:18 pm, Mon, 21 November 22

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್