‘ಅಭಿಷೇಕ್ ಆ್ಯಬಿ’ ಭಾರತೀಯ ಮೂಲದ ಈ ಗಾಯಕನ ಕಂಠಸಿರಿಗೆ ಮರುಳಾಗದವರಿಲ್ಲ
Abby V : ಹಿಂದಿ, ತಮಿಳು, ಮರಾಠಿ, ಕನ್ನಡ, ತೆಲುಗು, ಪಂಜಾಬಿ ಇತ್ತ ಕರ್ನಾಟಕಿ, ಹಿಂದೂಸ್ತಾನಿ, ರ್ಯಾಪ್, ಪಾಪ್ ಯಾವುದೂ ಸೈ. ಈ ಸಂಗೀತ ಮಾಂತ್ರಿಕನ ಮೂಲ ತಮಿಳುನಾಡು, ವಾಸ ಕೆನಡಾ. ಒಮ್ಮೆ ಹಾಡು ಕೇಳಿಬಿಟ್ಟರೆ ನಶೆ ಹಿಡಿದೇ ಸೈ.
Viral Video : ಗಾಯಕ ಅಭಿಷೇಕ್ ವೆಂಕಟಾಚಲಮ್ (Abby V) ವಾಸವಾಗಿರುವುದು ಕೆನಡಾದ ಟೊರ್ಯಾಂಟೋನಲ್ಲಿ. ಗಾಯಕ, ಸಂಗೀತ ನಿರ್ದೇಶಕ, ನಿರ್ಮಾಪಕ, ಆಡಿಯೋ ಎಂಜಿನಿಯರ್ ಮತ್ತು ಯೂಟ್ಯೂಬರ್. ಜಗತ್ತಿನಾದ್ಯಂತ ಹಲವಾರು ಮ್ಯೂಸಿಕ್ ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿದ ಅನುಭವಿ. ‘ಆಸ್ಟ್ರೋ ಇಂಟರ್ನ್ಯಾಷನಲ್ ಸೂಪರ್ಸ್ಟಾರ್ 2015’ ವಿಜೇತ. ಸುಮಾರು 2 ವರ್ಷಗಳಿಂದಿತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಮಧುರ ಕಂಠದಿಂದ ಹವಾಮೆಹಲ್ ಅನ್ನೇ ಸೃಷ್ಟಿಸಿದ ಈತ ವಿನೀತವಂತ. ಇನ್ಸ್ಟಾಗ್ರಾಂನಲ್ಲಿ ಲಕ್ಷಾಂತರ ಫಾಲೋವರ್ಗಳನ್ನು ಸಂಗೀತದ ಸುಖಸಾಗರದಲ್ಲಿ ರೀಲ್ಸ್ ಮೂಲಕ ತೇಲಿಸುತ್ತಿರುತ್ತಾರೆ.
ಇದನ್ನೂ ಓದಿView this post on Instagram
ಅಭಿಗೆ ಅಪ್ಪನೇ ಆರಂಭಿಕ ಗುರು. ಮಗನಷ್ಟೇ ಅಪ್ಪನ ಕಂಠವೂ ಮಧುರ. ಇಬ್ಬರೂ ಸೇರಿ ಸಾಕಷ್ಟು ರೀಲ್ಸ್ಗಳನ್ನು ಅಪ್ಲೋಡ್ ಮಾಡಿದ್ದಾರೆ. ತಮಿಳು, ತೆಲುಗು, ಹಿಂದಿ, ಮರಾಠಿ ಚಿತ್ರಗೀತೆಗಳನ್ನು ಸಾಮಾನ್ಯವಾಗಿ ಹಾಡುತ್ತಿರುತ್ತಾರೆ. ಅಭಿ ಭಾರತಕ್ಕೆ ಬಂದು ಆಶಾ ಮಂಗೇಶ್ಕರ್, ಸುರೇಶ್ ವಾಡ್ಕರ್, ಸುಧಾ ರಘುನಾಥನ್ ಮತ್ತು ಮಂಗ್ಲಿ, ಇಂದ್ರಾವತಿ, ಐಶ್ವರ್ಯ ಮಜುಂದಾರ್ ಹೀಗೆ ಅನೇಕ ಕಲಾವಿದರೊಂದಿಗೆ ಪ್ರಾಜೆಕ್ಟ್ನಲ್ಲಿ ಭಾಗಿಯಾಗುತ್ತಿರುತ್ತಾರೆ. ರೀಲ್ಸ್ ಕೂಡ ಮಾಡುತ್ತಿರುತ್ತಾರೆ.
View this post on Instagram
ಆಗಾಗ ಇವರು ಪೋಲ್ ಸೃಷ್ಟಿಸುವುದುಂಟು. ಶಾಪಿಂಗ್ಗೆ ಬಂದಿದ್ದೇನೆ ಯಾವ ಕುರ್ತಾ ತೆಗೆದುಕೊಳ್ಳಲಿ? ಯಾವ ಹೇರ್ಸ್ಟೈಲ್ ನನಗೆ ಒಪ್ಪುತ್ತದೆ? ಹೀಗೆ ಅಭಿಮಾನಿಗಳ ಸಲಹೆಯನ್ನು ಆಗಾಗ ಕೇಳುತ್ತಿರುತ್ತಾರೆ. ಒಮ್ಮೆ ಇವರ ಹಾಡು ಕೇಳಿದವರು ಮತ್ತೆ ಮತ್ತೆ ಕೇಳುವಲ್ಲಿ ಅನುಮಾನವೇ ಇಲ್ಲ. ಜೇನಿನಲ್ಲಿ ಅದ್ದಿದಂಥ ಕಂಠಮಾಧುರ್ಯ, ಗುಂಗು ಹಿಡಿಸಿಯೇ ಬಿಡುತ್ತದೆ. ಅಂತರಾ ನಂದಿ ಮತ್ತು ಅಂಕಿತಾ ನಂದಿ ಎಂಬ ಅಕ್ಕತಂಗಿಯರೊಂದಿಗೂ ಇವರು ಮಾಡಿದ ರೀಲ್ಸ್ ಸೂಪರ್ ಹಿಟ್.
View this post on Instagram
ಇತ್ತ ಕರ್ನಾಟಕ, ಹಿಂದೂಸ್ತಾನಿ, ರ್ಯಾಪ್, ಪಾಪ್ ಯಾವ ಸಂಗೀತಕ್ಕೂ ತಮ್ಮ ಕಂಠವನ್ನು ಒಗ್ಗಿಸಿಕೊಳ್ಳುವ ಕಲೆ ಅಭಿಗೆ ಕರಗತವಾಗಿದೆ. ಶ್ರದ್ದಾವಂತ ವಿದ್ಯಾರ್ಥಿಯ ಕಳೆ ಇವರ ಮೊಗದಲ್ಲಿದೆ. ಎಂಥ ಕಠಿಣವಾದ ಹಾಡನ್ನೂ ಲೀಲಾಜಾಲವಾಗಿ ಪ್ರಸ್ತುಪಡಿಸುವ ಇವರ ಶೈಲಿ ಅಮೋಘ. ಹಿಂದಿಯ ಮೆಹನತ್ ಎಂಬ ಪದಕ್ಕೆ ಅನ್ವರ್ಥನಾಮ ಅಭಿ. ಭಾರತೀಯ ಯುವಗಾಯಕಿಯರಂತೂ ತುದಿಗಾಲ ಮೇಲೆ ಅಭಿ ಜೊತೆ ರೀಲ್ಸ್ ಮಾಡಲು ಕಾಯುತ್ತಿರುತ್ತಾರೆ!
View this post on Instagram
ಗಾಯಕಿ ಸುಧಾ ರಘುನಾಥನ್ ಅವರೊಂದಿಗೆ ಸಂಗೀತದ ಮೂಲಕ ತಮಿಳಿನಲ್ಲಿ ಕಿರಾಣಿ ಸಾಮಾನು ಅಂಗಡಿಗೆ ಆರ್ಡರ್ ಮಾಡುವ ವಿಡಿಯೋ ಮಾತ್ರ ಬಹಳ ಅದ್ಭುತವಾಗಿದೆ. ಅಭಿ ಅವರ ಯಾವ ವಿಡಿಯೋ ಕೂಡ 1 ಲಕ್ಷ ಜನರನ್ನು ಸೆಳೆದೇ ಸೆಳೆಯುತ್ತದೆ. ದೂರದ ದೇಶದಲ್ಲಿ ಕುಳಿತು ಹಾಡುವ ಈ ಭಾರತೀಯ ಮೂಲದ ಕೋಗಿಲೆಯ ಹಾಡು ಕೇಳಬೇಕೆ? ಹಾಗಿದ್ದರೆ ಇವರ ಇನ್ಸ್ಟಾಗ್ರಾಂನ ಖಾತೆಗೆ ಆಗಾಗ ಭೇಟಿ ಕೊಡಿ.
ದಿನವೂ ಸಂಗೀತದ ದಿವ್ಯೌಷಧದಿಂದ ಪಾವನರಾಗಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:41 pm, Mon, 21 November 22