AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಹಳ ಚೆಂದ ಮೇಕಪ್​ ಮಾಡಿದ್ದೀಯಾ’ ಕಲಾವಿದೆಗೆ ಮುದ್ದಿಸಿದ ಅಜ್ಜಿಯ ವಿಡಿಯೋ ವೈರಲ್

Make up : ಈ ಅಜ್ಜಿಯ ಜೀವನೋತ್ಸಾಹ ನೋಡಿ. ಯಾರದೋ ಮದುವೆಗೆ ತಯಾರಾಗಿ ಹೊರಟಿದ್ದಾರೆ. ಅದಕ್ಕೂ ಮುನ್ನ ಮೇಕಪ್​ ಮಾಡಿಸಿಕೊಂಡಿದ್ದಾರೆ. ಭಲೇ ಖುಷಿಯಾಗಿದ್ದಾರೆ ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಂಡು.

‘ಬಹಳ ಚೆಂದ ಮೇಕಪ್​ ಮಾಡಿದ್ದೀಯಾ’ ಕಲಾವಿದೆಗೆ ಮುದ್ದಿಸಿದ ಅಜ್ಜಿಯ ವಿಡಿಯೋ ವೈರಲ್
desi Nani with makeup artist
TV9 Web
| Edited By: |

Updated on: Nov 19, 2022 | 6:11 PM

Share

Viral Video : ಯಾರಿಗೇ ಆಗಲಿ ತಾನು ಸುಂದರವಾಗಿ ಕಾಣಬೇಕೆಂಬ ಬಯಕೆ ಸಹಜವಲ್ಲವೆ? ಅಂತರಂಗವೇ ಬಹಿರಂಗದ ಪ್ರತಿಫಲನ ಎನ್ನುತ್ತೇವೆ. ನಿಜ ಅದೇ ಮಹತ್ವದ್ದು. ಆ ಅಂತರಂಗ ಶುದ್ಧಿಯಾಗಿದ್ದಾಗಲೇ ಪರರ ಶ್ರದ್ಧೆ, ಶ್ರಮವನ್ನು ಮೆಚ್ಚುವಂಥ ಔದಾರ್ಯ ಹೊಮ್ಮುತ್ತದೆ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ಅನ್ನು ಈತನಕ 1.7 ಮಿಲಿಯನ್ ಜನ ನೋಡಿದ್ದಾರೆ. ಈ ವಯಸ್ಸಾದ ಅಜ್ಜಿಗೆ ಮೇಕಅಪ್​ ಆರ್ಟಿಸ್ಟ್​ ಮೇಕಪ್ ಮಾಡುತ್ತಾರೆ. ಖುಷಿಗೊಂಡ ಅಜ್ಜಿ ಆರ್ಟಿಸ್ಟ್​ಗೆ ಮುದ್ದಿಸುತ್ತಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಅಜ್ಜಿ ತನ್ನಿಷ್ಟದಂತೆ ಅಲಂಕರಿಸಿಕೊಂಡು ಯಾವುದೋ ಪಾರ್ಟಿ ಅಥವಾ ಮದುವೆಗೆ ತಯಾರಾಗಿ ಹೊರಟಿರುವಂತೆ ಕಾಣುತ್ತಿದೆ. ಅದಕ್ಕೂ ಮುನ್ನ ಹೀಗೆ ಮೇಕಪ್​ ಮಾಡಿಸಿಕೊಳ್ಳಬೇಕು ಎನ್ನಿಸಿದೆ. ತಮ್ಮನ್ನು ತಾವೇ ಕನ್ನಡಿಯಲ್ಲಿ ನೋಡಿಕೊಂಡ ಅಜ್ಜಿಗೆ ಭಲೇ ಖುಷಿಯಾಗಿದೆ. ಆರ್ಟಿಸ್ಟ್​ನ ಕೆನ್ನೆ ಹಿಡಿದು ಮುದ್ದಿಸಿಯೇ ಬಿಟ್ಟಿದ್ಧಾರೆ! ಮೇಕಪ್​ ಆರ್ಟಿಸ್ಟ್​ ಜಾಸ್ಮೀನ್​ ಕೌರ್ ಇವರಿಗೆ ಸಹಾಯ ಮಾಡಿದ್ಧಾರೆ. ನಂತರ ಜಾಸ್ಮೀನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಈ ಅಜ್ಜಿಯ ಜೀವನೋತ್ಸಾಹವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ನನಗೂ ಇಂಥ ಮುದ್ದಾದ ಲವಲವಿಕೆಯ ಅಜ್ಜಿ ಇರಬೇಕಿತ್ತು ಅನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ಈ ವಯಸ್ಸಿನಲ್ಲಿಯೂ ಅಷ್ಟು ಮಜಬೂತಾದ ಲೆಹೆಂಗಾ ತೊಟ್ಟಿರುವುದು ನೋಡಿ ಎಂದಿದ್ದಾರೆ ಕೆಲವರು. ಹೀಗಿರಬೇಕು ಅಜ್ಜಿ ಎಂದರೆ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮಗೆ ಏನು ಅನ್ನಿಸುತ್ತಿದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ