Viral Video : ಹುಟ್ಟನ್ನು ಹಬ್ಬವಾಗಿಸುವುದು ಮತ್ತು ಸೋಶಿಯಲ್ ಮೀಡಿಯಾಗೆ ವಿಡಿಯೋ ಅಪ್ಲೋಡ್ ಮಾಡುವುದು- ಯಾರಿಲ್ಲ ಹೇಳಿ ಮಾಡದವರು? ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರುವ ಬಹುತೇಕ ಮಂದಿ ಇದರಲ್ಲಿ ಒಳಗೊಳ್ಳುತ್ತಾರೆ. ತಮ್ಮದಷ್ಟೇ ಅಲ್ಲ ತಮ್ಮ ಮನೆಯ ನಾಯಿ, ಬೆಕ್ಕು, ಸಾಕುಪ್ರಾಣಿಗಳ ಹುಟ್ಟುಹಬ್ಬದ ವಿಡಿಯೋಗಳನ್ನೂ ಅಪ್ಲೋಡ್ ಮಾಡಿ ಖುಷಿಪಡುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಥಾಣೆಯ ಗಣೇಶ ಬಿಲ್ಡಿಂಗ್ನ ಮಕ್ಕಳು ಫಡ್ಜ್ ಎಂಬ ನಾಯಿಯ ಒಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಇದು ಒಬ್ಬರ ಮನೆಯ ನಾಯಿಯಲ್ಲ. ಇಡೀ ಬಿಲ್ಡಿಂಗ್ನ ನಾಯಿ.
View this post on Instagram
ಇದು ಇಡೀ ಬಿಲ್ಡಿಂಗಿನವರ ಪ್ರೀತಿ ಗಳಿಸಿದ ನಾಯಿಮ ಫಡ್ಜ್. ಎಲ್ಲರನ್ನೂ ವಿಶ್ವಾಸದಿಂದ ಪ್ರೀತಿಯಿಂದ ಮಾತನಾಡಿಸುವ ಜೀವ. ಇದಕ್ಕೂ ಒಂದು ದಿನವಾದರೂ ಖುಷಿಪಡಿಸಬೇಕಲ್ಲವೆ ಎಂದು ಮಕ್ಕಳು ಯೋಚಿಸಿದ್ದಾರೆ. ಅದರ ಹುಟ್ಟುಹಬ್ಬಕ್ಕೆ ಏರ್ಪಾಡನ್ನೂ ಮಾಡಿಕೊಂಡಿದ್ದಾರೆ. ಬಿಲ್ಡಿಂಗ್ನ ಹಿರಿಯರಾದ ಚವ್ಹಾಣ ಅವರ ನೇತೃತ್ವದಲ್ಲಿ ಫಡ್ಜ್ನ ಹುಟ್ಟುಹಬ್ಬ ಆಚರಿಸಲಾಗಿದೆ.
ಅದಕ್ಕೆಂದೇ ಕೇಕ್ ತರಲಾಗಿದೆ. ಹೊಸ ನೀರಿನ ಬಟ್ಟಲನ್ನು ಗಿಫ್ಟ್ ಕೊಡಲಾಗಿದೆ. ಸೆಕೆಂಡ್ ಹ್ಯಾಂಡ್ ಬೆಡ್ ಕೊಡಲಾಗಿದೆ. ಆದರೆ ಮರುದಿನವೇ ಅದನ್ನು ಫಡ್ಜ್ ಕಚ್ಚಿಬಿಟ್ಟ ಎನ್ನುವುದು ಬೇರೆ ಮಾತು. ಫಡ್ಜ್ನಿಗೆ ಇಡೀ ಬಿಲ್ಡಿಂಗ್ನಲ್ಲಿ ವಾಸಿಸುವ ಜನ ಪ್ರೀತಿ ತೋರಿಸುತ್ತಾರೆ. ಲಸಿಕೆಯನ್ನು ಹಾಕಿಸುತ್ತಾರೆ. ಅವನಿಗೆ ಸ್ನಾನ ಮಾಡಿಸಿ ಶುಚಿಯಾಗಿರುವಂತೆ ನೋಡಿಕೊಳ್ಳುತ್ತಾರೆ.
ಕೇಕ್ ನೋಡುತ್ತಿದ್ದಂತೆ ಫಡ್ಜ್ಗೆ ಬಾಯಲ್ಲಿ ನೀರೂರಿದೆ. ಮಕ್ಕಳು ತಿನ್ನು ಮಗಾ ತಿನ್ನು ಎಂದು ಕೊಟ್ಟಿದ್ದಾರೆ. ಎಂಥ ಮುದ್ದಾದ ವಿಡಿಯೋ ಇದಲ್ವಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ