AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮನ ಮಡಿಲು ಸೇರಿದ ಮರಿಚಿಂಪಾಜಿ; ನೆಟ್ಟಿಗರ ಹೃದಯ ಕರಗಿಸುತ್ತಿದೆ ಈ ವಿಡಿಯೋ

Reunion : ಉಸಿರಾಟದ ತೊಂದರೆಯಿಂದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಬಳಿಕ ಅಮ್ಮ ಮಗುವಿನ ಬಳಿ ಬಂದಾಗ ಮಗು ಕೈ ಎತ್ತಿದ್ದು, ಅಮ್ಮ ಅದನ್ನು ಅಪ್ಪಿದ್ದು... ಎಂಥ ಅನುಭೂತಿ ಇದು!

ಅಮ್ಮನ ಮಡಿಲು ಸೇರಿದ ಮರಿಚಿಂಪಾಜಿ; ನೆಟ್ಟಿಗರ ಹೃದಯ ಕರಗಿಸುತ್ತಿದೆ ಈ ವಿಡಿಯೋ
Reunion of a chimp and her new born baby.
TV9 Web
| Edited By: |

Updated on:Nov 19, 2022 | 12:58 PM

Share

Viral Video : ಕಾನ್ಸಸ್‌ನ ವಿಚಿತಾದಲ್ಲಿರುವ ಸೆಡ್ಗ್‌ವಿಕ್ ಕೌಂಟಿ ಮೃಗಾಲಯದಲ್ಲಿ ಈ ಹೃದಯಸ್ಪರ್ಶಿಯಾದ ಘಟನೆ ನಡೆದಿದೆ. ಹೆತ್ತಮೇಲೆ ಮಗು ಅಮ್ಮನ ಮಡಿಲಲ್ಲೇ ಇರಬೇಕಲ್ಲ? ಅಷ್ಟು ವರ್ಷ ಅದರ ಒಡಲಲ್ಲಿ ಬೆಚ್ಚಗಿದ್ದ ಕೂಸಿಗೆ ಇದ್ದಕ್ಕಿದ್ದ ಹಾಗೆ ಜಗತ್ತಿಗೆ ಬಂದಮೇಲೆಯೂ ಅಮ್ಮನ ಮಡಿಲು ಬೇಕೇಬೇಕು. ಹಾಗೇ ತಾಯಿಯೂ ಮಗುವನ್ನು ಬಿಟ್ಟು ಅರೆಗಳಿಗೆ ಇರಲಾರಳು. ಆದರೆ ತಾಯಿಚಿಂಪಾಂಜಿಗೆ ಇಲ್ಲಿ ಸಿ ಸೆಕ್ಷನ್​ ಮೂಲಕ ಹೆರಿಗೆ ಮಾಡಿಸಲಾಗಿದೆ. ಹುಟ್ಟಿದ ತಕ್ಷಣ ಮಗುವಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ. ಹಾಗಾಗಿ ಎರಡು ದಿನಗಳ ಕಾಲ ವೈದ್ಯರ ನಿಗಾದಲ್ಲಿ ಇರಬೇಕಾದ ಅನಿವಾರ್ಯತೆ ಉಂಟಾಗಿದೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Sedgwick County Zoo (@sedgwickcountyzoo)

ಎರಡು ದಿನಗಳ ಬಳಿಕ ಮಗುವಿನ ಬಳಿ ತಾಯಿ ಚಿಂಪಾಂಜಿ ಬಂದಾಗಿನ ವಿಡಿಯೋ ಇದು. ಒಂದು ಕ್ಷಣ ಸುಮ್ಮನೇ ನಿಲ್ಲುತ್ತದೆ ತಾಯಿಚಿಂಪಾಂಜಿ. ಮಗುಚಿಂಪಾಂಜಿಗೆ ತನ್ನ ತಾಯಿ ಎಂದು ತಿಳಿದ ತಕ್ಷಣವೇ ಕೈ ಎತ್ತುತ್ತದೆ. ಅಪ್ಪಿಕೊಂಡು ಮುದ್ದಾಡುತ್ತದೆ ತಾಯಿಚಿಂಪಾಂಜಿ. ಎಂಥ ಮಧುರ ಘಳಿಗೆಗಳು ಅಲ್ಲವಾ?

ಈ ವಿಡಿಯೋ ಅನ್ನು ಈತನಕ 70,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದಕ್ಕಿಂತ ಮುದ್ದಾದ ವಿಡಿಯೋ ಮತ್ತೊಂದಿಲ್ಲ. ಪಶುವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಎಂದಿದ್ದಾರೆ ಹಲವರು.

ಇದನ್ನು ನೋಡಿ ನಾನು ದಿನವಿಡೀ ಅತ್ತಿದ್ದೇನೆ ಎಂದಿದ್ದಾರೆ ಒಬ್ಬರು. ತಾಯಿಪ್ರೀತಿಗೆ ಎಂದಾದರೂ ಕೊನೆಯುಂಟೇ ಎಂದಿದ್ದಾರೆ ಕೆಲವರು. ಆ ಬಂಧವೇ ಹಾಗಲ್ಲವಾ?

ಏನನ್ನಿಸುತ್ತಿದೆ ಇದನ್ನು ನೋಡಿದ ನಿಮಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:32 pm, Sat, 19 November 22

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್