ಹಿಮಗೋಡೆಗಳನ್ನೇರುವ ಈ ಸಾಹಸಿಯ ವಿಡಿಯೋ ವೈರಲ್

Frozen Waterfall : ಈ ವಿಡಿಯೋದಲ್ಲಿ ಜಲಪಾತವೇ ಹಿಮಗೋಡೆಯಾಗಿರುವುದನ್ನು ನೋಡಬಹುದಾಗಿದೆ. ಅಪಾಯಕಾರಿಯಾದ ಈ ಚಾರಣವನ್ನು ಎಲ್ಲರೂ ಮಾಡಲು ಸಾಧ್ಯವೇ ಇಲ್ಲ. ಆದರೆ ಈ ವ್ಯಕ್ತಿ ಇದನ್ನು ಸಾಧ್ಯವಾಗಿಸಿದ್ಧಾರೆ.

ಹಿಮಗೋಡೆಗಳನ್ನೇರುವ ಈ ಸಾಹಸಿಯ ವಿಡಿಯೋ ವೈರಲ್
Climbing inside a frozen waterfall.
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 19, 2022 | 11:40 AM

Viral Video : ಹೇಗಿದೆ ಚಳಿ? ಕಂಬಳಿ ಹೊತ್ತಕೊಂಡು ಕಾಫೀ ಹೀರಿಕೊಂಡು ವೀಕೆಂಡ್​ ಮೂಡ್​ನಲ್ಲಿದ್ದೀರಿ ಅನ್ನಿಸುತ್ತೆ. ಇದೇ ಮೂಡ್​ನಲ್ಲಿ ನೀವೀಗ ಇದನ್ನು ಓದುತ್ತಾ ಹೋಗಿ ನಿಮ್ಮೊಳಗಿನ ನಡುಕ ಮೆಲ್ಲಗೆ ಕರಗಿ ಹೋಗುತ್ತದೆ. ನಾವೂ ಯಾಕೆ ಪ್ರಕೃತಿಯೊಳಗೆ ಒಂದು ಸುತ್ತು ಹಾಕಿಬರಬಾರದು ಎನ್ನಿಸುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಹಿಮಗಟ್ಟಿದ ನೀರು ಹಿಮಗೋಡೆಗಳಾಗಿ ಪರಿವರ್ತನೆಯಾಗಿವೆ. ಸಾಹಸಿಯಾದ ಈ ವ್ಯಕ್ತಿ ಯಶಸ್ವಿಯಾಗಿ ಇದನ್ನು ಏರಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

@Plentudeopulance ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಜಲಪಾತವೇ ಹಿಮಗೋಡೆಯಾಗಿರುವುದನ್ನು ನೋಡಬಹುದಾಗಿದೆ. ಅಪಾಯಕಾರಿಯಾದ ಈ ಚಾರಣವನ್ನು ಎಲ್ಲರೂ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಈ ವ್ಯಕ್ತಿ ವಿಡಿಯೋದಲ್ಲಿ ಹಿಮಗೋಡೆಗಳನ್ನು ಝೂಮ್​ ಮಾಡಿ ತೋರಿಸುವುದನ್ನು ಗಮನಿಸಿ. ಈ ವಿಡಿಯೋ ಸುಮಾರು 10,000 ಅಪ್​ವೋಟ್​ ಗಳಿಸಿದೆ.

ಈ ಮನುಷ್ಯ ತನ್ನ ಜೀವನದ ಅತ್ಯಂತ ಸಂತೋಷಕರ ಘಳಿಗೆಗಳನ್ನು ಅನುಭವಿಸುತ್ತಿದ್ದಾನೆ ಎಂದಿದ್ಧಾರೆ ನೆಟ್ಟಿಗರು. ಈ ಋತುವಿನಲ್ಲಿ ಈ ಹಿಮಗೋಡೆಗಳು ಗಟ್ಟಿಯಾಗಿರುತ್ತವೆ. ನಾನು ಕೂಡ ಈ ಹಿಂದೆ ಚಾರಣ ಮಾಡಲು ಪ್ರಯತ್ನಿಸಿದೆ. ಆದರೆ ನನ್ನ ಜೀವನದ ಅತ್ಯಂತ ಭಯಾನಕ ಅನುಭವ ಅದಾಗಿತ್ತು ಎಂದಿದ್ದಾರೆ ಇನ್ನೊಬ್ಬರು.

ಮನುಷ್ಯನಿಗೆ ಪ್ರಕೃತಿಯಲ್ಲಿ ದಕ್ಕುವ ಎಲ್ಲ ಬಗೆಯ ಅನುಭವಗಳೂ ಬೇಕು. ಆದರೆ ಅವುಗಳನ್ನು ದಕ್ಕಿಸಿಕೊಳ್ಳಲು ನಾವು ಪ್ರಯಾಣಿಸಲೇಬೇಕು. ಇಲ್ಲದೇ ಹೋದಲ್ಲಿ ಯಾಂತ್ರಿಕ ಬದುಕಿನಲ್ಲಿ ಕಳೆದು ಹೋಗುತ್ತೇವೆ.

ಏನಂತೀರಿ ಓದುಗರೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:59 am, Sat, 19 November 22