Optical Illusion : 15 ಸೆಕೆಂಡುಗಳಲ್ಲಿ ಕೋಳಿಮರಿ ಹುಡುಕಿ ಕೊಡುವಿರಾ? ಅಮ್ಮಕೋಳಿ ಬಹಳ ಬೇಜಾರಿನಲ್ಲಿದೆ
Brain Activity : ಈಗಷ್ಟೇ ಇಲ್ಲೇ ಆಡಿಕೊಂಡಿತ್ತಲ್ಲ, ಎಲ್ಲಿ ಹೋಯಿತೋ? ನೀವೇನಾದರೂ ಕಂಡಿರಾ ನನ್ನ ಮರಿಯನ್ನು? ಪುಟ್ಟಮರಿಯದು ನನಗೆ ಭಯವಾಗುತ್ತಿದೆ ಎಂದು ಅಮ್ಮಕೋಳಿ ಚಪಡಿಸುತ್ತಿದೆ. ಸಹಾಯ ಮಾಡಿ ಹುಡುಕಿಕೊಡಲು.
Viral Video : ಕೋಳಿಮರಿಯೊಂದು ಕಳೆದು ಹೋಗಿದೆ. ಅಮ್ಮಕೋಳಿ ಅದನ್ನು ಬಹಳ ಹೊತ್ತಿನಿಂದ ಹುಡುಕಾಡುತ್ತಿದೆ. ನೀವು ಈಗಾಗಲೇ ಚುರುಕುಗಣ್ಣಿನವರು ಎನ್ನುವುದನ್ನು ಸಾಬೀತು ಮಾಡುತ್ತ ಹೊರಟಿದ್ದೀರಿ ಅಲ್ಲವೆ? ಪ್ರತೀ ಆಪ್ಟಿಕಲ್ ಇಲ್ಲ್ಯೂಷನ್ ಸವಾಲುಗಳನ್ನು ಕೊಟ್ಟಾಗೆಲ್ಲ. ಹಾಗಾಗಿ ನೀವೇ ಈ ಅಮ್ಮಕೋಳಿಗೆ ಸಹಾಯ ಮಾಡಬೇಕು. ಗಮನಿಸಿ ಇಲ್ಲಿ ಎಷ್ಟೊಂದು ಪ್ರಾಣಿ ಪಕ್ಷಿಗಳೆಲ್ಲ ಇವೆ. ಈ ಪರಿ ಸಂತೆಯಲ್ಲಿಯೂ ನೀವು ಖಂಡಿತ ಹುಡುಕುತ್ತೀರಿ ಎಂಬ ಭರವಸೆ ನಮಗಿದೆ.
ಇಂಥ ಚಿತ್ರಗಳು ನಿಮ್ಮ ಗ್ರಹಿಕೆಯ ಮಟ್ಟ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಪರೀಕ್ಷಿಸುವಂಥವಾಗಿರುತ್ತವೆ. ಈಗ ಈ ಚಿತ್ರದಲ್ಲಿ ತಾಯಿಕೋಳಿಯಿಂದ ಮರಿಯೊಂದು ಬೇರ್ಪಟ್ಟಿದೆ. ಅದು ಎಲ್ಲಿಯೂ ಹೋಗಿಲ್ಲ. ಇಲ್ಲೇ ಈ ಪ್ರಾಣಿ ಪಕ್ಷಿಗಳ ಜಂಗುಳಿಯಲ್ಲಿಯೇ ಕಳೆದು ಹೋಗಿದೆ. ಎಲ್ಲ ಪ್ರಾಣಿಗಳೂ ಅದನ್ನು ಹುಡುಕುತ್ತಿವೆ. ಚಿಂತಾಕ್ರಾಂತವೂ ಆಗಿವೆ. ಒಂದೊಂದು ಪ್ರಾಣಿಯ ಮುಖವನ್ನು ಗಮನಿಸಿದರೆ ನಿಮಗಿದು ಅರಿವಿಗೆ ಬರುತ್ತದೆ.
ಇದನ್ನೂ ಓದಿ : Optical Illusion : 11 ಸೆಕೆಂಡುಗಳಲ್ಲಿ ಮೇಷ್ಟ್ರ ಕನ್ನಡಕ ಹುಡುಕಿ ಕೊಡಿ
ಈಗ ಈ ಜಮೀನಿನ ಮಾಲೀಕ ಬಂದು ಎಲ್ಲ ಪ್ರಾಣಿ ಪಕ್ಷಿಗಳನ್ನು ಎಣಿಸುತ್ತಾನೆ. ಆಗ ಅವನಿಗೆ ಏನು ಉತ್ತರ ಹೇಳುವುದು ಎಂದು ಇಲ್ಲಿರುವ ಎಲ್ಲವೂ ಜೋಲುಮುಖ ಮಾಡಿ ಕುಳಿತಿವೆ. ಹಾಗಾಗಿ ನೀವು ಸಹಾಯ ಮಾಡಬಹುದೆ?
ಇಷ್ಟೊತ್ತಾದರೂ ನಿಮಗೆ ಸಿಗಲಿಲ್ಲವೆಂದ ಮೇಲೆ ಸುಳಿವು ಕೊಡುವುದೇ ವಾಸಿ. ಚಿತ್ರದ ಎಡಗಡೆಗೆ ಗಮನಿಸಿ. ಒಂದು ನಾಯಿಮನೆ ಇದೆ. ಬಾಗಿಲಲ್ಲಿ ನಾಯಿ ತನ್ನ ಮರಿಯೊಂದಿಗೆ ಕುಳಿತಿದೆ. ಆ ನಾಯಿಯ ಬಲಗಾಲಿನ ಬಳಿ ಮುದುಡಿಕೊಂಡು ಕೋಳಿಮರಿ ಕುಳಿತಿದೆ.
ಕಂಡಿತಲ್ಲವೆ ಮರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ