ನಾಯಕನಾಯಿ; ಹಿಮಪ್ರದೇಶದಲ್ಲಿ ಹಸುಗಳಿಗೆ ದಾರಿ ಮಾಡಿಕೊಡುತ್ತಿರುವ ನಾಯಿಯ ವಿಡಿಯೋ ವೈರಲ್

TV9kannada Web Team

TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad

Updated on: Nov 19, 2022 | 5:27 PM

Dog : ನಮ್ಮ ದೇಶಕ್ಕೆ ಹೀಗೆ ಸ್ವತಃ ಚಲಿಸಿ ದಾರಿಯನ್ನು ತೆರೆದು ಕೊಡುವವರು ಬೇಕು, ನಿಷ್ಠೆ ಮತ್ತು ಸಹಾಯಕ್ಕೆ ಹೆಸರುವಾಸಿಯಾಗಿರುವ ಈ ನಾಯಿಯಂಥ ನಾಯಕರು ನಮಗೆ ಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ನೋಡಿ ವಿಡಿಯೋ.

ನಾಯಕನಾಯಿ; ಹಿಮಪ್ರದೇಶದಲ್ಲಿ ಹಸುಗಳಿಗೆ ದಾರಿ ಮಾಡಿಕೊಡುತ್ತಿರುವ ನಾಯಿಯ ವಿಡಿಯೋ ವೈರಲ್
A Dog Making Way For A Herd Of Cattle In Snow watch viral video

Viral Video : ಈಗಾದರೂ ಒಪ್ಪುತ್ತೀರಾ? ನಿಮಗಿಂತ ಪ್ರಾಣಿಗಳೇ ಹೆಚ್ಚು ಸಂವೇದನೆಯುಳ್ಳಂಥವು ಅಂತ. ನೋಡಿ ಹಿಮಪ್ರದೇಶದಲ್ಲಿ ನಾಯಿಯೊಂದು ಹಸುಗಳ ಹಿಂಡಿಗೆ ದಾರಿ ಮಾಡಿಕೊಡುತ್ತಿದೆ. ನಾಯಿಯನ್ನು ಈ ಹಿಂಡು ಎಂಥ ವಿಧೇಯತೆಯಿಂದ ಹಿಂಬಾಲಿಸುತ್ತಿದೆ ನೋಡಿ. ಈ ವಿಡಿಯೋ ಅನ್ನು ಜಾರ್ಖಂಡ್​ನ ಜಿಲ್ಲಾಧಿಕಾರಿ ಸಂಜಯ್​ ಕುಮಾರ್ ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಈ ಮುದ್ದಾದ ವಿಡಿಯೋ ಅನ್ನು ಕೊಂಡಾಡುತ್ತಿದ್ದಾರೆ.

ತಾಜಾ ಸುದ್ದಿ

ನಾಯಕ ಎನ್ನಿಸಿಕೊಂಡವನು ಇನ್ನೊಬ್ಬರಿಗಾಗಿ ದಾರಿಯನ್ನು ತೆರೆಯುತ್ತಾನೆ, ಅದು ಚಿಕ್ಕದೇ ಆಗಿರಲಿ ದೊಡ್ಡದೇ ಆಗಿರಲಿ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಪೋಸ್ಟ್​ ಮಾಡಲಾಗಿದೆ. ಎಂಥ ಅರ್ಥಪೂರ್ಣವಾಗಿದೆಯಲ್ಲವೆ? ಈತನಕ ಸುಮಾರು 60,000 ಜನರು ಈ ವಿಡಿಯೋ ನೋಡಿದ್ದಾರೆ. ನಿಜಕ್ಕೂ ಇದು ನಾಯಕತ್ವಕ್ಕೆ ಒಳ್ಳೆಯ ಉದಾಹರಣೆ ಎಂದಿದ್ದಾರೆ ನೆಟ್ಟಿಗರು. ನಾನು ಇಂದು ನೋಡಿದ ವಿಡಿಯೋಗಳಲ್ಲಿ ಇದು ಅತ್ಯಂತ ನೈಜ ಮತ್ತು ಅದ್ಭುತವಾದದ್ದು ಎಂದಿದ್ದಾರೆ ಕೆಲವರು. ನಾಯಿಯ ಸಹಾಯಗುಣ, ನಿಷ್ಠೆ ವಿವರಿಸಲಸಾಧ್ಯ ಎಂದಿದ್ದಾರೆ ಒಬ್ಬರು.

ನಮ್ಮ ದೇಶಕ್ಕೆ ಹೀಗೆ ಸ್ವತಃ ತೊಡಗಿಕೊಳ್ಳುವ, ಜನರೊಂದಿಗೆ ಒಳಗೊಳ್ಳುವ ನಾಯಕರು ಬೇಕಿದ್ದಾರೆ ಎನ್ನುತ್ತಿದ್ಧಾರೆ ನೆಟ್ಟಿಗರು. ನಿಜವಾದ ನಾಯಕರಿಗೆ ಆಪತ್ತು, ಅಪಾಯ, ಸವಾಲನ್ನು ಎದುರಿಸುವ ಚಾಣಾಕ್ಷತೆ ಇರುತ್ತದೆ ಜೊತೆಗೆ ತನ್ನೊಂದಿಗಿರುವವರಿಗೆ ಸಹಾಯ ಮಾಡುವ ಗುಣವೂ ಇರುತ್ತದೆ ಎನ್ನುವುದನ್ನು ನೀವು ನಂಬುತ್ತೀರಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada