Viral Video : ಕಾಂತಾರ ಸಿನೆಮಾದ ಬಗ್ಗೆ ವಾದವಿವಾದಗಳು ಏನೇ ಇರಲಿ, ಮಕ್ಕಳಿಗಂತೂ ಈ ಸಿನೆಮಾ ಮತ್ತೆ ಮತ್ತೆ ನೋಡಬೇಕು ಎನ್ನುವಷ್ಟು ಹುಚ್ಚು ಹಿಡಿಸಿದೆ. ಅಷ್ಟೇ ಅಲ್ಲ ಹಾಡುಗಳು ಗುಂಗು ಹಿಡಿಸಿವೆ. ಕೋಲವನ್ನು ಒಮ್ಮೆ ಪ್ರತ್ಯಕ್ಷವಾಗಿ ನೋಡಬೇಕು ಎಂಬ ಇರಾದೆಯನ್ನು ಮಕ್ಕಳು ವ್ಯಕ್ತಪಡಿಸುತ್ತಿವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಆರ್ಯಾ ಸಿಂಚನಾ ಎಂಬ ಪುಟ್ಟಿ ಸಿಂಗಾರ ಸಿರಿಯೇ ಹಾಡನ್ನು ತನ್ನ ಅಮ್ಮನೊಂದಿಗೆ ಹಾಡಿದ್ದಾಳೆ. ಹಾಡ್ತಾ ಹಾಡ್ತಾ ಅವಳ ಹಾವಭಾವವನ್ನು ನೋಡಿ…
View this post on Instagram
‘ಹ್ವಾಯ್ ಇಗಣಿಯೇ, ಇಲ್ಲಿ ಕೇಣಿ. ಎಲ್ಲಾರು ಕಾಂತರ ಸಿನಿಮಾ ಕಂಡ್ರಿಯಾ. ಸೂಪರ್ ಇತ್ತಲ್ಲಾ? ನಂಗೆ ಈ ಸಿನೆಮಾದ ಎಲ್ಲಾ ಪದ್ಯ ಭಯಂಕರ ಇಷ್ಟ. ಸಿಂಗಾರ ಸಿರಿಯೆ ಹಾಡು ಸ್ವಲ್ಪ ಕಲ್ತಿದೆ. ನಾನು ಅಮ್ಮ ಇಬ್ರು ಒಂಚೂರು ಹಾಡಿದ್ವಿ ಕಾಣಿ. ಈ ವಿಡಿಯೋ ನೋಡಿ ಹೆಂಗುಂಟು ಅಂತ ಹೇಳಗು ಆಯ್ತಾ? ನೆಂಪಿರ್ಲಿ.. ಮರೆಯದೆ ಕುಂದಾಪುರ ಕನ್ನಡ ಅಷ್ಟು ಸರಿಯಾಗಿ ಗೊತ್ತಿಲ್ಲ ಆಯ್ತಾ. ಕಾಂಬ.. ಸಿಗ್ತೇ’ ಎಂಬ ನೋಟ್ನೊಂದಿಗೆ ಆರ್ಯಾಳ ಅಮ್ಮ ಪೋಸ್ಟ್ ಮಾಡಿದ್ದಾರೆ.
ಈ ತನಕ 2 ಮಿಲಿಯನ್ ಜನರು ಈ ವಿಡಿಯೋ ನೋಡಿದ್ಧಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ಅಂದಹಾಗೆ ಕೆಲ ದಿನಗಳ ಹಿಂದೆ ಈ ಪುಟ್ಟಿ ತನ್ನ ಅಜ್ಜ ಅಜ್ಜಿಗೆ ಸಂಗೀತ ಪಾಠ ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದನ್ನೂ ನೋಡಿ ಇಲ್ಲಿ…
View this post on Instagram
ಒಟ್ಟಿನಲ್ಲಿ ಇಷ್ಟೇ. ನಾವು ಮಕ್ಕಳಿಗೆ ಎಂಥ ವಾತಾವರಣ ಕಟ್ಟಿಕೊಡುತ್ತೇವೋ ಅವುಗಳು ಅದರಲ್ಲಿಯೇ ಆಸಕ್ತಿ ಬೆಳೆಸಿಕೊಳ್ಳುತ್ತವೆ. ಒಳ್ಳೆಯ ವಾತಾವರಣ ಕಟ್ಟಿಕೊಡಬೇಕೆಂದರೆ ಪೋಷಕರು ಕೆಲ ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ. ಕೆಲ ಆದ್ಯತೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.
ಇನ್ನು ಪ್ರತಿಭೆ ಇದ್ದು, ಪರಿಶ್ರಮವಿರದಿದ್ದರೆ ಮಾತ್ರ ಕಲೆಯ ತೆಕ್ಕೆಗೆ ನಾವು ತೆರೆದುಕೊಳ್ಳಬಹುದು. ಇಂದು ಸಾಕಷ್ಟು ಅವಕಾಶಗಳಿವೆ ಕಲಿಕೆಗೆ. ನಿಮ್ಮ ಮನೆಯ ಮಕ್ಕಳಿಗೆ ಸ್ವಲ್ಪಾದರೂ ಸಂಗೀತದ ರುಚಿ ತೋರಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ