20ನೇ ಶತಮಾನದ ಶ್ರೇಷ್ಠ ನಕ್ಷಾಪ್ರವೀಣೆ ಮೇರಿ ಥಾರ್ಪ್​ಗೆ ‘ಗೂಗಲ್ ಡೂಡಲ್’ ಗೌರವ

Marie Tharp : ಸಾಗರ ವಿಜ್ಞಾನ, ಭೂವಿಜ್ಞಾನ ಕ್ಷೇತ್ರಗಳ ಪ್ರಾಬಲ್ಯ ಹೊಂದಿದ್ದು ಪುರುಷ ಜಗತ್ತೇ. ಆದರೆ ಇಂಥ ಚಕ್ರವ್ಯೂಹವನ್ನು ಹೊಕ್ಕು ಮಹಿಳೆಯರಿಗೆ ಅವಕಾಶಗಳ ಹೆಬ್ಬಾಗಿಲು ತೆರೆದ ಕೀರ್ತಿ ಮೇರಿ ಥಾರ್ಪ್‌ ಅವರಿಗೆ ಸಲ್ಲುತ್ತದೆ.

20ನೇ ಶತಮಾನದ ಶ್ರೇಷ್ಠ ನಕ್ಷಾಪ್ರವೀಣೆ ಮೇರಿ ಥಾರ್ಪ್​ಗೆ ‘ಗೂಗಲ್ ಡೂಡಲ್’ ಗೌರವ
ವಿಜ್ಞಾನಿ ಮೇರಿ ಥಾರ್ಪ್​ ಗೂಗಲ್ ಡೂಡಲ್​
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 21, 2022 | 11:20 AM

Viral Video : ಅಮೆರಿಕದ ಭೂವಿಜ್ಞಾನಿ ಮತ್ತು ಸಮುದ್ರಶಾಸ್ತ್ರದ ಕಾರ್ಟೋಗ್ರಾಫರ್ ಮೇರಿ ಥಾರ್ಪ್​. ಕಾಂಟಿನೆಂಟಲ್​ ಡ್ರಿಫ್ಟ್​ ಥಿಯರಿಗಳನ್ನು ಸಾಬೀತುಪಡಿಸುವಲ್ಲಿ ಇವರ ಪಾತ್ರ ಮಹತ್ವ. 1998ರ ನವೆಂಬರ್ 21ರಂದು ಲೈಬ್ರರಿ ಆಫ್​ ಕಾಂಗ್ರೆಸ್​ ಇವರನ್ನು 20ನೇ ಶತಮಾನದ ಶ್ರೇಷ್ಠ ಕಾರ್ಟೋಗ್ರಾಫರ್​ಗಳಲ್ಲಿ (ನಕ್ಷಾ ತಜ್ಞೆ) ಒಬ್ಬರೆಂದು ಗುರುತಿಸಿತು. ಈ ಪ್ರಯುಕ್ತ ಗೂಗಲ್​ ಡೂಡಲ್​ ಮೂಲಕ ಇವರ ಜೀವಮಾನ ಸಾಧನೆಯನ್ನು ಗೂಗಲ್​ ಗೌರವಿಸಿ ಸಂಭ್ರಮಿಸುತ್ತಿದೆ.

ಮೇರಿ ಥಾರ್ಪ್​ ಅವರ ಈ ಡೂಡಲ್​ ಅನ್ನು ಕೈಟ್ಲಿನ್ ಲಾರ್ಸೆನ್, ರೆಬೆಕಾ ನೆಸೆಲ್ ಮತ್ತು ಡಾ ಟಿಯಾರಾ ಮೂರ್ ನಿರೂಪಿಸಿದ್ದಾರೆ. ಸಾಗರ ವಿಜ್ಞಾನ ಮತ್ತು ಭೂವಿಜ್ಞಾನದ ಸಂಶೋಧನೆಗಳ ಪ್ರಾಬಲ್ಯ ಹೊಂದಿದ್ದು ಪುರುಷ ಜಗತ್ತೇ. ಆದರೆ ಇಂಥ ಚಕ್ರವ್ಯೂಹವನ್ನು ಹೊಕ್ಕು ಮಹಿಳೆಯರಿಗೆ ಅವಕಾಶಗಳ ಹೆಬ್ಬಾಗಿಲು ತೆರೆದ ಕೀರ್ತಿ ಮೇರಿ ಥಾರ್ಪ್‌ ಅವರಿಗೆ ಸಲ್ಲುತ್ತದೆ.

ಮೇರಿ 1920ರ ಜುಲೈ 30ರಂದು ಮಿಚಿಗನ್​ನ ಯಪ್ಸಿಲಾಂಟಿಯಲ್ಲಿ ಜನಿಸಿದರು. ಅಮೆರಿಕದ ಕೃಷಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರ ತಂದೆ ನಕ್ಷೆ ರೂಪಿಸುವ ಕುರಿತು ಬಾಲ್ಯದಲ್ಲಿಯೇ ಆಸಕ್ತಿ ಮೂಡಿಸಿ ಮಾರ್ಗದರ್ಶನ ಮಾಡಿದರು.

ನಂತರ ಮೇರಿ ಮಿಚಿಗನ್​ ವಿಶ್ವವಿದ್ಯಾನಿಲಯದಲ್ಲಿ ಪೆಟ್ರೋಲಿಯಂ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಈ ಸಮಯದಲ್ಲಿಯೇ ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಮಹಿಳೆಯರಿಗೆ ಸಂಶೋಧನೆ ನಡೆಸಲು ಅವಕಾಶ ದೊರೆಯಿತು. ನಂತರ ಮೇರಿ 1948 ರಲ್ಲಿ ನ್ಯೂಯಾರ್ಕ್​ನಲ್ಲಿ ಲ್ಯಾಮೊಂಟ್ ಜಿಯೋಲಾಜಿಕಲ್ ಅಬ್ಸರ್ವೇಟರಿಗೆ ಸೇರಿದರು. ಇಲ್ಲಿ ಕೆಲಸ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಈ ಸಂದರ್ಭದಲ್ಲಿಯೇ ಭೂವಿಜ್ಞಾನಿ ಬ್ರೂಸ್ ಹೀಜೆನ್ ಅವರ ಪರಿಚಯವಾಯಿತು.

1957 ರಲ್ಲಿ, ಮೇರಿ ಥಾರ್ಪ್ ಮತ್ತು ಹೀಜೆನ್ ಉತ್ತರ ಅಟ್ಲಾಂಟಿಕ್‌ ಸಾಗರದಾಳದ ನಕ್ಷೆಯನ್ನು  ತಯಾರಿಸಿ ಆ ಬಗ್ಗೆ ಸಂಶೋಧನೆ ನಡೆಸಿದರು. ಈ ಕುರಿತ ವರದಿಯನ್ನು ವಿಶ್ವದ ಮೊದಲ ವಿಶ್ವ ನಕ್ಷೆ – ದಿ ವರ್ಲ್ಡ್ ಓಷನ್ ಫ್ಲೋರ್ ಎಂಬ ಶೀರ್ಷಿಕೆಯಲ್ಲಿ ನ್ಯಾಷನಲ್​ ಜಿಯಾಗ್ರಫಿಕ್​ನಲ್ಲಿ ಪ್ರಕಟಿಸಿತು. ನಂತರ ಆ ನಕ್ಷೆಯನ್ನು 1995ರಲ್ಲಿ ಲೈಬ್ರರಿ ಆಫ್​ ಕಾಂಗ್ರೆಸ್​ ಗೆ ಮೇರಿ ಒಪ್ಪಿಸಿದರು.

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:14 am, Mon, 21 November 22

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು