Viral Story: ಅಚ್ಚರಿಯಾದರೂ ಇದು ಸತ್ಯ: ಭಾರತದ ಈ ಹಳ್ಳಿಗಳಲ್ಲಿ ಇರುವೆಗಳ ಬಾಯಲ್ಲೂ ಚಿನ್ನ..!
Viral News: ಭಾರತದ ಒಂದು ಊರಿನಲ್ಲಿ ಇರುವೆಗಳ ಬಾಯಲ್ಲೂ ಚಿನ್ನ ಎಂದರೆ ಅಚ್ಚರಿಯಾಗದೇ ಇರದು. ಅಚ್ಚರಿಯಾದರೂ ಇದು ಸತ್ಯ.
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಬೆಲೆ ಎಷ್ಟು? ಎಂದು ಕೇಳಿದರೆ ಥಟ್ಟನೆ ಉತ್ತರವಂತು ಹೇಳಲಾಗುವುದಿಲ್ಲ. ಏಕೆಂದರೆ ಭಾರತದಲ್ಲಿ ಚಿನ್ನದ ಬೇಡಿಕೆಗೆ ಅನುಗುಣವಾಗಿ ಪ್ರತಿದಿನ ಬೆಲೆಯಲ್ಲೂ ವ್ಯತ್ಯಾಸ ಆಗುತ್ತಿರುತ್ತದೆ. ಇದಾಗ್ಯೂ ಜೂನ್ 2ನೇ ತಾರೀಖಿನಂದು ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 5,193 ರೂ. ಅದು ಕೂಡ ಕೇವಲ 1 ಗ್ರಾಂಗೆ ಅಷ್ಟೇ. ಅಂತಹದ್ರಲ್ಲಿ ಭಾರತದ ಒಂದು ಊರಿನಲ್ಲಿ ಇರುವೆಗಳ ಬಾಯಲ್ಲೂ ಚಿನ್ನ ಎಂದರೆ ಅಚ್ಚರಿಯಾಗದೇ ಇರದು. ಅಚ್ಚರಿಯಾದರೂ ಇದು ಸತ್ಯ.
ಹೌದು, ಭಾರತದಲ್ಲಿ ಚಿನ್ನದ ನಿಕ್ಷೇಪವೊಂದು ಸಿಕ್ಕಿದೆ. ಅದು ಕೂಡ ದೂರದ ಬಿಹಾರದ ಹಳ್ಳಿ ಪ್ರದೇಶದಲ್ಲಿ. ಜಮುಯಿ ಜಿಲ್ಲೆಯ ಕರ್ಮಾತಿಯಾ, ಝಾಝಾ ಮತ್ತು ಸೋನೋ ಪ್ರದೇಶಗಳಲ್ಲಿ ಗಣಿಗಳು ಪತ್ತೆಯಾಗಿವೆ. ವಿಶೇಷ ಎಂದರೆ ದೇಶದ ಶೇ.44 ರಷ್ಟು ಚಿನ್ನದ ನಿಕ್ಷೇಪ ಈ ಪ್ರದೇಶದಲ್ಲಿದೆ. ಅಂದರೆ ದೇಶದ ಅತಿ ದೊಡ್ಡ ಚಿನ್ನದ ಗಣಿ ಬಿಹಾರದ ಪಾಲಾಗಲಿದೆ. ಈಗಾಗಲೇ ಬಿಹಾರ ಸರ್ಕಾರ ಚಿನ್ನದ ಗಣಿಗಾರಿಕೆಗೆ ಅನುಮತಿ ನೀಡಲು ನಿರ್ಧರಿಸಿದೆ.
ಈ ಬಗ್ಗೆ ಮಾತನಾಡಿರುವ ಬಿಹಾರ ರಾಜ್ಯದ ಹಿರಿಯ ಅಧಿಕಾರಿಯೊಬ್ಬರು, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಬಿಹಾರದ ಜಮುಯಿ ಜಿಲ್ಲೆಯಲ್ಲಿ ಸುಮಾರು 230 ಮಿಲಿಯನ್ ಟನ್ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಿದೆ. ಚಿನ್ನದ ಜೊತೆಗೆ ಸುಮಾರು 37.6 ಟನ್ ಖನಿಜ ಅದಿರು ಕೂಡ ಇಲ್ಲಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಮುಯಿ ಜಿಲ್ಲೆಯ ಆ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆಗೆ ಅನುಮತಿ ನೀಡಲು ನಿತೀಶ್ ಕುಮಾರ್ ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ. ಈ ಕುರಿತು ಕೇಂದ್ರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗಣಿಗಾರಿಕೆ ಕುರಿತು ಬಿಹಾರ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯೊಂದಿಗೆ ಕೇಂದ್ರ ಸಂಸ್ಥೆ ಚರ್ಚೆ ನಡೆಸಿದೆ ಎಂದು ಬಿಹಾರ ಮುಖ್ಯ ಕಾರ್ಯದರ್ಶಿ ಹರ್ಜೋತ್ ಕೌರ್ ಪಿಟಿಐಗೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳನ್ನು ಸಹ ಸಂಪರ್ಕಿಸಲಾಗಿದೆ. ಈ ಬೃಹತ್ ಚಿನ್ನದ ಗಣಿ ಅನ್ವೇಷಣೆಗೆ ಮುಂದಾಗುವ ಮುನ್ನ ಬಿಹಾರ ಸರ್ಕಾರ ಮುಂದಿನ ಒಂದು ತಿಂಗಳಲ್ಲಿ ಕೇಂದ್ರ ಏಜೆನ್ಸಿಯೊಂದಿಗೆ ಎಂಒಯುಗೆ ಸಹಿ ಹಾಕುವ ಸಾಧ್ಯತೆ ಇದೆ. ಚಿನ್ನದ ಅನ್ವೇಷಣೆಗಾಗಿ ಬಿಹಾರ ಸರ್ಕಾರವು ಆರಂಭಿಕ ಹಂತದಲ್ಲಿ ಅಥವಾ ಜಿ-3 ಮಟ್ಟದಲ್ಲಿ ಕೇಂದ್ರೀಯ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಇದು ಬಿಹಾರದಲ್ಲಿ ಚಿನ್ನದ ನಿಕ್ಷೇಪ ಇರುವ ಸುದ್ದಿಯಾದರೆ, ಇದಕ್ಕೂ ಇರುವೆಗೂ ಏನು ಸಂಬಂಧ ಎಂದು ನೀವು ಯೋಚಿಸುತ್ತಿರಬಹುದು. ಅಲ್ಲೇ ಇರುವುದು ಟ್ವಿಸ್ಟ್. ಏಕೆಂದರೆ ಈ ಚಿನ್ನದ ನಿಕ್ಷೇಪ ಪತ್ತೆಯಾಗಲು ಕಾರಣವೇ ಇರುವೆಗಳು. ಜಮುಯಿ ಜಿಲ್ಲೆಯು ಈ ಹಿಂದಿನಿಂದಲೂ ತುಂಬಾ ಫೇಮಸ್. ಏಕೆಂದರೆ ಈ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಮಾವೋವಾದಿಗಳು ಪ್ರಾಬಲ್ಯ ಹೊಂದಿದ್ದರು.
ಮಾವೋವಾದಿಗಳ ಪ್ರಾಬಲ್ಯ ಹೊಂದಿದ್ದ ಪ್ರದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳ ಓಡಾಟ ಕೂಡ ಕಡಿಮೆ. ಅಷ್ಟೇ ಯಾಕೆ ಅಲ್ಲಿನ ಕೆಂಪು ಮಣ್ಣಿನಡಿಯಲ್ಲಿ ಇಷ್ಟು ದೊಡ್ಡ ಚಿನ್ನದ ನಿಕ್ಷೇಪ ಅಡಗಿದೆ ಎಂದು ಯಾರೂ ಕೂಡ ಊಹಿಸಿರಲ್ಲ. ಆದರೆ ಈ ಪ್ರದೇಶದಲ್ಲಿ ಚಿನ್ನವಿದೆ ಎಂಬುದು 40 ವರ್ಷಗಳ ಬಳಿಕ ಗೊತ್ತಾಗಿದೆ. ಐತಿಹ್ಯಗಳ ಪ್ರಕಾರ ನಲವತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಬೃಹತ್ ಆಲದ ಮರವಿತ್ತು. ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳಲು ಇರುವೆಗಳು ಆಲದ ಮರದ ಕೆಳಗೆ ಗೂಡು ಕಟ್ಟುತ್ತಿದ್ದವು.
ಹೀಗೆ ಇರುವೆಗಳು ಭೂಮಿಯ ಒಳಗಿನಿಂದ ಮಣ್ಣನ್ನು ಎತ್ತಿ ಬೃಹತ್ ಗೂಡುಗಳನ್ನು ಕಟ್ಟುತ್ತಿದ್ದವು. ಈ ಮಣ್ಣು ಗೂಡುಗಳಲ್ಲಿ ಸಣ್ಣ ಹಳದಿ ಕಣಗಳು ಕಂಡು ಬರುತ್ತಿದ್ದವು. ಹೀಗೆ ಹೊಳೆಯುವ ಮಿಶ್ರಿತ ಗೂಡುಗಳನ್ನು ನೋಡಿದ ಜನರಲ್ಲಿ ಕುತೂಹಲ ಮೂಡಿತು. ಅದರ ಜೊತೆಗೆ ಚಿನ್ನದ ಸುದ್ದಿ ಕೂಡ ಹಬ್ಬಿತು. ಈ ಸುದ್ದಿಯ ಜಾಡು ಹಿಡಿಡು ಹೊರಟಾಗ ಸಿಕ್ಕಿದ್ದು ಚಿನ್ನದ ಗಣಿಯ ನಿಕ್ಷೇಪ. ಅಂದರೆ ಇರುವೆಗಳು ಮಣ್ಣಿನಡಿಯಿಂದ ಬಾಯಿಯಲ್ಲಿ ಚಿನ್ನದ ಕಣಗಳನ್ನು ಎತ್ತಿಕೊಂಡು ಬಂದು ಗೂಡು ಕಟ್ಟುತ್ತಿದ್ದವು. ಇದರಿಂದ ಇರುವೆ ಗೂಡುಗಳು ಹಳದಿ ಕಣಗಳಿಂದ ಹೊಳೆಯುತ್ತಿದ್ದವು. ಇದೀಗ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಜಮುಯಿ ಜಿಲ್ಲೆಯಲ್ಲಿ ಸುಮಾರು 230 ಮಿಲಿಯನ್ ಟನ್ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಿದೆ. ಅಂದರೆ ಸುಮಾರು 23 ಕೋಟಿ ಟನ್ ಚಿನ್ನದ ಗಣಿ ಇರುವೆಗಳಿಂದ ಪತ್ತೆಯಾಗಿದೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:11 pm, Thu, 2 June 22