AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಾಲಕನಿಲ್ಲದೆ ಮುಂದಕ್ಕೆ ಚಲಿಸಿ ಹಿಂದಕ್ಕೆ ಬಂದ ಸೈಕಲ್ ಆಟೋ ರಿಕ್ಷಾ! ವಿಡಿಯೋ ವೈರಲ್

ಸೈಕಲ್ ಆಟೋ ರಿಕ್ಷಾ ಒಂದು ಚಾಲಕನಿಲ್ಲದೆ ಮುಂದಕ್ಕೆ ಚಲಿಸಿ ಹಿಂದಕ್ಕೆ ಬಂದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ನೀವೂ ''ಇದೇ ಅಲ್ಲೊಂದು ಸಮಸ್ಯೆ ಇದೆ'' ಎನ್ನುವಿರಿರೇನೋ...

Viral Video: ಚಾಲಕನಿಲ್ಲದೆ ಮುಂದಕ್ಕೆ ಚಲಿಸಿ ಹಿಂದಕ್ಕೆ ಬಂದ ಸೈಕಲ್ ಆಟೋ ರಿಕ್ಷಾ! ವಿಡಿಯೋ ವೈರಲ್
ವೈರಲ್ ಆದ ಸೈಕಲ್ ಆಟೋ ರಿಕ್ಷಾ
TV9 Web
| Updated By: Rakesh Nayak Manchi|

Updated on:Jun 02, 2022 | 9:31 PM

Share

ಸಮಾಜದಲ್ಲಿ ಎಂಥೆಂಥ ಘಟನೆಗಳು, ಪವಾಡಗಳು ನಡೆಯುತ್ತಿವೆ. ಇಂತಹ ಘಟನೆಗಳು ಜನರನ್ನು ಅಚ್ಚರಿಗೊಳಿಸುತ್ತದೆ. ಇದೀಗ ಸೈಕಲ್ ಆಟೋ ರಿಕ್ಷಾ (Cycle Auto Rickshaw) ಒಂದು ಚಾಲಕನಿಲ್ಲದೆ ಚಲಿಸಿದ್ದನ್ನು ನೋಡಿ ನೆಟ್ಟಿಜನ್ಸ್​ ಅಚ್ಚರಿಗೊಂಡಿದ್ದಾರೆ. ಈ ವಿಡಿಯೋ ನೋಡಿದರೆ ನೀವು ”ಇದೇ ಅಲ್ಲೊಂದು ಸಮಸ್ಯೆ ಇದೆ” ಎನ್ನುತ್ತೀರಿ.

ಇದನ್ನೂ ಓದಿ: Viral Photo: ಬಿರುಗಾಳಿಗೆ ಭಯಗೊಂಡ ಬೆಕ್ಕುಗಳಿಗೆ ತನ್ನ ರೆಕ್ಕೆಗಳಡಿ ಆಶ್ರಯ ನೀಡಿದ ಕೋಳಿಯ ಫೋಟೋ ವೈರಲ್

ಮೂಲತಃ ಲಿಮನ್ ಸರ್ಕರ್‌ಗೆ ಈ ವಿಡಿಯೋ ಸಲ್ಲುತ್ತದೆ. ಬಿರುಗಾಳಿ ಸಮಯದಲ್ಲಿ ಜನನಿಬಿಡ ರಸ್ತೆಯನ್ನು ವಿಡಿಯೋದಲ್ಲಿ ಕಾಣಬಹುದು. ಆದಾಗ್ಯೂ ನೋಡುನೋಡುತ್ತಿದ್ದಂತೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಸೈಕಲ್ ಆಟೋ ರಿಕ್ಷಾವೊಂದು, ರಸ್ತೆಯ ಮಧ್ಯೆ ಹೋಗುತ್ತದೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮತ್ತೆರಡು ಸೈಕಲ್ ಆಟೋ ರಿಕ್ಷಾಗಳಿಗೆ ಎದುರಾಗುತ್ತದೆ. ಆದರೂ ಸ್ವಲ್ಪವೂ ಡಿಕ್ಕಿ ಹೊಡೆಯದೆ ಹೋದ ರೀತಿಯಲ್ಲೇ ಮೊದಲು ನಿಲ್ಲಿಸಿದ್ದ ಸ್ಥಳಕ್ಕೆ ಬಂದಿದೆ. ಅಷ್ಟಕ್ಕೂ ಸೈಕಲ್ ಆಟೋ ರಿಕ್ಷಾ ಹಿಂದಕ್ಕೆ ಮುಂದಕ್ಕೆ ಚಲಿಸುವಾಗ ಚಾಲಕನಿರಲಿಲ್ಲ. ಇದು ನೆಟ್ಟಿಜನ್​ಗಳಲ್ಲಿ ಅಚ್ಚರಿ ಮೂಡಿಸಿದ್ದು, ಭೂತ ಇರಬಹುದು ಎಂಬಂತೆ ಹಾಸ್ಯವಾಗಿ ಹೇಳುತ್ತಿದ್ದಾರೆ.

ಇದನ್ನೂ ಓದಿ: Trending: ಕೆಂಪು ತೋಳಕ್ಕೆ ಜನ್ಮ ನೀಡಿದ ‘ಬ್ರೇವ್’, ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಯುಎಸ್​ನ ಮೃಗಾಲಯ

ಸದ್ಯ ಈ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದ್ದು, 760k ವೀಕ್ಷಣೆಗಳನ್ನು ಮತ್ತು ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ನೆಟಿಜನ್‌ಗಳು ಹಾಸ್ಯವಾಗಿ ಕಮೆಂಟ್ ಮಾಡಿದ್ದು, ರಿಕ್ಷಾವನ್ನು ಎಲೋನ್ ಮಸ್ಕ್ ನೋಡಿದರೆ ಹೆಮ್ಮೆಪಡುತ್ತಾರೆ ಎಂದು ಕೆಲವರು ಹೇಳಿದರೆ, ಇತರರು ವಾಹನಕ್ಕೆ ದೆವ್ವ ಹಿಡಿದಿದೆ ಎಂದು ಹಾಸ್ಯ ಮಾಡಿದ್ದಾರೆ.

ಇದನ್ನೂ ಓದಿ: Viral Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ; ಅಚ್ಚರಿಯಂತೆ ಬಚಾವಾದ ವಿಡಿಯೋ ವೈರಲ್

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:26 pm, Thu, 2 June 22