Trending: ಕೆಂಪು ತೋಳಕ್ಕೆ ಜನ್ಮ ನೀಡಿದ ‘ಬ್ರೇವ್’, ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಯುಎಸ್​ನ ಮೃಗಾಲಯ

ತೋಳವೊಂದು ಕೆಂಪು ತೋಳದ ಮರಿಗೆ ಜನ್ಮ ನೀಡುವ ಮೂಲಕ ಯುಎಸ್​ನ ರೋಡ್ ಐಲ್ಯಾಂಡ್‌ನಲ್ಲಿರುವ ರೋಜರ್ ವಿಲಿಯಮ್ಸ್ ಪಾರ್ಕ್ ಮೃಗಾಲಯವು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.

Trending: ಕೆಂಪು ತೋಳಕ್ಕೆ ಜನ್ಮ ನೀಡಿದ 'ಬ್ರೇವ್', ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಯುಎಸ್​ನ ಮೃಗಾಲಯ
ತಾಯಿಯೊಂದಿಗೆ ಇರುವ ಕೆಂಪು ತೋಳದ ಮರಿImage Credit source: rwpzoo
Follow us
TV9 Web
| Updated By: Rakesh Nayak Manchi

Updated on:May 31, 2022 | 11:56 AM

ತೋಳ (wolf)ವೊಂದು ಕೆಂಪು ತೋಳದ ಮರಿ (Red Wold Pup)ಗೆ ಜನ್ಮ (Born) ನೀಡುವ ಮೂಲಕ ಯುಎಸ್​ (US)ನ ಮೃಗಾಲಯವೊಂದು ಅಪರೂಪದ ಸಾಕ್ಷಿಗೆ ಕಾರಣವಾಗಿದೆ. ಯುಎಸ್‌ನ ರೋಡ್ ಐಲ್ಯಾಂಡ್‌ನಲ್ಲಿರುವ ರೋಜರ್ ವಿಲಿಯಮ್ಸ್ ಪಾರ್ಕ್ ಮೃಗಾಲಯದಲ್ಲಿ ಕಳೆದ ವಾರ 6 ವರ್ಷದ ಬ್ರೇವ್ ತೋಳ, ಕೆಂಪು ಬಣ್ಣದ ತೋಳ ಮರಿಯನ್ನು ಹಾಕಿದ್ದು, ಇದರ ಒಡನಾಡಿ ಏಳು ವರ್ಷ ವಯಸ್ಸಿನ ಡಿಯಾಗೋ ಆಗಿದೆ. ಈ ಅಪರೂಪದ ಕ್ಷಣದ ಮಾಹಿತಿಯನ್ನು ಫೋಟೋದೊಂದಿಗೆ ಮೃಗಾಲಯವು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ (Trending) ಪಡೆದುಕೊಂಡಿದೆ.

ಇದನ್ನೂ ಓದಿ: Trending: ‘ದಿ ಕಂಜ್ಯೂರಿಂಗ್‌’ ಸಿನಿಮಾದಲ್ಲಿ ಕಾಣಿಸಿಕೊಂಡ ದೆವ್ವದ ಮನೆ 1.5 ಮಿಲಿಯನ್​ಗೆ ಮಾರಾಟ!

ಫೋಟೋದಲ್ಲಿ ಇರುವಂತೆ, ನವಜಾತ ತೋಳ ಮರಿ ತನ್ನ ತಾಯಿಯೊಂದಿಗೆ ಗುಹೆಯಲ್ಲಿ ಮಲಗಿಕೊಂಡಿದೆ. ಈ ಫೋಟೋವನ್ನು ಹಂಚಿಕೊಳ್ಳುವಾಗ ಮೃಗಾಲಯದ ಅಧಿಕಾರಿಗಳು, “ಇದು 2005 ರಿಂದ RWPZoo ನಲ್ಲಿ ಜನಿಸಿದ ಮೊದಲ ಕೆಂಪು ತೋಳವಾಗಿದೆ.  ಪ್ರಾಣಿಗಳ ಆರೈಕೆ ತಂಡವು ತೋಳಕ್ಕೆ ಹೊಸದಾಗಿ ನಿರ್ಮಿಸಲಾದ ಜನನ ಗುಹೆಯೊಳಗೆ ಇರುವ ಕ್ಯಾಮರಾ ಮೂಲಕ ತಾಯಿ ಮತ್ತು ಮರಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಲಾಗಿದೆ. ಶುಶ್ರೂಷೆಯನ್ನು ಗಮನಿಸಿದಾಗ ಸ್ಥಿರವಾಗಿ ತೂಕವನ್ನು ಪಡೆಯುತ್ತಿರುವಂತೆ ಕಂಡುಬಂದರೂ ಮುಂದಿನ ತಿಂಗಳು ಮರಿಗಳ ಬೆಳವಣಿಗೆಗೆ ನಿರ್ಣಾಯಕ ಸಮಯವಾಗಿದೆ” ಎಂದಿದೆ.

”ತಾಯಿ ಮತ್ತು ನವಜಾತ ಮರಿ ಕೆಲವು ವಾರಗಳವರೆಗೆ ಗುಹೆಯಲ್ಲಿ ಉಳಿಯುತ್ತದೆ. ನಂತರ ಮೃಗಾಲಯದಲ್ಲಿ ವೀಕ್ಷಣೆ ಮಾಡಲು ಅವಕಾಶ ಸಿಗಲಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ. ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ ಇನ್‌ಸ್ಟಾಗ್ರಾಮ್ ಬಳಕೆದಾರರು, ಇದು ಅತ್ಯುತ್ತಮ ಸುದ್ದಿಯಾಗಿದೆ. ಈ ಸುದ್ದಿ ಕೇಳಲು ತುಂಬಾ ಸಂತೋಷವಾಗಿದೆ. ಪುಟ್ಟ ಮರಿಯನ್ನು ನೋಡಲು ಕಾಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಅಮ್ಮನೊಂದಿಗೆ ವರ್ಕ್​ಔಟ್ ಮಾಡಿದ 5 ತಿಂಗಳ ಮಗು; ತಮಾಷೆಯ ವಿಡಿಯೋ ವೈರಲ್

ರೋಜರ್ ವಿಲಿಯಮ್ಸ್ ಮೃಗಾಲಯದ ವೆಬ್‌ಸೈಟ್‌ನ ಪ್ರಕಾರ, 1980 ರ ದಶಕದಲ್ಲಿ ಹಲವಾರು ಸಂರಕ್ಷಣಾ ಅಧಿಕಾರಿಗಳು ಒಗ್ಗೂಡಿ 14 ಕಾಡು ಕೆಂಪು ತೋಳಗಳನ್ನು ಅಮೆರಿಕದಾದ್ಯಂತ ಪ್ರಾಣಿಸಂಗ್ರಹಾಲಯಗಳಿಗೆ ಪರಿಚಯಿಸಿದರು. ಈ ಕಾರ್ಯಕ್ರಮವು ಕೆಂಪು ತೋಳದ ಸಂಖ್ಯೆಯನ್ನು ನಿಧಾನವಾಗಿ ಕಾಡಿನಲ್ಲಿ ಮರುಪರಿಚಯಿಸಲು ಸಂರಕ್ಷಣಾಕಾರರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:30 am, Tue, 31 May 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್