Trending: ‘ದಿ ಕಂಜ್ಯೂರಿಂಗ್‌’ ಸಿನಿಮಾದಲ್ಲಿ ಕಾಣಿಸಿಕೊಂಡ ದೆವ್ವದ ಮನೆ 1.5 ಮಿಲಿಯನ್​ಗೆ ಮಾರಾಟ!

ದಿ ಕಂಜ್ಯೂರಿಂಗ್‌ ಎಂಬ ಭಯಾನಕ ಸಿನಿಮಾ 2013ರಲ್ಲಿ ತೆರೆಮೇಲೆ ಬಂದಿತ್ತು. ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ದೆವ್ವದ ಮನೆ 1.5 ಮಿಲಿಯನ್​ಗೆ ಮಾರಾಟವಾಗಿದೆ. ಬೋಸ್ಟನ್‌ನಲ್ಲಿ ವಾಸಿಸುವ ರಿಯಲ್ ಎಸ್ಟೇಟ್ ಡೆವಲಪರ್ ಜಾಕ್ವೆಲಿನ್ ನುನೆಜ್ ಮನೆಯ ಹೊಸ ಮಾಲೀಕರಾಗಿದ್ದಾರೆ.

Trending: 'ದಿ ಕಂಜ್ಯೂರಿಂಗ್‌' ಸಿನಿಮಾದಲ್ಲಿ ಕಾಣಿಸಿಕೊಂಡ ದೆವ್ವದ ಮನೆ 1.5 ಮಿಲಿಯನ್​ಗೆ ಮಾರಾಟ!
ದೆವ್ವದ ಮನೆImage Credit source: Twitter
Follow us
| Updated By: Rakesh Nayak Manchi

Updated on:May 30, 2022 | 7:15 AM

ದಿ ಕಂಜ್ಯೂರಿಂಗ್‌ (The Conjuring) ಎಂಬ ಭಯಾನಕ ಸಿನಿಮಾ (Film) 2013ರಲ್ಲಿ ತೆರೆಮೇಲೆ ಬಂದಿತ್ತು. ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ದೆವ್ವದ ಮನೆ (devil house) 1.5 ಮಿಲಿಯನ್​ಗೆ ಮಾರಾಟ (Sale)ವಾಗಿದೆ. ಈ ಮನೆಯನ್ನು 8.5 ಎಕರೆ ವಿಸ್ತೀರ್ಣದಲ್ಲಿ 1736ರಲ್ಲಿ ನಿರ್ಮಿಸಲಾಗಿದೆ. ಯುಎಸ್​ನ ರೋಡ್ ಐಲೆಂಡ್​ನಲ್ಲಿರುವ ಪ್ರಾವಿಡೆನ್ಸ್​ ನಗರದಿಂದ 40 ನಿಮಿಷ ದೂರದಲ್ಲಿ ದೆವ್ವದ ಮನೆಯನ್ನು ಕಾಣಬಹುದು.

ಸದ್ಯ ಬೋಸ್ಟನ್‌ನಲ್ಲಿ ವಾಸಿಸುವ ರಿಯಲ್ ಎಸ್ಟೇಟ್ ಡೆವಲಪರ್ ಜಾಕ್ವೆಲಿನ್ ನುನೆಜ್ ಮನೆಯ ಹೊಸ ಮಾಲೀಕರಾಗಿದ್ದಾರೆ. ಇದನ್ನು ಜೆನ್ ಮತ್ತು ಕೋರಿ ಹೈನ್ಜೆನ್ ಅವರು ಮಾರಾಟ ಮಾಡಿದ್ದಾರೆ. ಅವರು 2019 ರಲ್ಲಿ ಆಂಡ್ರಿಯಾ ಪೆರಾನ್ ಅವರಿಂದ 4,39,000 ಡಾಲರ್​ಗೆ ಮನೆಯನ್ನು ಖರೀದಿಸಿದ್ದರು. ಪೆರಾನ್ ಅವರ ಕುಟುಂಬವು 1971 ಮತ್ತು 1980ರ ನಡುವೆ ಮನೆಯಲ್ಲಿ ವಾಸಿಸುತ್ತಿತ್ತು ಮತ್ತು ಅನೇಕ ಅಲೌಕಿಕ ಚಟುವಟಿಕೆಗಳನ್ನು ಅನುಭವಿಸಿದೆ ಎಂದು ಹೇಳಿಕೊಂಡರು.

ಇದನ್ನೂ ಓದಿ: Trending: ಚಾಕೊಲೇಟ್‌ನಿಂದ ಮಾಡಿದ ಎಂಟು ಅಡಿ ಎತ್ತರದ ಜಿರಾಫೆಯ ವಿಡಿಯೋ ವೈರಲ್

ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದಂತೆ, ”ನುನೆಜ್ ಅವರು ಖರೀದಿಸಿದ ಆಸ್ತಿಯನ್ನು ಕಲಿಕಾ ಕೇಂದ್ರವನ್ನಾಗಿಸಲು ಆಶಿಸುತ್ತಿದ್ದಾರೆ. ಅಲ್ಲಿ ಆಸಕ್ತರು ಆತ್ಮಗಳೊಂದಿಗೆ ಸಂಪರ್ಕ ಸಾಧಿಸಬಹುದು”. ಆಸ್ತಿ ಖರೀಗೆ ಬಗ್ಗೆ ಯುಎಸ್​ ಪತ್ರಿಕೆಯೊಂದರ ಜೊತೆ ಮಾತನಾಡಿದ ನುನೆಜ್, “ಇದು ನನಗೆ ತುಂಬಾ ವೈಯಕ್ತಿಕ ಖರೀದಿಯಾಗಿದೆ. ಇದು ಮಾರುಕಟ್ಟೆಗೆ ಬಂದಾಗ ಇದು ಜನರು ಸತ್ತವರೊಂದಿಗೆ ಮಾತನಾಡಲು ಅನುವು ಮಾಡಿಕೊಡುವ ಆಸ್ತಿಯಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ಜೆನ್ ಮತ್ತು ಕೋರಿ ಹೈನ್ಜೆನ್ ದಂಪತಿಗಳು ನ್ಯೂನೆಜ್‌ಗೆ ಮನೆಯನ್ನು ಮಾರಾಟ ಮಾಡಲು ಒಂದು ಕಾರಣವೆಂದರೆ ಅವರು ಪ್ರಾರಂಭಿಸಿದ ವ್ಯವಹಾರವನ್ನು ಮುಂದುವರಿಸಲು ಆಸ್ತಿಯನ್ನು ಬಳಸುವ ಯಾರೋ ಒಬ್ಬರು ಬೇಕಾಗಿದ್ದರು. ಖರೀದಿ ವೇಳೆ ಒಂದು ಷರತ್ತು ಕೂಡ ಹಾಕಲಾಗಿದೆ. ಖರೀದಿದಾರನು ತಮ್ಮ ಸುರಕ್ಷತೆಯ ಹಿತದೃಷ್ಟಿಯಿಂದ ಆಸ್ತಿಯಲ್ಲಿ ರಾತ್ರಿಯಿಡೀ ಇರಬಾರದು ಎಂದು ಷರತ್ತು ವಧಿಸಲಾಗಿದೆ.

ಇದನ್ನೂ ಓದಿ: Trending: ಸ್ಟೋನ್‌ಹೆಂಜ್ ನಿರ್ಮಿಸಿದ ಜನರು ತಿನ್ನುತ್ತಿದ್ದ ಪರಾವಲಂಬಿ ಹುಳುಗಳ ಮೊಟ್ಟೆಗಳನ್ನು ಪತ್ತೆಹಚ್ಚಿದ ಪುರಾತತ್ತ್ವ ಶಾಸ್ತ್ರಜ್ಞರು

1971ರಲ್ಲಿ ಕ್ಯಾರೊಲಿನ್ ಮತ್ತು ರೋಜರ್ ಪೆರಾನ್ ತಮ್ಮ ಕುಟುಂಬವನ್ನು ಶಿಥಿಲವಾದ ರೋಡ್ ಐಲೆಂಡ್ ಫಾರ್ಮ್ ಹೌಸ್‌ಗೆ ಸ್ಥಳಾಂತರಿಸಿದರು. ಆದರೆ, ಅದರ ಸುತ್ತಲೂ ದುಃಸ್ವಪ್ನದಂತಹ ವಿಚಿತ್ರವಾದ ಸಂಗತಿಗಳು ಸಂಭವಿಸಲು ಪ್ರಾರಂಭಿಸುತ್ತವೆ. ಇದೇ ಕಾರಣಕ್ಕೆ ಕ್ಯಾರೊಲಿನ್ ಮನೆಯನ್ನು ಪರೀಕ್ಷಿಸಲು ಪ್ರಸಿದ್ಧ ಅಧಿಸಾಮಾನ್ಯ ತನಿಖಾಧಿಕಾರಿಗಳಾದ ಎಡ್ ಮತ್ತು ಲೋರೆನ್ ವಾರೆನ್ ಅವರನ್ನು ಸಂಪರ್ಕಿಸುತ್ತಾಳೆ. ಅದರಂತೆ ದೆವ್ವಗಳ ಕಾಟ ಇರುವ ಪ್ರದೇಶವಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಅದು ಈಗ ಅವರು ಹೋದಲ್ಲೆಲ್ಲಾ ಪೆರಾನ್ ಕುಟುಂಬವನ್ನು ಗುರಿಯಾಗಿಸುತ್ತಿದೆ ಎಂದು ಕೆನ್ನೆತ್ ಚಿಶೋಲ್ಮ್ ಹೇಳಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:11 am, Mon, 30 May 22