ಒಂಟಿಕಾಲಲ್ಲಿ ಜಿಗಿಯುತ್ತ ಶಾಲೆಗೆ ಹೋಗುವ ಬಾಲಕಿ; ನೆರವಿಗೆ ಬಂದ ನಟ ಮತ್ತು ಜಿಲ್ಲಾಡಳಿತ

ಬಾಲಕಿ ಶಾಲೆಗೆ ಒಂಟಿಗಾಲಲ್ಲಿ jಇಗಿಯುತ್ತಾ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಕಿಯ ನೆರವಿಗೆ ಜಿಲ್ಲಾಡಳಿತ, ನಟ ಸೋನು ಸೂದ್ ಸಹಾಯ ಮಾಡಿದ್ದಾರೆ. 

ಒಂಟಿಕಾಲಲ್ಲಿ ಜಿಗಿಯುತ್ತ ಶಾಲೆಗೆ ಹೋಗುವ ಬಾಲಕಿ; ನೆರವಿಗೆ ಬಂದ ನಟ ಮತ್ತು ಜಿಲ್ಲಾಡಳಿತ
ಒಂಟಿಕಾಲಲ್ಲಿ ಜಿಗಿಯುತ್ತ ಶಾಲೆಗೆ ಹೋಗುವ ಬಾಲಕಿ
Follow us
TV9 Web
| Updated By: ವಿವೇಕ ಬಿರಾದಾರ

Updated on:May 29, 2022 | 3:57 PM

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಬಾಲಕಿಯ ವಿಡಿಯೋ ವೈರಲ್ ಆಗಿತ್ತು. ಅದು ಬಾಲಕಿ ಶಾಲೆಗೆ ಒಂಟಿಗಾಲಲ್ಲಿ ಕುಂಟುತ್ತಾ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಕಿಯ ನೆರವಿಗೆ ಜಿಲ್ಲಾಡಳಿತ, ನಟ ಸೋನು ಸೂದ್ ಸಹಾಯ ಮಾಡಿದ್ದಾರೆ.

ಬಿಹಾರದ (Bihar) ಜಮುಯಿ ಜಿಲ್ಲೆಯ ಖೈರಾ ಬ್ಲಾಕ್‌ನ ಫತೇಪುರ್ ಗ್ರಾಮದ ಮಣ್ಣಿನ ಗುಡಿಸಿಲಿನಲ್ಲಿ ವಾಸಿಸುವ ಬಾಲಕಿಯ ಹೆಸರು ಸೀಮಾ. ಸೀಮಾ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದು, ತನ್ನ ಮನೆಯಿಂದ 1 ಕಿಮೀ ದೂರದಲ್ಲಿರುವ  ಫತೇಪುರ್‌ನ ಮಿಡ್ಲ್ ಶಾಲೆಗೆ ಕುಂಟುತ್ತಾ ಹೋಗುತ್ತಾಳೆ. ಸೀಮಾ ಒಂದು ರಸ್ತೆ ಅಪಘಾತದಲ್ಲಿ ತನ್ನ ಎಡಗಾಲನ್ನು ಕಳೆದುಕೊಂಡಿದ್ದಾಳೆ. ಸೀಮಾಳ ಕುಟುಂಬ ಬಡವರಾಗಿದ್ದು, ಸೀಮಾ ತಾಯಿ ಬೇಬಿ ದೇವಿ ಅವರು ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸೀಮಾ ಅವರ ತಂದೆ ಖೀರನ್ ಮಾಂಝಿ ಹೊರರಾಜ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಆರು ಒಡಹುಟ್ಟಿದವರಲ್ಲಿ ಸೀಮಾ ಎರಡನೇ ಹಿರಿಯಳು.

ಇದನ್ನೂ ಓದಿ
Image
IPL 2022 Final: ಐಪಿಎಲ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ
Image
Viral Video: ಟೋಪಿ ಧರಿಸಿಕೊಂಡು ಮುದ್ದಾಗಿ ಕಾಣುವ ಇಲಿಯ ವಿಡಿಯೋ ವೈರಲ್
Image
Trending: ಸ್ಟೋನ್‌ಹೆಂಜ್ ನಿರ್ಮಿಸಿದ ಜನರು ತಿನ್ನುತ್ತಿದ್ದ ಪರಾವಲಂಬಿ ಹುಳುಗಳ ಮೊಟ್ಟೆಗಳನ್ನು ಪತ್ತೆಹಚ್ಚಿದ ಪುರಾತತ್ತ್ವ ಶಾಸ್ತ್ರಜ್ಞರು
Image
Viral Video: ‘ತ್ರಿಚಕ್ರ ಅಂಬಾರಿ’ ಮೂಲಕ ತನ್ನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಿಶೇಷಚೇತನ ತಂದೆಯ ವಿಡಿಯೋ ಎಂಥವರ ಕಣ್ಣನ್ನೂ ಒದ್ದೆಯಾಗಿಸುತ್ತೆ!

ಇದನ್ನು ಓದಿ: ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಜಾನಪದ ಕಲಾ ಪ್ರದರ್ಶನ; ಫೈನಲ್​ಗೆ ಮೆರಗು ತರಲಿರುವ ಮಂಡ್ಯ ಕಲಾವಿದರು

ಸೀಮಾಳ ಮನೆಯಲ್ಲಿ ಕಿತ್ತುತಿನ್ನುವ ಬಡತನವಿದ್ದು, ಸೀಮಾಳಿಗೆ ತ್ರಿಚಕ್ರ ವಾಹನ ಅಥವಾ ಊರುಗೋಲನ್ನು ನೀಡಲು ಸಾಧ್ಯವಾಗಲಿಲ್ಲ.  ತಮ್ಮ ಮಗಳಿಗೆ ಪುಸ್ತಕಗಳನ್ನು ಖರೀದಿಸುವಷ್ಟು ಅವರಲ್ಲಿ ಹಣವಿಲ್ಲ. ಹೀಗಾಗಿ ಸೀಮಾಗೆ ಶಾಲಾ ಶಿಕ್ಷಕರು ಎಲ್ಲವನ್ನೂ ಒದಗಿಸುತ್ತಿದ್ದಾರೆ. ಯಾವಾಗ ಸೀಮಾಳ ಈ ವಿಡಿಯೋ ವೈರಲ್ ಆಯಿತು.

ಆಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್  ಟ್ವೀಟ್ ಮಾಡಿ   “10 ವರ್ಷದ ಸೀಮಾಳ ಉತ್ಸಾಹವು ನನ್ನನ್ನು ಭಾವುಕರನ್ನಾಗಿಸಿದೆ. ದೇಶದ ಪ್ರತಿ ಮಗುವೂ ಉತ್ತಮ ಶಿಕ್ಷಣವನ್ನು ಬಯಸುತ್ತದೆ. ಪ್ರತಿ ಸರ್ಕಾರಕ್ಕೂ ಸಾಕಷ್ಟು ಸಂಪನ್ಮೂಲಗಳಿವೆ ಎಂದು ನನಗೆ ತಿಳಿದಿದೆ. ಅತ್ಯುತ್ತಮವಾದದ್ದನ್ನು ಒದಗಿಸುವುದು ಪ್ರತಿಯೊಬ್ಬ ನಿಜವಾದ ದೇಶಭಕ್ತನ ಧ್ಯೇಯವಾಗಿರಬೇಕು.  ಸೀಮಾ ಅವರಂತಹ ಮಕ್ಕಳಿಗೆ ಶಿಕ್ಷಣ, ಅದು ನಿಜವಾದ ದೇಶಭಕ್ತಿ ಎಂದು ಟ್ವೀಟ್ ಮಾಡಿದ್ದಾರೆ.

ನಟ ಸೂದ್ ಕೂಡ ಟ್ವೀಟ್ ಮಾಡಿ ಈಗ ಅವಳು ಒಂದಲ್ಲ ಎರಡರ ಕಾಲಿನಿಂದ ಹಾರಿ ಶಾಲೆಗೆ ಹೋಗುತ್ತಾಳೆ. ನಾನು ಟಿಕೆಟ್ ಕಳುಹಿಸುತ್ತಿದ್ದೇನೆ, ಎರಡೂ ಕಾಲುಗಳ ಮೇಲೆ ನಡೆಯುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಹಾಗೇ ಸೀಮಾಗೆ ಸಹಾಯ ಮಾಡಿದರು.

ಬುಧವಾರ (ಮೇ 25)  ಸೀಮಾ ಮನೆಗೆ ಭೇಟಿ ನೀಡಿದ ಜಮುಯಿ ಡಿಎಂ ಅವನೀಶ್ ಕುಮಾರ್ ಸಿಂಗ್ ಅವರು ತ್ರಿಚಕ್ರ ವಾಹನವನ್ನು ಉಡುಗೊರೆಯಾಗಿ ನೀಡಿದರು.  ಜಿಲ್ಲಾಡಳಿತವು ಬಾಲಕಿಯ ಧೈರ್ಯ ಮತ್ತು ಇಚ್ಛಾಶಕ್ತಿಗೆ ವಂದನೆ ಸಲ್ಲಿಸಿ, ಸೀಮಾ ತಮ್ಮ ಗ್ರಾಮದ ಹೆಣ್ಣುಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು ಮಾದರಿಯಾಗಿದ್ದಾರೆ. ನಾವು ಅವಳಿಗೆ ಕೃತಕ ಕಾಲು ನೀಡಲು ಅಳತೆ ಮಾಡಿದ್ದೇವೆ, ನಾವು ಒಂದು ವಾರದೊಳಗೆ ನೀಡುತ್ತೇವೆ. ಸಮುದಾಯದಿಂದ ಸೀಮಾಗೆ ಪ್ರೋತ್ಸಾಹಧನವನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು ಮತ್ತು ಅವರಿಗೆ ಉತ್ತಮವಾದ ಮನೆಯನ್ನು ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ ನಾವು ವೈದ್ಯಕೀಯ ಬೆಂಬಲ, ವಸತಿ, ಪಡಿತರ ಚೀಟಿ ಮತ್ತು ಇತರ ಯೋಜನೆಗಳನ್ನು ಒದಗಿಸಲು ಇತರ ಗ್ರಾಮಗಳಲ್ಲಿ ದಿವ್ಯಾಂಗ್ ಮಕ್ಕಳಿಗಾಗಿ ಶಿಬಿರಗಳನ್ನು ಆಯೋಜಿಸಲಿದ್ದೇವೆ. ಖೈರಾ ಬ್ಲಾಕ್ ನಂತರ, ನಾವು ಲಕ್ಷ್ಮೀಪುರ ಬ್ಲಾಕ್‌ನ ಹಳ್ಳಿಗಳನ್ನು ಒಳಗೊಳ್ಳುತ್ತೇವೆ ಎಂದು ತಿಳಿಸಿದರು.

ಇದನ್ನು ಓದಿ: ಸ್ನಾಯು ಸೆಳೆತವೇ?, ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ ಹೀಗೆ ಮಾಡಿ

ಸೀಮಾ ಅವರು ಶಿಕ್ಷಕಿಯಾಗಲು ಬಯಸುತ್ತಾರೆ ಮತ್ತು ತಮ್ಮ ಹಳ್ಳಿ ಮತ್ತು ನೆರೆಹೊರೆಯಲ್ಲಿರುವ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡಲು ಬಯಸುತ್ತಾರೆ. ಒಂದು ಪಾಠ ಅಥವಾ ತರಗತಿಯನ್ನು ಅವಳು ಎಂದಿಗೂ ತಪ್ಪಿಸಿಕೊಂಡಿಲ್ಲ ಅವಳ ಶಾಲಾ ಶಿಕ್ಷಕರು ಸಹ ಅವಳನ್ನು ಹೊಗಳುತ್ತಾರೆ. ರಸ್ತೆ ಅಪಘಾತದಲ್ಲಿ ಎಡಗಾಲು ಕಳೆದುಕೊಂಡ ನಂತರ ಸೀಮಾ ಧೈರ್ಯ ಪ್ರದರ್ಶಿಸಿದ ರೀತಿಯನ್ನು ಆಕೆಯ ಅಜ್ಜಿ ಲಕ್ಷ್ಮಿ ದೇವಿ ನೆನಪಿಸಿಕೊಂಡಿದ್ದಾರೆ. “ಅಪಘಾತದ ನಂತರ ಅವಳು ಹೊರಗೆ ಚಲಿಸಲು ಸಾಧ್ಯವಾಗಲಿಲ್ಲ. ಆದರೆ ಒಂದು ದಿನ ಅವಳು ಓದುವ ಆಸೆಯನ್ನು ಹೊಂದಿದ್ದಾಳೆ ಮತ್ತು ಶಾಲೆಗೆ ಹೋಗುವುದಾಗಿ ಹೇಳಿದ್ದಳು. ಅವಳ ಧೈರ್ಯದಿಂದಾಗಿ ಅವಳು ಆಘಾತವನ್ನು ನಿವಾರಿಸಿ ಒಂದೇ ಕಾಲಿನಲ್ಲಿ ಶಾಲೆಗೆ ಹೋಗಲು ಪ್ರಾರಂಭಿಸಿದಳು.” ಲಕ್ಷ್ಮಿ ಹೇಳಿದರು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Sun, 29 May 22