Viral Video: 2 ಕಿ.ಮೀ. ದೂರದ ಅಪ್ಪನ ಆಫೀಸಿಗೆ ಊಟದ ಬಾಕ್ಸ್ ತೆಗೆದುಕೊಂಡು ಹೋಗುತ್ತೆ ಈ ನಾಯಿ; ವಿಡಿಯೋ ವೈರಲ್

German Shepherd Video: ಜರ್ಮನ್ ಶೆಫರ್ಡ್ ನಾಯಿಯ ವಿಡಿಯೋವೊಂದು ವೈರಲ್ ಆಗಿದ್ದು, ಈ ನಾಯಿ ದಿನವೂ ತನ್ನ ಮುದ್ದಿನ ತಂದೆಯ ಕಚೇರಿಗೆ ಊಟವನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗುತ್ತದೆ.

Viral Video: 2 ಕಿ.ಮೀ. ದೂರದ ಅಪ್ಪನ ಆಫೀಸಿಗೆ ಊಟದ ಬಾಕ್ಸ್ ತೆಗೆದುಕೊಂಡು ಹೋಗುತ್ತೆ ಈ ನಾಯಿ; ವಿಡಿಯೋ ವೈರಲ್
ಅಪ್ಪನಿಗೆ ಊಟ ತೆಗೆದುಕೊಂಡು ಹೋಗುತ್ತಿರುವ ನಾಯಿImage Credit source: Hindustan Times
Follow us
| Updated By: ಸುಷ್ಮಾ ಚಕ್ರೆ

Updated on: May 29, 2022 | 9:15 PM

ನಾಯಿಗಳು ಮನುಷ್ಯರ ಉತ್ತಮ ಸ್ನೇಹಿತರು. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ (Instagram) ಸದಾ ಒಂದಿಲ್ಲೊಂದು ನಾಯಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಈ ವಿಡಿಯೋ ಕೂಡ ನಿಮ್ಮ ಮನಸು ಗೆಲ್ಲುವುದು ಗ್ಯಾರಂಟಿ. ಈ ವೀಡಿಯೊ ನಿಮ್ಮ ಮುಖದಲ್ಲಿ ನಗುವನ್ನು ತರುವುದು ಮಾತ್ರವಲ್ಲದೆ ನಿಮ್ಮ ದಿನವನ್ನು ಸಾಕಷ್ಟು ಖುಷಿಪಡುವಂತೆ ಮಾಡುತ್ತದೆ. ಜರ್ಮನ್ ಶೆಫರ್ಡ್ (German Shepherd) ನಾಯಿಯ ವಿಡಿಯೋವೊಂದು ವೈರಲ್ ಆಗಿದ್ದು, ಈ ನಾಯಿ ದಿನವೂ ತನ್ನ ಮುದ್ದಿನ ತಂದೆಯ ಕಚೇರಿಗೆ ಊಟವನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗುತ್ತದೆ.

ನಾಯಿ ತನ್ನ ತಂದೆಯ ಕಚೇರಿಯ ಕಡೆಗೆ ನಡೆದುಕೊಂಡು ಹೇಗೆ ಸಂತೋಷದಿಂದ ತೆರಳುತ್ತದೆ ಎಂಬುದನ್ನು ವೀಡಿಯೊದಲ್ಲಿ ನೋಡಬಹುದು. ಈ ನಾಯಿ ತನ್ನ ಬಾಯಿಯಲ್ಲಿ ಊಟದ ಕ್ಯಾರಿಯರ್ ಕಚ್ಚಿಕೊಂಡು ಹೋಗುತ್ತಿದೆ. ಆ ಊಟದ ಕ್ಯಾರಿಯರನ್ನು ನಾಯಿ ಗಟ್ಟಿಯಾಗಿ ಕಚ್ಚಿ ಹಿಡಿದಿದೆ.

ಈ ನಾಯಿಯ ಹೆಸರು ಶೇರು. ಈ ನಾಯಿ ಮಧ್ಯಾಹ್ನದ ಊಟವನ್ನು ತಲುಪಿಸಲು ತನ್ನ ತಂದೆಯ ಕಚೇರಿಗೆ ಪ್ರತಿದಿನ ಎರಡು ಕಿಲೋಮೀಟರ್ ಪ್ರಯಾಣಿಸುತ್ತದೆ ಎಂದರೆ ನಿಮಗೆ ಅಚ್ಚರಿಯಾಗದಿರದು. Instagram ಬ್ಲಾಗರ್ ಒಬ್ಬರು ಇದನ್ನು ಪೋಸ್ಟ್ ಮಾಡಿದ್ದಾರೆ. ಪ್ರಸ್ತುತ ಅವರ ಪುಟದಲ್ಲಿ 46,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಈ ನಾಯಿ ಕೂಡ ಚೆನ್ನಾಗಿ ತರಬೇತಿ ಪಡೆದಿದೆ. ಈ ಕಾರಣದಿಂದಾಗಿ ಈ ನಾಯಿ ರಸ್ತೆಯಲ್ಲಿ ಯಾವ ವಾಹನಕ್ಕೂ ಡಿಕ್ಕಿ ಹೊಡೆಯದೆ, ನಿಧಾನವಾಗಿ ರೋಡ್ ಕ್ರಾಸ್ ಮಾಡಿಕೊಂಡು ಹೋಗುತ್ತದೆ. ಒಂದುವೇಳೆ ಎದುರಿನಿಂದ ವಾಹನ ಬರುತ್ತಿದ್ದರೆ ಅದಕ್ಕಾಗಿ ಕಾದು ನಿಂತು, ನಂತರ ಮುಂದೆ ಹೋಗುತ್ತದೆ.

ಇದನ್ನೂ ಓದಿ: Viral Video: ಚಿಕ್ಕ ಹುಡುಗಿಯನ್ನು ಯಾಮಾರಿಸಿ ಲಾಲಿಪಾಪ್ ಕಚ್ಚಿಕೊಂಡು ಓಡಿದ ನಾಯಿಮರಿ; ವಿಡಿಯೋ ವೈರಲ್

ಹಿಮಾಚಲ ಪ್ರದೇಶದಲ್ಲಿ ಸಾಕು ನಾಯಿಗಳನ್ನು ಕೂಡ ಬೋನಿನಲ್ಲಿ ಇಡುವುದಿಲ್ಲ. ಇಲ್ಲಿ ನಾಯಿಗಳನ್ನು ಹೊರಗೆಡೆಯೇ ಬೆಳೆಸಲಾಗುತ್ತದೆ. ಶೇರು ಬಾಲ್ಯದಿಂದಲೂ ರಸ್ತೆಯಲ್ಲಿ ಹೇಗೆ ಓಡಾಡಬೇಕೆಂಬ ಬಗ್ಗೆ ತರಬೇತಿ ಪಡೆದಿದೆ. ತಾನೇ ಪ್ರತಿದಿನ ತನ್ನ ಮಾಲೀಕನಿಗೆ ಊಟವನ್ನು ತೆಗೆದುಕೊಂಡು ಹೋಗುತ್ತದೆ.

ಈ ವೀಡಿಯೊವನ್ನು 6 ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಇಲ್ಲಿಯವರೆಗೆ 8.6 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ