- TV9 Kannada Kannada News Photos Geetha Bharathi Bhat Adorable Photo With Husband bramavara rajaram bhat
‘ಸೂಪರ್ ಜೋಡಿ’; ಪತಿ ಜೊತೆ ಫೋಟೋ ಹಂಚಿಕೊಂಡ ಗೀತಾ ಭಾರತಿ ಭಟ್
ಗೀತಾ ಭಾರತಿ ಭಟ್ ಅವರು ಇತ್ತೀಚೆಗೆ ರಾಜಾರಾಮ್ ಭಟ್ ಅವರನ್ನು ವಿವಾಹ ಆಗಿದ್ದಾರೆ. ಮದುವೆ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರೋ ಅವರು ವಿವಿಧ ರೀತಿಯ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.
Updated on:Feb 18, 2026 | 10:38 AM

ಗೀತಾ ಭಾರತಿ ಭಟ್ ಅವರು ಕಳೆದ ವರ್ಷ ಡಿಸೆಂಬರ್ನಲ್ಲಿ ರಾಜರಾಮ್ ಭಟ್ ಅವರನ್ನು ಮದುವೆ ಆದರು. ಮದುವೆ ಬಳಿಕವೂ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.

ಗೀತಾ ಭಾರತಿ ಭಟ್ ಅವರು ಪತಿ ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಈ ಜೋಡಿಯನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಇವರು ನೂರು ವರ್ಷ ಸುಖವಾಗಿ ಬಾಳಲಿ ಎಂದು ಹಾರೈಸಿದ್ದಾರೆ.

ಗೀತಾ ಭಾರತಿ ಭಟ್ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಗೀತಾ ಭಾರತಿ ಭಟ್ ಅವರು ಈಗ ನಟನೆಯಲ್ಲಿ ಅಷ್ಟು ಆ್ಯಕ್ಟೀವ್ ಆಗಿಲ್ಲ.

ಗೀತಾ ಭಾರತಿ ಭಟ್ ಅವರು ಬಾಡಿಶೇಮಿಂಗ್ ವಿರುದ್ಧ ಸಾಕಷ್ಟು ಬಾರಿ ಸಿಡಿದೆದ್ದಿದ್ದಾರೆ. ತಮಗಾದ ಕಹಿ ಅನುಭವಗಳನ್ನು ಕೂಡ ಅವರು ಹಂಚಿಕೊಂಡಿದ್ದರು. ಈಗ ಅವರನ್ನು ಅವರಾಗಿಯೇ ಒಪ್ಪಿಕೊಳ್ಳುವಂತಹ ಪತಿ ಸಿಕ್ಕಿದ್ದಾರೆ.

ಗೀತಾ ಭಾರತಿ ಭಟ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರನ್ನು ಇಷ್ಟಪಡುವ ಒಂದು ಅಭಿಮಾನಿ ವರ್ಗವೇ ಇದೆ.
Published On - 10:37 am, Wed, 18 February 26

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



