AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 Daily Horoscope: ಇಂದು ರಾಶಿಯವರಿಗೆ ದೊಡ್ಡ ಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ

 Daily Horoscope: ಇಂದು ರಾಶಿಯವರಿಗೆ ದೊಡ್ಡ ಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ

ಅಕ್ಷಯ್​ ಪಲ್ಲಮಜಲು​​
|

Updated on:Feb 19, 2026 | 6:17 AM

Share

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 19-02-2026 ರ ದೈನಂದಿನ ರಾಶಿ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ವಿಶೇಷ ದಿನದಂದು ಪ್ರತಿಯೊಂದು ರಾಶಿಚಕ್ರದ ಚಿಹ್ನೆಗೆ ಗ್ರಹಗಳ ಶುಭಫಲ, ವೃತ್ತಿ, ಆರ್ಥಿಕ, ಕೌಟುಂಬಿಕ ಆರೋಗ್ಯ ಹಾಗೂ ನಿರ್ದಿಷ್ಟ ಸಲಹೆಗಳು, ಅದೃಷ್ಟ ಬಣ್ಣ, ಸಂಖ್ಯೆ ಮತ್ತು ಮಂತ್ರಗಳನ್ನು ಒಳಗೊಂಡಿದೆ.

ಬೆಂಗಳೂರು, ಫೆ.19:  ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದಿನ (ಫೆ.19) ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸದ ಶುಕ್ಲಪಕ್ಷದ ಬಿದಿಗೆ ತಿಥಿ, ಪೂರ್ವಾಭಾದ್ರ ನಕ್ಷತ್ರದಿಂದ ಕೂಡಿರುವ ವಿಶೇಷ ದಿನವಾಗಿದೆ. ರವಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಇದು ಹಲವು ರಾಶಿಗಳಿಗೆ ಶುಭ ಫಲ ನೀಡಲಿದೆ. ಮೇಷ ರಾಶಿಗೆ ಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ. ವೃಷಭ ರಾಶಿಯವರು ಹಣ ಗಳಿಕೆಯಲ್ಲಿ ಆಸಕ್ತಿ ತೋರಲಿದ್ದು, ಹಳೆಯ ಬಾಕಿ ವಸೂಲಿಯಾಗಲಿದೆ. ಮಿಥುನ ರಾಶಿಯವರಿಗೆ ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಕರ್ಕಾಟಕ ರಾಶಿಯವರಿಗೆ ಮಾತು ಮತ್ತು ಹಣಕಾಸಿನ ವಿಷಯದಲ್ಲಿ ಶುಭವಾಗಲಿದೆ. ಸಿಂಹ ರಾಶಿಯವರ ಆತ್ಮವಿಶ್ವಾಸ ಗಟ್ಟಿಯಾಗಿದ್ದು, ಕಾರ್ಯಗಳಲ್ಲಿ ಯಶಸ್ಸು ಸಾಧಿಸುವರು. ಕನ್ಯಾ ರಾಶಿಯವರಿಗೆ ಆಕಸ್ಮಿಕ ಧನಯೋಗ ಮತ್ತು ಕಾರ್ಯಸಿದ್ಧಿ ಲಭಿಸಲಿದೆ. ತುಲಾ ರಾಶಿಯವರಿಗೆ ಹೊಸ ಅವಕಾಶಗಳು ಒದಗಿ ಬರಲಿದ್ದು, ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ವೃಶ್ಚಿಕ ರಾಶಿಯವರಿಗೆ ಆಕಸ್ಮಿಕ ಧನಯೋಗ ಮತ್ತು ಅವಿವಾಹಿತರಿಗೆ ಶುಭ ಸಮಾಚಾರವಿದೆ. ಧನುಸ್ಸು ರಾಶಿಯವರಿಗೆ ಬಿಡುವಿಲ್ಲದ ಕೆಲಸ ಮತ್ತು ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಯೋಗವಿದೆ. ಮಕರ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಪ್ರಮೋಷನ್ ಲಭಿಸಲಿದೆ. ಕುಂಭ ರಾಶಿಯವರಿಗೆ ತಂದೆ-ತಾಯಿಗಳ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು, ಆದರೆ ಸಂಧ್ಯಾಕಾಲದಲ್ಲಿ ಶುಭ ಸುದ್ದಿ ದೊರೆಯಲಿದೆ. ಮೀನ ರಾಶಿಯವರಿಗೆ ಹೂಡಿಕೆಯಿಂದ ಲಾಭ ಮತ್ತು ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಬಣ್ಣ, ಸಂಖ್ಯೆ ಹಾಗೂ ವಿಶೇಷ ಮಂತ್ರಗಳನ್ನು ಸೂಚಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 19, 2026 06:16 AM