AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI Summit: ನವದೆಹಲಿ: ಎಐ ಶೃಂಗಸಭೆಯಲ್ಲಿ ಬಿಲ್ ಗೇಟ್ಸ್​ ಭಾಷಣ ರದ್ದು, ಕಾರಣವೇನು?

ದೆಹಲಿಯಲ್ಲಿ ನಡೆದ AI ಶೃಂಗಸಭೆಯಲ್ಲಿ ಬಿಲ್ ಗೇಟ್ಸ್ ಅವರ ನಿಗದಿತ ಭಾಷಣ ರದ್ದುಗೊಂಡಿದೆ. ಫೆಬ್ರವರಿ 19ರಂದು ಭಾರತ್ ಮಂಟಪದಲ್ಲಿ ನಡೆಯಬೇಕಿದ್ದ ಭಾಷಣವನ್ನು ಗೇಟ್ಸ್ ಫೌಂಡೇಶನ್‌ನ ಅಂಕುರ್ ವೋರಾ ಮಾಡಲಿದ್ದಾರೆ. ಜೆಫ್ರಿ ಎಪ್ಸ್ಟೀನ್ ವಿವಾದಾತ್ಮಕ ದಾಖಲೆಗಳಲ್ಲಿ ಬಿಲ್ ಗೇಟ್ಸ್ ಹೆಸರು ಕಾಣಿಸಿಕೊಂಡಿರುವುದೇ ಭಾಷಣ ರದ್ದತಿಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಶೃಂಗಸಭೆಯಲ್ಲಿ ಸುಂದರ್ ಪಿಚೈ ಮತ್ತು ಸ್ಯಾಮ್ ಆಲ್ಟ್‌ಮನ್‌ರಂತಹ ಗಣ್ಯರು ಭಾಗವಹಿಸಿದ್ದಾರೆ.

AI Summit: ನವದೆಹಲಿ: ಎಐ ಶೃಂಗಸಭೆಯಲ್ಲಿ ಬಿಲ್ ಗೇಟ್ಸ್​ ಭಾಷಣ ರದ್ದು, ಕಾರಣವೇನು?
ಬಿಲ್​ ಗೇಟ್ಸ್
ನಯನಾ ರಾಜೀವ್
|

Updated on: Feb 19, 2026 | 9:46 AM

Share

ನವದೆಹಲಿ, ಫೆಬ್ರವರಿ 19: ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಬಿಲ್​ಗೇಟ್ಸ್(​Bill Gates) ಇಂದು ಮಾಡಬೇಕಿದ್ದ ನಿಗದಿತ ಭಾಷಣ ರದ್ದುಗೊಂಡಿದೆ. ಗೇಟ್ಸ್ ಫೌಂಡೇಶನ್‌ನ ಆಫ್ರಿಕಾ ಮತ್ತು ಭಾರತ ಕಚೇರಿಯ ಅಧ್ಯಕ್ಷ ಅಂಕುರ್ ವೋರಾ ಅವರು ಮುಖ್ಯ ಭಾಷಣ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಐ ಶೃಂಗಸಭೆಯಲ್ಲಿ ಬಿಲ್​ ಗೇಟ್ಸ್​ ಪಾಲ್ಗೊಳ್ಳುವ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಆರಂಭದಲ್ಲಿ ಅವರು ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಸರ್ಕಾರಿ ಮೂಲಗಳು ಹೇಳಿದ್ದವು.

ಫೆಬ್ರವರಿ 16 ರಂದು ರಾಷ್ಟ್ರ ರಾಜಧಾನಿಯಲ್ಲಿ ಆರಂಭವಾದ ಎಐ ಇಂಪ್ಯಾಕ್ಟ್​ ಶೃಂಗಸಭೆಯ ಅಧಿಕೃತ ವೆಬ್​ಸೈಟ್​​ನಲ್ಲಿ ಅವರ ಹೆಸರನ್ನು ಹೆಸರಿಸಲಾಗಿತ್ತು. ಆದರೆ ಬುಧವಾರ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು ಇದು ಗೊಂದಲಕ್ಕೆ ಕಾರಣವಾಯಿತು. ಇಂದು ನಡೆದ AI ಶೃಂಗಸಭೆಯಲ್ಲಿ ಬಿಲ್ ಗೇಟ್ಸ್ ಭಾಷಣ ಮಾಡಬೇಕಿತ್ತು.

ಅವರ 12 ನಿಮಿಷಗಳ ಭಾಷಣ ಬೆಳಗ್ಗೆ 11.50 ಕ್ಕೆ ಭಾರತ್ ಮಂಟಪದಲ್ಲಿ ನಿಗದಿಯಾಗಿತ್ತು. ಅಲ್ಲಿ ಅನೇಕ ಜಾಗತಿಕ ನಾಯಕರು ಮತ್ತು ಉದ್ಯಮದ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ. AI ಶೃಂಗಸಭೆಯನ್ನು ಮುನ್ನಡೆಸುತ್ತಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಪತ್ರಿಕಾಗೋಷ್ಠಿಯಲ್ಲಿ ಗೇಟ್ಸ್ ಭಾಗವಹಿಸುವ ಬಗ್ಗೆ ಕೇಳಿದಾಗ ಉತ್ತರ ನೀಡಿರಲಿಲ್ಲ. ಅಮೆರಿಕದ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ವಿವಾದಾತ್ಮಕ ದಾಖಲೆಗಳಲ್ಲಿ ಅವರ ಹೆಸರು ಕಾಣಿಸಿಕೊಂಡಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಮತ್ತಷ್ಟಿ ಓದಿ: ಎಐ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತುವೇ ಕಳ್ಳತನ; ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಸ್ಟಾರ್ಟಪ್ ಸ್ಥಾಪಕನಿಗೆ ಶಾಕ್

ಫೆಬ್ರವರಿ 16 ರಂದು ದೆಹಲಿಯ ಭಾರತ್ ಮಂಟಪದಲ್ಲಿ AI ಶೃಂಗಸಭೆ ಪ್ರಾರಂಭವಾಯಿತು ಮತ್ತು ಫೆಬ್ರವರಿ 20 ರವರೆಗೆ ನಡೆಯಲಿದೆ. ಇದರ ಜೊತೆಗೆ ಇಂಡಿಯಾ AI ಇಂಪ್ಯಾಕ್ಟ್ ಎಕ್ಸ್‌ಪೋ 2026 ಕೂಡ ನಡೆಯುತ್ತಿದ್ದು, ಪ್ರಪಂಚದಾದ್ಯಂತದ ಕಂಪನಿಗಳು ನಮ್ಮ ನಾವೀನ್ಯತೆಯನ್ನು ಪ್ರದರ್ಶಿಸಲಿವೆ.

ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಓಪನ್‌ಎಐನ ಸ್ಯಾಮ್ ಆಲ್ಟ್‌ಮನ್‌ರಂತಹ ಗಣ್ಯರು ಭಾಗವಹಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮೆಜೆಸ್ಟಿಕ್ ರೈಲ್ವೆ ಪಾರ್ಕಿಂಗ್ ಲಾಟ್‌ನಲ್ಲಿ ಕಾರಿಗೆ ಬೆಂಕಿ
ಮೆಜೆಸ್ಟಿಕ್ ರೈಲ್ವೆ ಪಾರ್ಕಿಂಗ್ ಲಾಟ್‌ನಲ್ಲಿ ಕಾರಿಗೆ ಬೆಂಕಿ
‘ಯಾವನು ಕೇಳಿದ ನಿಮ್ಮ ಕಮೆಂಟ್?’; ರವಿಚಂದ್ರನ್ ಗರಂ ಆಗಿದ್ದು ಯಾರ ಬಗ್ಗೆ?
‘ಯಾವನು ಕೇಳಿದ ನಿಮ್ಮ ಕಮೆಂಟ್?’; ರವಿಚಂದ್ರನ್ ಗರಂ ಆಗಿದ್ದು ಯಾರ ಬಗ್ಗೆ?
ವಧುವಿನ ಮೇಲೆ ಹೂವಿನಂತೆ ಬರೋಬ್ಬರಿ 8 ಕೋಟಿ ರೂ. ನಗದು ಚೆಲ್ಲಿದ ವರ
ವಧುವಿನ ಮೇಲೆ ಹೂವಿನಂತೆ ಬರೋಬ್ಬರಿ 8 ಕೋಟಿ ರೂ. ನಗದು ಚೆಲ್ಲಿದ ವರ
ಮಕ್ಕಳು ಮಾತನಾಡುವಾಗ ತೊದಲುತ್ತಿದ್ರೆ ಜ್ಯೋತಿಷ್ಯ ಪ್ರಕಾರ ಇದೇ ಕಾರಣ
ಮಕ್ಕಳು ಮಾತನಾಡುವಾಗ ತೊದಲುತ್ತಿದ್ರೆ ಜ್ಯೋತಿಷ್ಯ ಪ್ರಕಾರ ಇದೇ ಕಾರಣ
ಮದ್ಯದ ಅಮಲಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು
ಮದ್ಯದ ಅಮಲಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು
ಇಂದು ರಾಶಿಯವರಿಗೆಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ
ಇಂದು ರಾಶಿಯವರಿಗೆಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ
ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
ದಿ ರೈಸ್ ಆಫ್ ಅಶೋಕ: ವೇದಿಕೆಯಲ್ಲಿ ಭಾವುಕವಾಗಿ ಮಾತನಾಡಿದ ಸತೀಶ್ ನೀನಾಸಂ
ದಿ ರೈಸ್ ಆಫ್ ಅಶೋಕ: ವೇದಿಕೆಯಲ್ಲಿ ಭಾವುಕವಾಗಿ ಮಾತನಾಡಿದ ಸತೀಶ್ ನೀನಾಸಂ
ಸಿಎಂ ಬದಲಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ
ಸಿಎಂ ಬದಲಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ
ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ
ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ