AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾಲಕಿಗೆ ನಾಲ್ಕು ಕೈ, ನಾಲ್ಕು ಕಾಲುಗಳು, ಸಹಾಯಕ್ಕೆ ನಿಂತ ರಿಯಲ್ ಹೀರೋ ಸೋನು ಸೂದ್

ನಾಲ್ಕು ಕೈಗಳು ಹಾಗೂ ನಾಲ್ಕು ಕಾಲುಗಳನ್ನು ಹೊಂದಿದ ಬಿಹಾರ ಮೂಲದ ಬಾಲಕಿಯ ಚಿಕಿತ್ಸೆಗೆ ನಟ ಸೋನು ಸೂದ್ ಅವರು ಧಾವಿಸಿದ್ದು, ವೈದ್ಯರು ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

Viral Video: ಬಾಲಕಿಗೆ ನಾಲ್ಕು ಕೈ, ನಾಲ್ಕು ಕಾಲುಗಳು, ಸಹಾಯಕ್ಕೆ ನಿಂತ ರಿಯಲ್ ಹೀರೋ ಸೋನು ಸೂದ್
ಬಾಲಕಿಗೆ ವೈದ್ಯರು ಚಿಕಿತ್ಸೆ ನೀಡುತ್ತಿರುವುದು
TV9 Web
| Edited By: |

Updated on:May 29, 2022 | 6:57 AM

Share

ಬಿಹಾರ: ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳನ್ನು ಹೊಂದಿರುವ ಬಾಲಕಿ (Girl)ಯ ವಿಡಿಯೋ (Video) ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಬಿಹಾರದ ನೆವಾಡಾ ಜಿಲ್ಲೆಯ ಬಡ ಕುಟುಂಬವೊಂದಕ್ಕೆ ಸೇರಿದ ಎರಡೂವರೆ ವರ್ಷದ ಬಾಲಕಿಯೋರ್ವಳು ನಾಲ್ಕು ಕೈ ಹಾಗೂ ನಾಲ್ಕು ಕಾಲುಗಳನ್ನು ಹೊಂದಿದ್ದಾಳೆ. ಈಕೆಯ ಚಿಕಿತ್ಸೆಗೆ ಹಣಕಾಸಿನ ಕೊರತೆ ಎದುರಾದ ಹಿನ್ನೆಲೆ ಬಾಲಿವುಡ್ ನಟ, ರಿಯಲ್ ಹೀರೋ ಖ್ಯಾತಿಯ ಸೋನು ಸೂದ್ (Sonu Sood) ಅವರು ನೆರವಿಗೆ ಧಾವಿಸಿದ್ದಾರೆ.

ಇದನ್ನೂ ಓದಿ: IPL 2022: ಆರ್​ಸಿಬಿ ಜರ್ಸಿ ಕಳಚಿ ಬೌಲ್ಟ್ ನೀಡಿದ ರಾಜಸ್ಥಾನ ಜರ್ಸಿ ತೊಟ್ಟ ಆರ್​ಸಿಬಿ ಅಭಿಮಾನಿ! ವಿಡಿಯೋ ವೈರಲ್

ವೈರಲ್ ವಿಡಿಯೋದಲ್ಲಿರುವಂತೆ ಬಾಲಕಿಯು ತನ್ನ ಹೊಟ್ಟೆಯ ಭಾಗಕ್ಕೆ ಹೊಂದಿಕೊಂಡು ಹೆಚ್ಚುವರಿ ಕೈ ಕಾಲುಗಳನ್ನು ಹೊಂದಿದ್ದಾಳೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಅಂದಿನಿಂದ ಸುಮಾರು 15 ಸಾವಿರ ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ಅಲ್ಲದೆ ಆಕೆಯ ಚಿಕಿತ್ಸೆಗೆ ನೆರವಾಗುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ನೆಟ್ಟಿಗರು ಒತ್ತಾಯಿಸಿದ್ದಾರೆ.

ಇದೀಗ, ನಟ ಸೋನು ಸೂದ್ ಬಾಲಕಿಯ ಚಿಕಿತ್ಸಾ ನೆರವಿಗೆ ಧಾವಿಸಿದ್ದಾರೆ. ಅದರಂತೆ ಸೋನು ಸೂದ್ ಅವರು ಬಾಲಕಿಗೆ ವೈದ್ಯರು ಚಿಕಿತ್ಸೆ ನೀಡುತ್ತಿರುವ ವಿಡಿಯೋ ಕ್ಲಿಕ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ”ಉದ್ವೇಗಕ್ಕೆ ಒಳಗಾಗಬೇಡಿ, ಪ್ರಾರ್ಥನೆ ಮಾಡಿ” ಎಂದು ಬರೆದುಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ನೆಟ್ಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿಯ ಹೋಟೆಲ್​ನಲ್ಲಿ ಊಟ ಮಾಡಿದ ಈ ಸ್ಟಾರ್​ ನಟನನ್ನು ಗುರುತಿಸುತ್ತೀರಾ? ಇಲ್ಲಿದೆ ವೈರಲ್ ವಿಡಿಯೋ

ಬಾಲಕಿಯ ಕಷ್ಟದ ಬಗ್ಗೆ ಹಿಂದಿ ಸುದ್ದಿ ಸಂಸ್ಥೆ ನ್ಯೂಸ್ 24 ಸುದ್ದಿಯೊಂದನ್ನು ಪ್ರಸಾರ ಮಾಡಿದೆ. ಅಲ್ಲದೆ, ಬಾಲಕಿಯ ಪೋಷಕರು ಚಿಕಿತ್ಸೆಗಾಗಿ ಎಸ್‌ಡಿಒ ಕಚೇರಿಗೆ ಆಗಮಿಸಿ ಸಹಾಯಕ್ಕಾಗಿ ಮನವಿ ಮಾಡಿದರು ಎಂದು ಹೇಳಿದೆ.

ಇಡೀ ದೇಶವೇ ಕೋವಿಡ್ ಮಹಾಮಾರಿ ಸೋಂಕಿನಿಂದ ತತ್ತರಿಸಿದ್ದಾಗ ಸುಮಾರು 15,000 ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಬಸ್‌ಗಳನ್ನು ವ್ಯವಸ್ಥೆ ಮಾಡುವ ಮೂಲಕ ಸೋನು ಸೂದ್ ಮಾನವೀಯತೆ ಮೆರೆದಿದ್ದರು. ಒಂದಷ್ಟು ಮಂದಿಗೆ ಉದ್ಯೋಗ ಕಲ್ಪಿಸಲು ನೆರವಾಗಿದ್ದರು. ಇವರ ಕಾರ್ಯಗಳನ್ನು ಮೆಚ್ಚಿದ ಜನಸಾಮಾನ್ಯರು, ರಿಯಲ್ ಹೀರೋ ಎಂದು ಬಣ್ಣಿಸಿದ್ದಾರೆ. ಸೋದ್ ಕಾರ್ಯ ಮೆಚ್ಚಿದ ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂ (UNDP) ಲಾಕ್‌ಡೌನ್ ಸಮಯದಲ್ಲಿ ಅವರ ಲೋಕೋಪಕಾರಿ ಕೆಲಸಕ್ಕಾಗಿ ಪ್ರತಿಷ್ಠಿತ SDG ವಿಶೇಷ ಮಾನವೀಯ ಕ್ರಿಯೆಯ ಪ್ರಶಸ್ತಿ ನೀಡಿ ಗೌರವಿಸಿತು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:51 am, Sun, 29 May 22