Muscle Cramps: ಸ್ನಾಯು ಸೆಳೆತವೇ?, ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ ಹೀಗೆ ಮಾಡಿ
Muscle Cramps:ಕಾಲುಗಳಲ್ಲಿ ಸೆಳೆತ ಜುಮ್ಮೆನ್ನುವ ಅನುಭವ, ಕೂರುವ ಹಾಗಿಲ್ಲ ನಿಲ್ಲುವ ಹಾಗಿಲ್ಲ ಇಂಥಾ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತದೆ.
ಕಾಲುಗಳಲ್ಲಿ ಸೆಳೆತ ಜುಮ್ಮೆನ್ನುವ ಅನುಭವ, ಕೂರುವ ಹಾಗಿಲ್ಲ ನಿಲ್ಲುವ ಹಾಗಿಲ್ಲ ಇಂಥಾ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತದೆ. ಈ ಸ್ನಾಯು ಸೆಳೆತ ಅಥವಾ ಮಾಂಸಖಂಡಗಳ ಸೆಳೆತ ಅತ್ಯಂತ ತೊಂದರೆದಾಯಕ. ಇದು ಯಾವಾಗಲೂ ಬರದಿದ್ದರೂ ಆಗಾಗ ಅಂದರೆ ವ್ಯಾಯಾಮ ಮಾಡುವಾಗ, ರಾತ್ರಿ ಮಲಗಿದಾಗ ಅಥವಾ ಯಾವುದಾದರೂ ಕೆಲಸದಲ್ಲಿ ತೊಡಗಿರುವಾಗ ಬಂದುಬಿಡುತ್ತದೆ.
ಈ ವೇಳೆ ಕಾಲುಗಳನ್ನು ಅಲ್ಲುಗಾಡಿಸಲು ಆಗದೆ ಇರುವ ರೀತಿಯ ನೋವು ಕಾಣಿಸುವುದು. ಕಾಲುಗಳಲ್ಲಿನ ಸ್ನಾಯುಗಳಲ್ಲಿ ಮೊದಲಿಗೆ ಸಂಕೋಚನ ಉಂಟಾಗುವುದು.
ಇದು ಸೆಳೆತ ಮತ್ತು ಝಮ್ಮೆನ್ನಿಸುವ ಸೂಚನೆಯಾಗಿದ್ದು, ಇದರ ಬಳಿಕ ಸ್ನಾಯುಗಳಲ್ಲಿನ ಸೆಳೆತದೊಂದಿಗೆ ತೀವ್ರ ನೋವು ಮತ್ತು ಊತವು ಕಂಡುಬರುವುದು.
ಸ್ನಾಯು ಸೆಳೆತಕ್ಕೆ ಕಾರಣಗಳು: ಸ್ನಾಯು ದೌರ್ಬಲ್ಯ ವಿಪರೀತ ಸ್ನಾಯುವಿನ ಬಳಕೆ ಬೆವರಿನಿಂದಾಗಿ ದೇಹದಲ್ಲಿ ಎಲೆಕ್ಟ್ರೊಲೈಟ್ ಗಳು ಕೊರತೆ (ಸಿಎ ಮತ್ತು ಕೆ) ದೇಹದಲ್ಲಿ ಲ್ಯಾಕ್ಟಿಕ್ ಆಮ್ಲ ನಿರ್ಮಾಣವಾದಾಗ (ಸ್ನಾಯುಗಳಲ್ಲಿ ಚಯಾಪಚಯ ಉತ್ಪನ್ನಗಳು) ಮಾಂಸಖಂಡಗಳಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯ ಅಂಗಾಂಶಗಳಲ್ಲಿ ರಕ್ತ ಪರಿಚಲನೆಗೆ ತಡೆ ಉಂಟಾದಾಗ ಸ್ನಾಯು ಸೆಳೆತ ಶುರುವಾಗುತ್ತದೆ.
ತಂಪು ಶಾಖ: ಸ್ನಾಯುಗಳಲ್ಲಿನ ಸೆಳೆತಕ್ಕೆ ತಂಪು ಶಾಖ ನೀಡಬಹುದು. ತಂಪು ಶಾಖದಿಂದ ನೋವು ತಗ್ಗುವುದು ಮತ್ತು ಸ್ನಾಯುಗಳಲ್ಲಿ ಉರಿಯೂತ ಕಡಿಮೆ ಆಗಿ ಆರಾಮ ಸಿಗುವುದು. ವಿಧಾನ -ಟವೆಲ್ ನಲ್ಲಿ ಐಸ್ ತುಂಡುಗಳನ್ನು ಕಟ್ಟಿಕೊಳ್ಳಿ. -ಇದನ್ನು ಸ್ನಾಯುಗಳ ಮೇಲೆ ಇಡಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ. -ಇದನ್ನು ಎರಡು ಗಂಟೆಗೊಮ್ಮೆ ಪುನರಾವರ್ತನೆ ಮಾಡಿ. -ಸ್ನಾಯುಗಳಿಗೆ ಆರಾಮ ಸಿಗಲು ತಣ್ಣೀರಿನ ಸ್ನಾನ ಮಾಡಬಹುದು.
ದೇಹದಲ್ಲಿ ನೀರಿನಂಶದ ಸಮತೋಲನ: ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಸ್ನಾಯು ಸೆಳೆತ ಉಂಟಾಗುವುದು ಸಹಜ. ಆದ್ದರಿಂದ ವ್ಯಾಯಾಮ ಅಥವಾ ಅತೀಯಾಗಿ ಬೆವರುತ್ತಿರುವ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.
ನಿರಂತರ ವ್ಯಾಯಾಮ: ಕಾಲುಗಳಿಗೆ ಸಂಬಂಧಿಸಿದ ವ್ಯಾಯಾಮವನ್ನು ದಿನವೂ ಮಾಡಬೇಕು. ಕಾಲುಗಳನ್ನು ಮಡಚುವುದು, ಕಾಲುಗಳನ್ನು ವಿಸ್ತರಿಸಿ ಮಲಗುವುದು ರಕ್ತದ ಹರಿವಿಗೆ ನೆರವಾಗುತ್ತವೆ.
ಶುಂಠಿ ಟೀ: ಶುಂಠಿಯಲ್ಲಿ ಇರುವಂತಹ ಮೆಗ್ನಿಶಿಯಂ ಅಂಶವು ಕಾಲುಗಳಲ್ಲಿನ ಸೆಳೆತವನ್ನು ಪರಿಣಾಮಕಾರಿ ಆಗಿ ನಿವಾರಿಸುವುದು. ಇದು ರಕ್ತ ಸಂಚಾರವನ್ನು ಸುಧಾರಿಸುವುದು. ಪ್ರತಿನಿತ್ಯವೂ ಒಂದು ಕಪ್ ಶುಂಠಿ ಟೀ ಕುಡಿಯಿರಿ.
ಇದರ ಹಬೆಯನ್ನು ತೆಗೆದುಕೊಳ್ಳಬಹುದು ಮತ್ತು ಸ್ನಾನದ ವೇಳೆ ಕೂಡ ಇದನ್ನು ಬಳಸಬಹುದು. ಇದು ಬಿಸಿಯಾದ ಪರಿಣಾಮ ಉಂಟು ಮಾಡಿ ಸ್ನಾಯುಗಳಿಗೆ ಶಮನ ನೀಡುವುದು. ಸರಳ ಶುಂಠಿ ಚಾ ಬಳಸಿಕೊಂಡರೆ ಆಗ ಇದು ಇತರ ಕೆಲವು ಸಮಸ್ಯೆಗಳಾಗಿರುವಂತಹ ಹೊಟ್ಟೆ ನೋವು, ಜ್ವರ, ಶೀತ, ಕೆಮ್ಮು ಇತ್ಯಾದಿಗಳನ್ನು ನಿವಾರಿಸುವುದು.
ಆಪಲ್ ಸೀಡರ್ ವಿನೇಗರ್: ಸ್ನಾಯುಗಳಲ್ಲಿ ಸೆಳೆತ ಕಂಡುಬರಲು ಪೊಟಾಶಿಯಂ ಕೊರತೆಯು ಒಂದು ಕಾರಣ. ಇದು ನಿರ್ಜಲೀಕರಣವನ್ನು ನಿವಾರಣೆ ಮಾಡುವ ಜತೆಗೆ ಇದರಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ದೇಹದಲ್ಲಿನ ದ್ರವಾಂಶವನ್ನು ಸಮತೋಲನದಲ್ಲಿ ಇಡುವುದು.
ಆಪಲ್ ಸೀಡರ್ ವಿನೇಗರ್ ನಲ್ಲಿ ಇರುವಂತಹ ಆರೋಗ್ಯ ಲಾಭಗಳು ಅಪಾರ. ಇದರಲ್ಲಿ ಇರುವ ಅಧಿಕ ಪೊಟಾಶಿಯಂ ಅಂಶವು ಕಾಲಿನಲ್ಲಿನ ಸ್ನಾಯು ಸೆಳೆತ ದೂರ ಮಾಡಲು ಒಳ್ಳೆಯ ಮನೆಮದ್ದು.
ದೇಹಕ್ಕೆ ಸೂಕ್ತವೆನಿಸುವ ಚಪ್ಪಲಿಗಳನ್ನೇ ಧರಿಸಿ ನಮ್ಮ ದೇಹಕ್ಕೆ ಹಾಗೂ ಪಾದಗಳಿಗೆ ಸರಿಹೊಂದುವ ಚಪ್ಪಲಿ ಧರಿಸುವುದು ಒಳ್ಳೆಯದು. ಚಪ್ಪಲಿ ತುಂಬಾ ಬಿಗಿಯಾಗಿ ಇರದಿರಲಿ.
ಈ ಮೇಲಿನ ಮಾಹಿತಿಯು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಇಂತಹ ಸಮಸ್ಯೆಗಳು ಕಂಡು ಬಂದರೆ ತುರ್ತು ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ