AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asthma: ಮಕ್ಕಳಲ್ಲಿ ಅಸ್ತಮಾ: ಯಾವ ವಯಸ್ಸಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು?

Asthma: ಜಗತ್ತಿನಲ್ಲಿ ಸುಮಾರು 400 ಮಿಲಿಯನ್​ಗೂ ಅಧಿಕ ಮಂದಿ ಅಸ್ತಮಾ(Asthama) ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ 100 ಮಿಲಿಯನ್‌ ರೋಗಿಗಳು ಭಾರತದಲ್ಲಿದ್ದಾರೆ.

Asthma: ಮಕ್ಕಳಲ್ಲಿ ಅಸ್ತಮಾ: ಯಾವ ವಯಸ್ಸಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು?
Asthma
TV9 Web
| Edited By: |

Updated on:May 29, 2022 | 1:42 PM

Share

ಜಗತ್ತಿನಲ್ಲಿ ಸುಮಾರು 400 ಮಿಲಿಯನ್​ಗೂ ಅಧಿಕ ಮಂದಿ ಅಸ್ತಮಾ(Asthma) ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ 100 ಮಿಲಿಯನ್‌ ರೋಗಿಗಳು ಭಾರತದಲ್ಲಿದ್ದಾರೆ. ಅತ್ಯಂತ ಅಪಾಯಕಾರಿ ಕಾಯಿಲೆಗಳಾದ ಡಯಾಬಿಟಿಸ್‌, ಹೃದ್ರೋಗ ಮತ್ತು ಕ್ಯಾನ್ಸರ್‌ಗಳಿಗಿಂತಲೂ ಹೆಚ್ಚು ಜನರು ಅಸ್ತಮಾ ಕಾಯಿಲೆಯಿಂದ ಸಾವು ಮತ್ತು ನೋವು ಅನುಭವಿಸುತ್ತಿದ್ದಾರೆ.

ಅಸ್ತಮಾ ಪ್ರಾರಂಭವಾದ ದಿನದಿಂದಲೇ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ ಬಹುಬೇಗನೆ ಗುಣಪಡಿಸಬಹುದು. ಶ್ವಾಸಕೋಶದ ರಚನೆ: ಮೂಗಿನಿಂದ ಪ್ರಾರಂಭವಾಗಿ ಸಣ್ಣ ಸಣ್ಣದಾಗಿರುವ ಗಾಲಿ ಚೀಲದವರೆಗೆ ಶ್ವಾಸಕೋಶಗಳು ಸಂಪರ್ಕ ಹೊಂದಿವೆ. ಚಿಕ್ಕ ಗಾಳಿಚೀಲಗಳಲ್ಲಿ ಇಂಗಾಲದ ಡೈಆಕ್ಸೈಡ್‌ನ್ನು ಹೊರದೂಡಿ ಆಮ್ಲಜನಕವನ್ನು ಹೀರಿಕೊಳ್ಳುವ ಕೆಲಸ ಶ್ವಾಸಕೋಶದ್ದಾಗಿದೆ.

ಮಕ್ಕಳಿಗೆ ಅಸ್ತಮಾ: ಮುಂದುವರಿದ ರಾಷ್ಟ್ರಗಳಲ್ಲಿ ಪ್ರತಿಶತ 0.8ರಿಂದ 37ರಷ್ಟು ಮಕ್ಕಳು ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು, ಭಾರತದಲ್ಲಿ ಪ್ರತಿಶತ ಶೇ.2ರಿಂದ 20ರಷ್ಟಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಸ್ತಮಾದಿಂದ ಬಳಲುವ ಮಕ್ಕಳ ಪ್ರಮಾಣ ಶೇ.11ರಿಂದ 31 ಎಂದು ವೈಜ್ಞಾನಿಕವಾಗಿ ಗಣತಿ ಮಾಡಿದ ದಾಖಲಾತಿಗಳಿಂದ ದೃಢಪಡಿಸಲಾಗಿದೆ.

ಅಸ್ತಮಾ ಪತ್ತೆ ಹಚ್ಚುವುದು ಹೇಗೆ?: ಶಿಶುಗಳು ಮತ್ತು ಅಂಬೆಗಾಲಿಡುವ ಮಕ್ಕಳಲ್ಲಿ ಪತ್ತೆಯಾಗುವ ಅಸ್ತಮಾವನ್ನು ಸುಲಭವಾಗಿ ರೋಗ ನಿರ್ಣಯ ಮಾಡುವ ಯಾವುದೇ ಪರೀಕ್ಷೆಗಳಿಲ್ಲ. ಮಕ್ಕಳ ತಜ್ಞರು ಮತ್ತು ಪೋಷಕರು ಮಗುವಿಗೆ ಯಾವುದರಿಂದ ಉಬ್ಬಸ ಬರುತ್ತದೆ ಎಂಬುದನ್ನು ಮಾನಿಟರ್ ಮಾಡಬೇಕು. ಇದು ಅಸ್ತಮಾಕ್ಕಿಂತ ಹೆಚ್ಚಾಗಿ ಧೂಳಿಗೆ ಒಡ್ಡುವುದರಿಂದ ಉಬ್ಬಸ ಉಂಟಾಗುವುದು ಅಥವಾ ಶೀತವಿಲ್ಲದೆ ಸ್ವಯಂಪ್ರೇರಿತವಾಗಿ ಮತ್ತು ಮಗುವಿನಲ್ಲಿ ಅಲರ್ಜಿ ಇದ್ದರೆ ಅಥವಾ ಎಸ್ಜಿಮಾ ಮತ್ತು ಕುಟುಂಬದಲ್ಲಿ ಅಸ್ತಮಾ ಅಥವಾ ಅಲರ್ಜಿಯ ಇತಿಹಾಸ ಹೊಂದಿದ್ದರೆ ಅದನ್ನು ಗಮನಿಸಬೇಕು.

ಅಸ್ತಮಾವಿರುವ ಎಲ್ಲ ಮಕ್ಕಳಲ್ಲಿ ಉಬ್ಬಸವಿರುವುದಿಲ್ಲ. ಕೆಲವು ಮಕ್ಕಳಲ್ಲಿ ಅಸ್ತಮಾ ಇರುತ್ತದೆ. ಅದಕ್ಕೆ ಕಾರಣವೆಂದರೆ ತೀವ್ರವಾದ ಕೆಮ್ಮು. 5 ವರ್ಷಗಳವರೆಗೆ ಅನಿಶ್ಚಿತತೆ ಇದ್ದರೆ ಅಸ್ತಮಾ ಪತ್ತೆಗಾಗಿ ಶ್ವಾಸಕೋಶ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ಪರೀಕ್ಷೆ ಮಾಡಬೇಕು.

ಉಬ್ಬಸ ಎಂದರೇನು? : ನಾವು ಉಸಿರಾಡುವ ಶ್ವಾಸಕೋಶದ ನಾಳಗಳು ಕಾರಣಾಂತರದಿಂದ ಸಂಕುಚಿತಗೊಂಡು ಅವುಗಳ ವ್ಯಾಸ ಕಮ್ಮಿಯಾಗಿ ರೋಗಿ ಉಸಿರಾಡುವಾಗ ಹೊರ ಹೊಮ್ಮುವ ಶಬ್ದ ಶಿಳ್ಳೆಯಂತೆ ಇರುತ್ತದೆ. ಅದನ್ನೇ ವೀಸ್‌ ಎಂದು ಕರೆಯಲಾಗುತ್ತದೆ.

ಅದು ತೀವ್ರವಾದಾಗ ಆ ಶಬ್ದವು ಸ್ಕೆತಸ್ಕೋಫಿನ ಸಹಾಯ ಇಲ್ಲದೆ ಕೇಳಿಸುತ್ತದೆ. ಮಗುವಿಗೆ ಒಂದು ವರ್ಷದಲ್ಲಿ ಕನಿಷ್ಟ ಮೂರಕ್ಕಿಂತ ಹೆಚ್ಚು ಬಾರಿ ಉಬ್ಬಸದೊಂದಿಗೆ ಕೆಮ್ಮು ಇದ್ದು ಮತ್ತು ಆ ಕೆಮ್ಮು ಪ್ರತಿಬಾರಿಯೂ ಮೂರು ದಿನಕ್ಕಿಂತ ಹೆಚ್ಚು ದಿನವಿದ್ದರೆ ಅಂತ ಮಕ್ಕಳಿಗೆ ಅಸ್ತಮಾ ಇದೆ ಎಂದು ಗುರುತಿಸಲಾಗುವುದು.

ಯಾವ ಮಕ್ಕಳಿಗೆ ಅಸ್ತಮಾ ಹೆಚ್ಚು ಕಾಣಿಸಿಕೊಳ್ಳುತ್ತದೆ?: ಸಾಮಾನ್ಯವಾಗಿ ಒಂದು ವರ್ಷ ಮೇಲ್ಪಟ್ಟ ಮಕ್ಕಳಲ್ಲಿ. ಗಂಡು ಮಕ್ಕಳು ಪ್ರಾಯಕ್ಕಿಂತ ಮೊದಲು ಹಾಗೂ ಹೆಣ್ಣು ಮಕ್ಕಳು ಪ್ರಾಯದಲ್ಲಿದ್ದಾಗ. ಅಸ್ತಮಾ ಹಾಗೂ ಅಲರ್ಜಿ ಇರುವ ಪಾಲಕರಿದ್ದಲ್ಲಿ , ಮಗುವು ಕಡಿಮೆ ತೂಕದೊಂದಿಗೆ ಜನಿಸಿದ್ದಲ್ಲಿ , ಬಾಲ್ಯದಲ್ಲಿ ತಾಯಿಯ ಹಾಲನ್ನು ಉಣಿಸದಿದ್ದಲ್ಲಿ, ಮಗುವು ಕೈಗಾರಿಕೆಯಿಂದ ಮುಂದುವರಿದ ನಗರದಲ್ಲಿ ವಾಸಿಸುತ್ತಿದ್ದರೆ ಹಾಗೂ ಹೆಚ್ಚು ತೂಕ ಹೊಂದಿದ ಮಕ್ಕಳಲ್ಲಿ ಕಾಯಿಲೆ ಬೇರೆ ಮಕ್ಕಳಿಗಿಂತಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಚಿಕಿತ್ಸೆ: ಕೆಮ್ಮು, ಉಬ್ಬಸ ಮತ್ತು ಎದೆ ಬಿಗಿಯುವಂತಹ ಸಂವೇದನೆ ಉಂಟು ಮಾಡುವ ದೀರ್ಘಕಾಲದ ಅಸ್ತಮಾದ ಸ್ಥಿತಿಯಾಗಿದೆ. ಇದು ಶ್ವಾಸಕೋಶಕ್ಕೆ ಗಾಳಿ ರವಾನಿಸುವ ಮತ್ತು ಅಲ್ಲಿಂದ ಹೊರಕ್ಕೆ ಹಾಕುವ ಶ್ವಾಸ ನಾಳಗಳ ಉರಿಯೂತದಿಂದ ಉಂಟಾಗುತ್ತದೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನಾಧರಿಸಿರುತ್ತದೆ.

ಆರೋಗ್ಯ ಸಂಬಂಧಿತ ಸಮಸ್ಯೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:40 pm, Sun, 29 May 22

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ