AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Blood Pressure: ರಕ್ತದೊತ್ತಡ ಕಡಿಮೆ ಮಾಡಲು ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು

High Blood Pressure: ರಕ್ತದೊತ್ತಡ (Blood Pressure)ಎಂಬುದು ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುತ್ತದೆ. ರಕ್ತದೊತ್ತಡವು ಹೃದಯ ಸಂಬಂಧಿ ಕಾಯಿಲೆಗಳನ್ನುಂಟು ಮಾಡಬಹುದು.

Blood Pressure: ರಕ್ತದೊತ್ತಡ ಕಡಿಮೆ ಮಾಡಲು ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು
High Blood Pressure
TV9 Web
| Edited By: |

Updated on: May 28, 2022 | 3:55 PM

Share

ರಕ್ತದೊತ್ತಡ (Blood Pressure)ಎಂಬುದು ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುತ್ತದೆ. ರಕ್ತದೊತ್ತಡವು ಹೃದಯ ಸಂಬಂಧಿ ಕಾಯಿಲೆಗಳನ್ನುಂಟು ಮಾಡಬಹುದು. ರಕ್ತದ ಒತ್ತಡ ಅಥವಾ ಸ್ಥಿತಿಯು ದೇಹದಲ್ಲಿ ಸಮತೋಲನದಿಂದ ಕೂಡಿರಬೇಕು. ಇಲ್ಲವಾದರೆ ಅಧಿಕ ಅಥವಾ ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಒಳಗಾಗಬೇಕಾಗುವುದು. ಸಾಮಾನ್ಯವಾಗಿ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವರು. ​

ರಕ್ತದೊತ್ತಡವನ್ನು ಕಡಿಮೆ ಮಾಡಲು ಇಲ್ಲಿವೆ ಸಲಹೆಗಳು ತೂಕ ಇಳಿಕೆ: ತೂಕದ ಸಮತೋಲನವನ್ನು ಕಾಯ್ದುಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಒಂದೊಮ್ಮೆ ನೀವು ಅಧಿಕ ತೂಕವಿದ್ದರೆ ತೂಕವನ್ನು ಇಳಿಸುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಅಧಿಕ ತೂಕವು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಎಣ್ಣೆ ಪದಾರ್ಥಗಳಿಂದ ದೂರವಿರಿ: ರುಚಿಕರವಾದ ಚಾಟ್ಸ್​ಗಳು, ಕಚೋರಿ, ಸಮೋಸ, ಪಿಜ್ಜಾ, ಟೊಮೆಟೋ ಸಾಸ್ ಸೇರಿದಂತೆ ಇತರೆ ಆಹಾರ ಪದಾರ್ಥಗಳಿಂದ ದೂರವಿರಿ. ಹೆಚ್ಚು ಉಪ್ಪು ಬಳಸಿರುವ ಪದಾರ್ಥಗಳ ಸೇವನೆ ಬೇಡ.

ಒಂದೆಡೆ ಕೂರದಿರಿ: ಒಂದೊಮ್ಮೆ ನೀವು ವರ್ಕ್ ಫ್ರಂ ಹೋಂನಲ್ಲಿದ್ದರೆ ಕುಳಿತಲ್ಲೇ ಕುಳಿತಿರಬೇಡಿ, ಕೆಲಸದ ಬಿಡುವಿನಲ್ಲಿ ಓಡಾಡಿ.

ಮದ್ಯಪಾನ ಕಡಿಮೆ ಮಾಡಿ: ಮದ್ಯಪಾನ ಮಾಡದಿರುವುದು ಎಲ್ಲಾ ದೃಷ್ಟಿಯಿಂದಲೂ ಒಳ್ಳೆಯದು ಮದ್ಯಪಾನ ಮಾಡಿದರೆ ಕೇವಲ ರಕ್ತದೊತ್ತಡ ಮಾತ್ರಬಲ್ಲ ಕರುಳಿಗೆ ಸಂಬಂಧಿಸಿದ ಕಾಯಿಲೆಗಳಿಂದಲೂ ದೂರವಿರಬಹುದು.

ಯೋಗ, ಪ್ರಾಣಾಯಾಮ, ಧ್ಯಾನ ಮಾಡಿ: ಪ್ರಾಣಾಯಾಮ, ಧ್ಯಾನ, ಉಸಿರಾಟದ ಕೆಲವು ವ್ಯಾಯಾಮಗಳನ್ನು ಮಾಡಿ.

ಕಡಿಮೆ ರಕ್ತದೊತ್ತಡವೂ ಅಪಾಯಕಾರಿ ಆಗಾಗ ರಕ್ತದೊತ್ತಡ ಹೇಗಿದೆ? ಎನ್ನುವುದನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಇಲ್ಲವಾದರೆ ಅನಿರೀಕ್ಷಿತವಾಗಿ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು. ರಕ್ತದೊತ್ತಡದ ಪ್ರಭಾವವು ಲಿಂಗ ಮತ್ತು ವಯಸ್ಸಿನ ಆಧಾರದ ಮೇಲೆ ಬದಲಾವಣೆಯನ್ನು ಅನುಭವಿಸಬೇಕಾಗುವುದು. ಸಾಮಾನ್ಯ ರಕ್ತದೊತ್ತಡದ ಪರೀಕ್ಷೆಯಲ್ಲಿ ಡಯಾಸ್ಟೋಲಿಕ್ ಒತ್ತಡವು 95 ಎಮ್ ಎಮ್ ಹೆಚ್ ಜಿ ಅನ್ನು ಮೀರುವುದಿಲ್ಲ. ಅಂತೆಯೇ ಸಿಸ್ಟೋಲಿಕ್ ಒತ್ತಡವು 140 ಎಮ್ ಎಮ್ ಹೆಚ್ ಜಿ ಮೀರಿರುವುದಿಲ್ಲ. ಡಯಾಸ್ಟೋಲಿಕ್ ಮತ್ತು ಸಿಸ್ಟೋಲಿಕ್ ಎರಡರ ಪ್ರಮಾಣವು ಕಡಿಮೆ ಆಗಿದ್ದರೆ ರಕ್ತದೊತ್ತಡವು ತುಂಬಾ ಕಡಿಮೆಯಾಗುವುದು. ಮಹಿಳೆಯರಿಗೆ ಇದು 100-60 ಕ್ಕಿಂತ ಕಡಿಮೆ ಇರುವುದು. ಪುರುಷರಲ್ಲಿ 110-70ಕ್ಕಿಂತ ಕಡಿಮೆ ಇರುವುದರ ಪ್ರಮಾಣವನ್ನು ಅನುವಾದಿಸಲಾಗುತ್ತದೆ.

ಸಂಭವನೀಯ ಕಾರಣಗಳು ರಕ್ತದೊತ್ತಡವನ್ನು ಸಾಮಾನ್ಯವಾಗಿ ಬಿಪಿ ಪರೀಕ್ಷೆ ಮಾಡಿದಾಗ ತಿಳಿದುಬರುವ ಸಂಗತಿ. ರಕ್ತದೊತ್ತಡವನ್ನು ಅಳೆಯುವಾಗ ಮೊದಲು ಅಧಿಕ ರಕ್ತದೊತ್ತಡವನ್ನು ನಂತರ ಕಡಿಮೆ ರಕ್ತದೊತ್ತಡವನ್ನು ಅಳೆಯುತ್ತಾರೆ. ಅಧಿಕ ರಕ್ತದೊತ್ತಡದ ಸಮಸ್ಯೆಯಂತೆ ಕಡಿಮೆ ರಕ್ತದೊತ್ತಡ ಉಂಟಾದಾಗ ಅನಿರೀಕ್ಷಿತ ರೀತಿಯಲ್ಲಿ ಸಮಸ್ಯೆ ಉಂಟಾಗುವುದು. ಈ ಸಮಸ್ಯೆ ಕಂಡುಬಂದಾಗ ನಿರ್ಲಕ್ಷ್ಯ ತೋರದೆ ಚಿಕಿತ್ಸೆ ಅಥವಾ ಆರೈಕೆಯನ್ನು ಮಾಡಿಕೊಳ್ಳುವುದು ಉತ್ತಮ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು