Sign In

By signing in or creating an account, you agree with Associated Broadcasting Company's Terms & Conditions and Privacy Policy.

High Blood Pressure: ಅಧಿಕ ರಕ್ತದೊತ್ತಡ ನಿಯಂತ್ರಿಸಲು ಯಾವ ಭಂಗಿಯಲ್ಲಿ ಮಲಗುವುದು ಬೆಸ್ಟ್​

High Blood Pressure: ನಾವು ಎಷ್ಟೇ ಪೌಷ್ಟಿಕ ಆಹಾರವನ್ನು ಸೇವಿಸಿದರೂ, ವ್ಯಾಯಾಮ ಮಾಡಿ ಬೆವರಿಳಿಸಿಕೊಡರೂ ನಿದ್ರೆ ಒಂದು ಸರಿಯಿಲ್ಲವೆಂದರೆ ಆರೋಗ್ಯವೂ ಸರಿ ಇರುವುದಿಲ್ಲ. ಹಾಗೆಯೇ ಇತ್ತೀಚಿನ ಜೀವನ ಶೈಲಿ ಹಾಗೂ ಒತ್ತಡದ ಬದುಕು ರಕ್ತದೊತ್ತಡವನ್ನೂ ಕೂಡ ಹೆಚ್ಚು ಮಾಡುತ್ತಿದೆ.

High Blood Pressure: ಅಧಿಕ ರಕ್ತದೊತ್ತಡ ನಿಯಂತ್ರಿಸಲು ಯಾವ ಭಂಗಿಯಲ್ಲಿ ಮಲಗುವುದು ಬೆಸ್ಟ್​
ರಕ್ತದೊತ್ತಡ
Follow us
TV9 Web
| Updated By: ನಯನಾ ರಾಜೀವ್

Updated on: May 23, 2022 | 11:17 AM

ನಾವು ಎಷ್ಟೇ ಪೌಷ್ಟಿಕ ಆಹಾರವನ್ನು ಸೇವಿಸಿದರೂ, ವ್ಯಾಯಾಮ ಮಾಡಿ ಬೆವರಿಳಿಸಿಕೊಡರೂ ನಿದ್ರೆ ಒಂದು ಸರಿಯಿಲ್ಲವೆಂದರೆ ಆರೋಗ್ಯವೂ ಸರಿ ಇರುವುದಿಲ್ಲ. ಹಾಗೆಯೇ ಇತ್ತೀಚಿನ ಜೀವನ ಶೈಲಿ ಹಾಗೂ ಒತ್ತಡದ ಬದುಕು ರಕ್ತದೊತ್ತಡವನ್ನೂ ಕೂಡ ಹೆಚ್ಚು ಮಾಡುತ್ತಿದೆ. ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿ ಸೇರಿದಂತೆ ವಿವಿಧ ಅಂಶಗಳು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ನೀವು ಹೀಗೆ ಮಲಗುವುದರಿಂದ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಹಾಗಾದರೆ ಆ ಬಂಘಿಗಳ ಬಗ್ಗೆ ತಿಳಿದುಕೊಳ್ಳೋಣ.

ಎಡ ಭಾಗಕ್ಕೆ ತಿರುಗಿ ಮಲಗುವುದು ಎಡ ಭಾಗಕ್ಕೆ ತಿರುಗಿ ಮಲಗುವುದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿ, ಹೃದಯ ಬಡಿತವು ಕೂಡ ಸರಿ ಆಗುತ್ತದೆ. ಎಡ ಭಾಗಕ್ಕೆ ತಿರುಗಿ ಮಲುಗುವುದು ಗರ್ಭಿಣಿಯರಿಗೂ ಉತ್ತಮ, ರಕ್ತವು ದೇಹದ ಎಲ್ಲಾ ಭಾಗಗಳಿಗೂ ಸಂಚರಿಸಿ ಪುನಃ ಹೃದಯದ ಬಳಿ ಬರುತ್ತದೆ. ಎಡ ಮಗ್ಗುಲಿನಲ್ಲಿ ಮಲಗಿದಾಗ ಹೃದಯ ಸುಲಭವಾಗಿ ರಕ್ತವನ್ನು ಪಂಪ್ ಮಾಡುತ್ತದೆ. ಆದರೆ ಅದೇ ಬಲಭಾಗಕ್ಕೆ ತಿರುಗಿ ಮಲಗಿದಾಗ ರಕ್ತದೊತ್ತಡ ಹೆಚ್ಚುತ್ತದೆ.

ಹೊಟ್ಟೆಯ ಮೇಲೆ ಮಲಗುವುದರಿಂದ ಏನು ಪ್ರಯೋಜನ ಹೊಟ್ಟೆಯ ಮೇಲೆ ಮಲಗುವುದು ಸಾಮಾನ್ಯವಾಗಿ ನಾವು ಮಲಗುವ ಭಂಗಿಯಲ್ಲಿ ಒಂದಾಗಿದೆ. ಆದರೆ ಈ ಭಂಗಿ ಸ್ವಲ್ಪ ಅನನುಕೂಲವಾಗಿದೆ ಮತ್ತು ಇದು ನಿದ್ರೆಯ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಸರಿಸುಮಾರು 7% ಜನರು ತಮ್ಮ ಹೊಟ್ಟೆಯ ಮೇಲೆ ಮಲಗುತ್ತಾರೆ. ಗೊರಕೆಯ ಸಮಸ್ಯೆಯನ್ನು ಹೊಟ್ಟೆಯ ಮೇಲೆ ಮಲಗುವ ಮೂಲಕ ನಿರ್ವಹಿಸಬಹುದು. ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿರುವ ಜನರು ಈ ಭಂಗಿಯಲ್ಲಿ ಮಲಗುವುದರಿಂದ ಪ್ರಯೋಜನ ಪಡೆಯುತ್ತಾರೆ. ಆದರೆ ನಿಮ್ಮ ಹೊಟ್ಟೆಯ ಮೇಲೆ ಮಲಗಿದಾಗ ನಿಮ್ಮ ಕುತ್ತಿಗೆ ಮತ್ತು ಬೆನ್ನುಮೂಳೆಯು ತಟಸ್ಥ ಸ್ಥಿತಿಯಲ್ಲಿರುವುದಿಲ್ಲ.

ಇದು ಕುತ್ತಿಗೆ ಮತ್ತು ಬೆನ್ನುನೋವಿಗೆ ಕಾರಣವಾಗಬಹುದು. ಆದ್ದರಿಂದ ಕೆಳ ಹೊಟ್ಟೆಯ ಕೆಳಗೆ ದಿಂಬನ್ನು ಇಟ್ಟುಕೊಂಡು ಮಲಗಿ, ಆಗ ಬೆನ್ನುನೋವಿನ ಸಮಸ್ಯೆಯಿಂದ ಹೊರಬರಬಹುದು. ಹೊಟ್ಟೆಯ ಮೇಲೆ ನಿದ್ದೆ ಮಾಡುವುದರಿಂದ ನರಗಳ ಮೇಲೆ ಒತ್ತಡ ಉಂಟಾಗುತ್ತದೆ ಮತ್ತು ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಮತ್ತು ನರ ನೋವು ಉಂಟಾಗುತ್ತದೆ.

​ಭ್ರೂಣದ ಭಂಗಿ ಈ ಭಂಗಿಯಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಈ ಸ್ಥಾನದಲ್ಲಿ ಮಲಗುತ್ತಾರೆ ಎಂದು ಸೂಚಿಸುತ್ತದೆ. ಆದರೂ ಇತರ ಸಂಶೋಧನೆಗಳು ಇದನ್ನು ವಿವಾದಿಸುತ್ತವೆ. ಸಾಮಾನ್ಯವಾಗಿ ಮಕ್ಕಳು ಮತ್ತು ವೃದ್ಧರು ಸುರುಳಿಯಾಕಾರದ ಭಂಗಿಯಲ್ಲಿ ಮಲಗುತ್ತಾರೆ. ಕಡಿಮೆ ಬೆನ್ನುನೋವಿಗೆ ಈ ಭಂಗಿಯು ಸಹಾಯ ಮಾಡುತ್ತದೆ. ಗರ್ಭಿಣಿ ಮಹಿಳೆಯರಿಗೆ ಇದು ಉತ್ತಮ ಆಯ್ಕೆಯಾಗಿರಬಹುದು.

ಬೆನ್ನ ಮೇಲೆ ಮಲಗುವುದು ಈ ಭಂಗಿ ಅನುಕೂಲಗಳು ಮತ್ತು ಅನಾನುಕೂಲಗಳು ಎರಡನ್ನೂ ಹೊಂದಿದೆ. ನಿದ್ರೆಯ ತಜ್ಞರು ಇದನ್ನು ಸುಪೈನ್ ಪೊಸಿಷನ್ ಎಂದು ಕರೆಯುತ್ತಾರೆ. ಬೆನ್ನಿನ ಮೇಲೆ ಮಲಗುವ ಕೆಲವರು ಕಡಿಮೆ ಬೆನ್ನು ನೋವು ಅನುಭವಿಸಬಹುದು. ಇದು ಅಸ್ತಿತ್ವದಲ್ಲಿರುವ ಬೆನ್ನು ನೋವನ್ನು ಇನ್ನಷ್ಟು ಹದಗೆಡಿಸುತ್ತದೆ, ಆದ್ದರಿಂದ ಕಡಿಮೆ ಬೆನ್ನುನೋವಿಗೆ ಇದು ಅತ್ಯುತ್ತಮ ಭಂಗಿಯಲ್ಲ. ನೀವು ಗೊರಕೆ ಅಥವಾ ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿದ್ದರೆ, ನಿಮ್ಮ ಬೆನ್ನಿನ ಮೇಲೆ ಮಲಗುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು.

ಗರ್ಭಾವಸ್ಥೆಯಲ್ಲಿ ಮಹಿಳೆಯರು ಈ ಸ್ಥಾನವನ್ನು ತಪ್ಪಿಸಬೇಕು. ನಿಮ್ಮ ಬೆನ್ನಿನ ಮೇಲೆ ಮಲಗುವುದರಿಂದ ಆರೋಗ್ಯ ಪ್ರಯೋಜನಗಳೂ ಇವೆ. ಸಣ್ಣ ದಿಂಬಿನೊಂದಿಗೆ ನಿಮ್ಮ ತಲೆಯನ್ನು ಸ್ವಲ್ಪಮಟ್ಟಿಗೆ ಎತ್ತರಿಸಿ ನಿಮ್ಮ ಬೆನ್ನಿನ ಮೇಲೆ ಮಲಗುವುದು ಎದೆಯುರಿಗೆ ಉತ್ತಮ ನಿದ್ರೆ ಭಂಗಿಯೆಂದು ಪರಿಗಣಿಸಲಾಗುತ್ತದೆ. ನಿಮ್ಮ ತಲೆ, ಕುತ್ತಿಗೆ ಮತ್ತು ಬೆನ್ನುಮೂಳೆಯು ತಟಸ್ಥ ಸ್ಥಾನದಲ್ಲಿರುವುದರಿಂದ ನೀವು ಕುತ್ತಿಗೆ ನೋವನ್ನು ಅನುಭವಿಸುವ ಸಾಧ್ಯತೆ ಕಡಿಮೆ.

ಆರೋಗ್ಯ ಸಂಬಂಧಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ