High BP: ಉಗುರು, ಕೂದಲು ಹಾಗೂ ಚರ್ಮದಿಂದ ಅಧಿಕ ರಕ್ತದೊತ್ತಡದ ಬಗ್ಗೆ ತಿಳಿಯಬಹುದೇ?

High BP: ಅಧಿಕ ರಕ್ತದೊತ್ತಡ(High Blood Pressure)ವೆನ್ನುವುದು ಇದೀಗ ಎಲ್ಲರಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಬದಲಾದ ಜೀವನಶೈಲಿಯು ಬೇಡದ ರೋಗಗಳನ್ನು ಆಹ್ವಾನಿಸುತ್ತಿದೆ. ನಿಮ್ಮ ಉಗುರು, ಕೂದಲು ಅಥವಾ ಚರ್ಮವನ್ನು ನೋಡಿಯೂ ನಿಮಗೆ ರಕ್ತದೊತ್ತಡವಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು.

High BP: ಉಗುರು, ಕೂದಲು ಹಾಗೂ ಚರ್ಮದಿಂದ ಅಧಿಕ ರಕ್ತದೊತ್ತಡದ ಬಗ್ಗೆ ತಿಳಿಯಬಹುದೇ?
ಅಧಿಕ ರಕ್ತದೊತ್ತಡ
Follow us
TV9 Web
| Updated By: ನಯನಾ ರಾಜೀವ್

Updated on: May 22, 2022 | 2:12 PM

ಅಧಿಕ ರಕ್ತದೊತ್ತಡ(High Blood Pressure)ವೆನ್ನುವುದು ಇದೀಗ ಎಲ್ಲರಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಬದಲಾದ ಜೀವನಶೈಲಿಯು ಬೇಡದ ರೋಗಗಳನ್ನು ಆಹ್ವಾನಿಸುತ್ತಿದೆ. ನಿಮ್ಮ ಉಗುರು, ಕೂದಲು ಅಥವಾ ಚರ್ಮವನ್ನು ನೋಡಿಯೂ ನಿಮಗೆ ರಕ್ತದೊತ್ತಡವಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು.

ಲ್ಯಾನ್ಸೆಟ್ ಜರ್ನಲ್​ನಲ್ಲಿ ಈ ಕುರಿತು ವರದಿ ಪ್ರಕಟವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು ವಿಶ್ವದಲ್ಲೇ 156 ಹಾಗೂ 164ನೇ ಸ್ಥಾನದಲ್ಲಿದೆ. ಪೂರ್ ಡಯಟ್, ಬದಲಾದ ಜೀವನಶೈಲಿಯು ಪಾರ್ಶ್ವವಾಯು, ಹೃದಯಾಘಾತ, ದೃಷ್ಟಿದೋಷ, ಕಿಡ್ನಿ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತವೆ.

ಕೂದಲಿನ ಬೇರಿಗೆ ರಕ್ತ ಸಂಚಾರ ಸ್ಥಗಿತಗೊಂಡು ಕೂದಲು ಉದುರುವಿಕೆ ಆರಂಭವಾಗುವುದು, ದೇಹ ಸುಕ್ಕು ಗಟ್ಟುವುದು, ಉಸಿರಾಟದ ತೊಂದರೆ, ಉಗುರು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದಾಗಿ ನಿಮಗೆ ಬಿಪಿ ಹೆಚ್ಚಾಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ. ಭಾರತದಲ್ಲಿ, ತಜ್ಞರು ಹೇಳುವಂತೆ, ಹೈಪರ್‌ಟೆನ್ಶನ್ ಮಟ್ಟ ನಗರದ ವಯಸ್ಕರಲ್ಲಿ ಶೇ 20-40ರ ಪ್ರಮಾಣದಲ್ಲಿದೆ. ಗ್ರಾಮೀಣ ವಯಸ್ಕರಲ್ಲಿ ಶೇ 12-17ರ ಪ್ರಮಾಣದಲ್ಲಿರುತ್ತದೆ. ಆದರೆ ಚಿಂತಿಸಬೇಕಾದ ಅಗತ್ಯವಿಲ್ಲ. ಸರಳ ಕ್ರಮಗಳಿಂದ ನೀವು ಅಪಾಯದ ಮಟ್ಟವನ್ನು ತಗ್ಗಿಸಬಹುದು.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಹೀಗೆ ಮಾಡಿ ವಾರಕ್ಕೊಮ್ಮೆ ಜಾಗಿಂಗ್ ಮಾಡಿ: ವಾರಕ್ಕೊಮ್ಮೆ ಜಾಗಿಂಗ್‌ ಮಾಡುವುದರಿಂದ ನಿಮ್ಮ ಆಯುಷ್ಯ ಕನಿಷ್ಠ 6 ವರ್ಷ ವೃದ್ಧಿಯಾಗುತ್ತದೆ ಎಂದು ಕೋಪನ್‌ಹೇಗನ್‌ ಸಿಟಿ ಹಾರ್ಟ್‌ ಕಾರ್ಡಿಯೋವಸ್ಕ್ಯುಲಾರ್ ಅಧ್ಯಯನ ತಿಳಿಸಿದೆ. ಈ ಅಧ್ಯಯನದಲ್ಲಿ 20ರಿಂದ 93 ವರ್ಷ ವಯಸ್ಸಿನ 20,000 ಪುರುಷರು ಮತ್ತು ಮಹಿಳೆಯರನ್ನು ಒಳಪಡಿಸಲಾಗಿತ್ತು.

ಬಾಳೆಹಣ್ಣು ತಿನ್ನಿ: ದೇಹದಲ್ಲಿನ ದ್ರವಗಳ ಸಮತೋಲನ ಕಾಪಾಡಲು ಪೊಟ್ಯಾಷಿಯಂ ಖನಿಜ ಅಗತ್ಯವಾಗಿದ್ದು, ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ. ಆದ್ದರಿಂದ ದಿನಕ್ಕೆ ಐದು ಬಾಳೆಹಣ್ಣು ಸೇವಿಸುವುದು ಒಳ್ಳೆಯದು. ಬಾಳೆಹಣ್ಣಿನಂತಹ ಪೊಟ್ಯಾಷಿಯಂ ಭರಿತ ಆಹಾರ ಸೇವನೆಯಿಂದ ಮತ್ತು ಉಪ್ಪಿನ ಸೇವನೆ ಕಡಿಮೆ ಮಾಡುವುದರಿಂದ ಪ್ರತಿ ವರ್ಷ ಸಾವಿರಾರು ಜೀವಗಳನ್ನು ಉಳಿಸಬಹುದು ಎಂದು ಬ್ರಿಟಿಷ್ ಮೆಡಿಕಲ್‌ ಜರ್ನಲ್ ಆನ್‌ಲೈನ್‌ನಲ್ಲಿ ಪ್ರಕಟಿಸಿದ ಅಧ್ಯಯನ ವರದಿ ತಿಳಿಸಿದೆ.

ಉಪ್ಪು ಸೇವನೆ ಕಡಿಮೆ ಮಾಡಿ: ಉಪ್ಪಿನಂಶವು ದೇಹದ ದ್ರವಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ನಿಮ್ಮ ಅಪಧಮನಿಗಳಲ್ಲಿ ಹರಿಯುವ ರಕ್ತದ ಒತ್ತಡ ಮತ್ತು ಪ್ರಮಾಣ ಜಾಸ್ತಿಯಾಗುತ್ತದೆ. ಮನೆಯ ಅಡುಗೆಯಲ್ಲಿ ಬಳಸುವ ಉಪ್ಪಿನ ಪ್ರಮಾಣ ಆತಂಕಕಾರಿಯಲ್ಲ; ಬದಲಿಗೆ ಬಿಸ್ಕೆಟ್‌ಗಳು, ಬೇಕರಿ ತಿಂಡಿಗಳು, ಸಿದ್ಧ ಆಹಾರಗಳ ಸೇವನೆಯಿಂದಲೇ ಶೇ 80ರಷ್ಟು ಉಪ್ಪು ನಮ್ಮ ದೇಹ ಸೇರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ