High Blood Pressure: ಅಧಿಕ ರಕ್ತದೊತ್ತಡವು ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರಬಹುದು

High BP:ಬದಲಾದ ಜೀವನಶೈಲಿಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದ್ದು, ಅದರಲ್ಲಿ ಅಧಿಕ ರಕ್ತದೊತ್ತಡ( High Blood Pressure) ಕೂಡ ಸೇರಿದೆ. ಅಧಿಕ ರಕ್ತದೊತ್ತಡವು ದೇಹದ ವಿವಿಧ ಅಂಗಗಳ ಮೇಲೆ ಕೂಡ ಪರಿಣಾಮ ಬೀರಬಹುದು.

High Blood Pressure: ಅಧಿಕ ರಕ್ತದೊತ್ತಡವು ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರಬಹುದು
High Blood Pressure
Follow us
TV9 Web
| Updated By: ನಯನಾ ರಾಜೀವ್

Updated on: May 21, 2022 | 10:21 AM

ಬದಲಾದ ಜೀವನಶೈಲಿಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದ್ದು, ಅದರಲ್ಲಿ ಅಧಿಕ ರಕ್ತದೊತ್ತಡ( High Blood Pressure) ಕೂಡ ಸೇರಿದೆ. ಅಧಿಕ ರಕ್ತದೊತ್ತಡವು ದೇಹದ ವಿವಿಧ ಅಂಗಗಳ ಮೇಲೆ ಕೂಡ ಪರಿಣಾಮ ಬೀರಬಹುದು. ವಿಶ್ವಾದ್ಯಂತ ಶೇ.30ರಷ್ಟು ಯುವಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಇಂಡಿಯಾ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ವರದಿ ನೀಡಿದ್ದು, ಭಾರತದಲ್ಲಿ ನಾಲ್ಕರಲ್ಲಿ ಒಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಅಧಿಕ ರಕ್ತದೊತ್ತಡವು ಹೃದಯದ ಮೇಲೂ ಪರಿಣಾಮ ಬೀರಲಿದ್ದು, ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಇದೆ. ಇದು ಬೇರೆ ಬೇರೆ ಭಾಗಗಳಿಗೆ ಹಾನಿ ಮಾಡುವವರೆಗೂ ಈ ಸಮಸ್ಯೆ ಇರುವುದು ಗಮನಕ್ಕೆ ಬರುವುದಿಲ್ಲ.

ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ಹೃದಯ, ಕಿಡ್ನಿ ಸಮಸ್ಯೆ,ಆಯಾಸ, ಮೂಗಿನಿಂದ ರಕ್ತ ಬರುವುದು, ಉಸಿರಾಟ ಸಮಸ್ಯೆ ದೃಷ್ಟಿದೋಷವೂ ಉಂಟಾಗಬಹುದು.

ಅಧಿಕ ರಕ್ತದೊತ್ತಡದ ಅಂದರೆ ಬಿಪಿ ಸಮಸ್ಯೆ ದೇಹದ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಬಿಪಿ ಕಡಿಮೆ ಆಗುವುದು, ಮತ್ತು ಹೆಚ್ಚಾಗುವುದು ಎರಡೂ ರೋಗಿಯ ಜೀವಕ್ಕೆ ಕುತ್ತು ತರುತ್ತದೆ. ಅದರಲ್ಲೂ ಅಧಿಕ ರಕ್ತದೊತ್ತಡವನ್ನು ನಿರ್ಲಕ್ಷ್ಯ ಮಾಡಿದರೆ ಮಾರಣಾಂತಿಕವಾಗಬಹುದು. ಕೆಲ ಸನ್ನಿವೇಶಗಳಲ್ಲಿ

ಇದು ಹೃದಯಾಘಾತ, ಪಾರ್ಶ್ವವಾಯು, ಬುದ್ಧಿಮಾಂದ್ಯತೆಯನ್ನು ಉಂಟು ಮಾಡುತ್ತದೆ. ಬಿಪಿ ಸಮಸ್ಯೆ ಇದ್ದವರು ತಮ್ಮ ಜೀವನಶೈಲಿ ಮತ್ತು ಆಹಾರ ಅಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು.

ಹೆಚ್ಚಿನ ರಕ್ತದೊತ್ತಡ ಹೊಂದಿರುವ ಜನರಿಗೆ ತಮ್ಮ ಜೀವನಶೈಲಿ ಸುಧಾರಿಸುವಂತೆ ವೈದ್ಯರು, ತಜ್ಞರು ಸಲಹೆ ನೀಡುತ್ತಾರೆ. ಸಾಮಾನ್ಯ ರಕ್ತದೊತ್ತಡವು 120/80 mmHg ವರೆಗೆ ಇರುತ್ತದೆ.

ನಿತ್ಯ ವ್ಯಾಯಾಮ ಮಾಡಿ: ದೈನಂದಿನ ವ್ಯಾಯಾಮವು ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ. ತಜ್ಞರ ಪ್ರಕಾರ, ಪ್ರತಿ ವಾರ ಸುಮಾರು 150 ನಿಮಿಷಗಳ ಚಟುವಟಿಕೆ ಅಥವಾ ಪ್ರತಿದಿನ ಸುಮಾರು 30 ನಿಮಿಷಗಳ ಚಟುವಟಿಕೆ ರಕ್ತದೊತ್ತಡದ ಸಮಸ್ಯೆ ಕಡಿಮೆ ಮಾಡುತ್ತದೆ.

ಆರೋಗ್ಯಕರ ಆಹಾರ ಕ್ರಮ ಅನುಸರಿಸಿ: ಕೊಬ್ಬು, ಟ್ರಾನ್ಸ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರ ಸೇವನೆ ತಪ್ಪಿಸಿ. ಧಾನ್ಯ, ಹಣ್ಣು, ತರಕಾರಿ ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವನೆ ಮಾಡುವುದು ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ.

ತೂಕ ಕಡಿಮೆ ಮಾಡುವುದು: ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ ತೂಕ ಕಡಿಮೆ ಮಾಡಿ. ತೂಕದ ಜೊತೆಗೆ ಬೆಲ್ಲಿ ಫ್ಯಾಟ್ ಕೂಡ ಕಡಿಮೆ ಮಾಡಿ. ಸೊಂಟದ ಸುತ್ತಲಿನ ಕೊಬ್ಬು ರಕ್ತದೊತ್ತಡವನ್ನು ಹೆಚ್ಚಿಸುವ ಅಪಾಯವಿದೆ. ತೂಕ ಹೆಚ್ಚಾದಂತೆ ನಿಮ್ಮ ರಕ್ತದೊತ್ತಡ ಹೆಚ್ಚುತ್ತದೆ. ಮತ್ತೊಂದೆಡೆ ಅಧಿಕ ತೂಕ ನಿದ್ದೆ ಮಾಡುವಾಗ ಉಸಿರಾಡಲು ಕಷ್ಟವನ್ನುಂಟು ಮಾಡುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಉತ್ತಮ ಮಾರ್ಗವೆಂದರೆ ತೂಕ ಕಡಿಮೆ ಮಾಡುವದು.

ಆಲ್ಕೋಹಾಲ್ ಸೇವನೆ ಬೇಡ: ಸಾಮಾನ್ಯವಾಗಿ ಆಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಪುರುಷರು ತಮ್ಮ ಆಲ್ಕೋಹಾಲ್ ಸೇವನೆ ಸೀಮಿತಗೊಳಿಸಿದರೂ ಸಹ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ನೀವು ಹೆಚ್ಚು ಆಲ್ಕೋಹಾಲ್ ಸೇವಿಸಿದರೆ ಅದು ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಕಡಿಮೆ ಉಪ್ಪು ತಿನ್ನಿರಿ: ಆಹಾರದಲ್ಲಿ ಕಡಿಮೆ ಉಪ್ಪು ಸೇವಿಸುವುದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಇದು ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಯಾರಾದರೂ ಆಹಾರದಲ್ಲಿ ಕಡಿಮೆ ಉಪ್ಪು ಸೇವಿಸಿದರೆ, ಅವರ ರಕ್ತದೊತ್ತಡವು ಸುಮಾರು 5 ರಿಂದ 6 mm Hg ವರೆಗೆ ಇಳಿಯಬಹುದು.

ಈ ಮಾಹಿತಿಯು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ