AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bladder Cancer: ಮೂತ್ರಕೋಶ ಕ್ಯಾನ್ಸರ್​ನ ಲಕ್ಷಣಗಳೇನು? ಪತ್ತೆ ಹೇಗೆ?

Bladder Cancer:ಮಾರಣಾಂತಿಕ ಕಾಯಿಲೆಗಳಲ್ಲಿ ಕ್ಯಾನ್ಸರ್ (Cancer)ಕೂಡ ಒಂದು, ದೇಹದ ಯಾವುದೇ ಭಾಗಗಳಲ್ಲಾದರೂ ಕ್ಯಾನ್ಸರ್ ಗಡ್ಡೆಗಳು ಬೆಳೆಯಬಹುದು. ಪ್ರತಿ ವರ್ಷ ಸುಮಾರು 43,00,000 ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

Bladder Cancer: ಮೂತ್ರಕೋಶ ಕ್ಯಾನ್ಸರ್​ನ ಲಕ್ಷಣಗಳೇನು? ಪತ್ತೆ ಹೇಗೆ?
ಮೂತ್ರಕೋಶ ಕ್ಯಾನ್ಸರ್
Follow us
TV9 Web
| Updated By: ನಯನಾ ರಾಜೀವ್

Updated on:May 21, 2022 | 9:40 AM

ಮಾರಣಾಂತಿಕ ಕಾಯಿಲೆಗಳಲ್ಲಿ ಕ್ಯಾನ್ಸರ್ (Cancer)ಕೂಡ ಒಂದು, ದೇಹದ ಯಾವುದೇ ಭಾಗಗಳಲ್ಲಾದರೂ ಕ್ಯಾನ್ಸರ್ ಗಡ್ಡೆಗಳು ಬೆಳೆಯಬಹುದು. ಪ್ರತಿ ವರ್ಷ ಸುಮಾರು 43,00,000 ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಮೂತ್ರ ಕೋಶ(Bladder) ವು ಒಂದು ಟೊಳ್ಳಾದ ಹಾಗೂ ಸ್ಥಿತಿಸ್ಥಾಪಕ ಅಂಗ ರೂಪ. ಮೂತ್ರಕೋಶದ ಒಳ ಪದರಲ್ಲಿ ಯುರೊಥೆಲಿಯಲ್ ಕೋಶಗಳು ಅಸಹಜವಾಗಿ ಮತ್ತು ನಿಯಂತ್ರಣ ಇಲ್ಲದೆ ಬೆಳೆಯಲು ಆರಂಭಿಸಿದಾಗ ಅದು ಮೂತ್ರ ಕೋಶದ ಕ್ಯಾನ್ಸರ್ ಎನಿಸಿಕೊಳ್ಳುತ್ತದೆ.

ದೇಶದಲ್ಲಿ 2020ರಲ್ಲಿ ಸುಮಾರು 18,921 ಜನರು ಮೂತ್ರ ಕೋಶದ ಕಾಯಿಲೆಗೆ ಒಳಗಾಗಿದ್ದಾರೆ. ಪ್ರತಿ ಒಂದು ಲಕ್ಷ ಜನರಲ್ಲಿ ಪುರುಷರು 2.4 ರ ಅನುಪಾತದಲ್ಲಿ ಹಾಗೂ ಮಹಿಳೆಯರು 0.7 ಅನುಪಾತದಲ್ಲಿ ಒಳಗಾಗುತ್ತಿದ್ದಾರೆ. ಮರಣದ ಪ್ರಮಾಣ ಪುರುಷರಲ್ಲಿ 1.3 ಮತ್ತು ಮಹಿಳೆಯರಲ್ಲಿ 0.3 ರಷ್ಟಿದೆ ಎಂದು ಕೆಲವು ಅಧ್ಯಯನಗಳು ಹೇಳಿವೆ.

ಮೂತ್ರಕೋಶ ಕ್ಯಾನ್ಸರ್​ಗೆ ಕಾರಣವಾಗುವ ಅಂಶಗಳು ತಂಬಾಕು, ಧೂಮಪಾನ, ಆರೋಮ್ಯಾಟಿಕ್ ಅಮೈನ್ಸ್ ಮತ್ತು ಕಪ್ಪು ಧೂಳು. ಆರ್ಸೆನಿಕ್ ಕಲುಷಿತ ಅಥವಾ ಕ್ಲೋರಿನೇಟೆಡ್ ನೀರನ್ನು ದೀರ್ಘ ಕಾಲ ಕುಡಿಯುವುದರಿಂದ ಪ್ರಾಸ್ಟೇಟ್, ಎಂಡೋಮೆಟ್ರಿಯಲ್ ಮತ್ತು ಮೂತ್ರಕೋಶದ ಕ್ಯಾನ್ಸರ್​ಗೆ ಕಾರಣವಾಗಬಹುದು.

ಮೂತ್ರಕೋಶ ಕ್ಯಾನ್ಸರ್​ನ ಲಕ್ಷಣಗಳೇನು? -ಮೂತ್ರದ ಜತೆ ರಕ್ತ ಬರುವುದು – ಮೂತ್ರ ವಿಸರ್ಜಿಸುವಾಗ ನೋವು – 40 ವರ್ಷದ ನಂತರ ಮೂತ್ರದಲ್ಲಿ ರಕ್ತ ಮಿಶ್ರಿತ ಆಗುವುದನ್ನು ನಿರ್ಲಕ್ಷಿಸಬೇಡಿ -ಮೂತ್ರಕ್ಕೆ ಹೋಗುವುದೇ ತಿಳಿಯದಿರುವುದು

ಕ್ಯಾನ್ಸರ್ ಪತ್ತೆ ಹೇಗೆ? ಕ್ಯಾನ್ಸರ್​ ಅನ್ನು ರಕ್ತ ಪರೀಕ್ಷೆ, ಸಿಟಿ ಸ್ಕ್ಯಾನ್, ಎಂಡೋಸ್ಕೋಪಿಕ್ ಪರೀಕ್ಷೆಯ ಮೂಲಕ ತಿಳಿದುಕೊಳ್ಳಲಾಗುವುದು. ಈ ತಪಾಸಣೆಯ ಮಾರ್ಗಗಳು ಕ್ಯಾನ್ಸರ್​ನ ಹಂತ ಮತ್ತು ಸ್ಥಿತಿಯನ್ನು ವ್ಯಕ್ತಪಡಿಸುತ್ತವೆ.

​ಮುನ್ನೆಚ್ಚರಿಕಾ ಕ್ರಮಗಳು ಕೆಲಸ ಮಾಡುವ ಅಥವಾ ಉದ್ಯೋಗ ಕ್ಷೇತ್ರದಲ್ಲಿ ರಾಸಾಯನಿಕ ವಸ್ತುಗಳ ಬಳಕೆ ಮಾಡುತ್ತಿದ್ದರೆ ಅಂತಹ ಪ್ರದೇಶದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮದಲ್ಲಿ ಕೆಲಸ ನಿರ್ವಹಿಸಬೇಕು. ಈ ಕ್ಯಾನ್ಸರ್ ಅನೇಕ ಪಾಯಕಾರಿ ಜೀವನ ಶೈಲಿ ಮತ್ತು ಹವ್ಯಾಸಗಳಿಂದ ಪ್ರಚೋದನೆ ಪಡೆದುಕೊಳ್ಳುತ್ತವೆ. ಧೂಮ ಪಾನ ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ಸೇವಿಸುವ ಹವ್ಯಾಸವನ್ನು ಹೊಂದಿದ್ದರೆ ಅದನ್ನು ಮೊದಲು ತ್ಯಜಿಸಬೇಕು.

ಈ ಮೇಲಿನ ಮಾಹಿತಿಗಳು ಟಿವಿ9 ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಗಳನ್ನು ಆಧರಿಸಿರುತ್ತದೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:00 am, Sat, 21 May 22