Amla Benefits: ಮಧುಮೇಹಿಗಳಿಗೆ ನೆಲ್ಲಿಕಾಯಿಯಿಂದಾಗುವ ಪ್ರಯೋಜನಗಳೇನು?

Amla Benefits:ಮಧುಮೇಹಿ(Diabetes)ಗಳು ನಿತ್ಯ ತಮ್ಮ ಆಹಾರದಲ್ಲಿ ನೆಲ್ಲಿಕಾಯಿಯನ್ನು ಬಳಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಇದರಲ್ಲಿರುವ ಔಷಧೀಯ ಗುಣಗಳು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿವೆ.

Amla Benefits: ಮಧುಮೇಹಿಗಳಿಗೆ ನೆಲ್ಲಿಕಾಯಿಯಿಂದಾಗುವ ಪ್ರಯೋಜನಗಳೇನು?
ನೆಲ್ಲಿಕಾಯಿ
Follow us
TV9 Web
| Updated By: ನಯನಾ ರಾಜೀವ್

Updated on: May 20, 2022 | 4:37 PM

ಮಧುಮೇಹಿ(Diabetes)ಗಳು ನಿತ್ಯ ತಮ್ಮ ಆಹಾರದಲ್ಲಿ ನೆಲ್ಲಿಕಾಯಿಯನ್ನು ಬಳಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಇದರಲ್ಲಿರುವ ಔಷಧೀಯ ಗುಣಗಳು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿವೆ. ಬೆಟ್ಟದ ನೆಲ್ಲಿಕಾಯಿ(Amla)ಯು ಮಾರುಕಟ್ಟೆಯಲ್ಲಿ ಸಿಗುವ ನೆಲ್ಲಿಕಾಯಿಗಿಂತಲೂ ಗಾತ್ರದಲ್ಲಿ ತುಂಬಾ ಸಣ್ಣದಾಗಿದ್ದು, ಇದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ನೆಲ್ಲಿಕಾಯಿಯನ್ನು ಪ್ರತಿನಿತ್ಯವೂ ತಿಂದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ಅಧ್ಯಯನಗಳು ಹೇಳಿವೆ. ಕೆಲವೊಮ್ಮೆ ಮಧುಮೇಹಿಗಳಲ್ಲಿ ಊಟ ಮಾಡಿದ ಕೂಡಲೇ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗುವುದು. ಆದರೆ ನೆಲ್ಲಿಕಾಯಿ ಸೇವನೆಯಿಂದ ಈ ಸಮಸ್ಯೆಯನ್ನು ತಡೆಯಬಹುದು.

ಹಸಿಯಾಗಿ ತಿನ್ನಿ ನೆಲ್ಲಿಕಾಯಿಯನ್ನು ಹಸಿಯಾಗಿ ತಿನ್ನುವುದು ತುಂಬಾ ಸರಳ ವಿಧಾನ. ಇದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿ ಆಗುವುದು. ನಿಮಗೆ ತುಂಬಾ ಹುಳಿಯೆಂದು ಅನಿಸುತ್ತಲಿದ್ದರೆ ಆಗ ನೀವು ಇದನ್ನು ತಿಂದು ಒಂದು ಲೋಟ ನೀರು ಕುಡಿಯಿರಿ. ಆಗ ನಿಮ್ಮ ಬಾಯಿಗೆ ತುಂಬಾ ಸಿಹಿ ರುಚಿಯು ಸಿಗುವುದು.

ಸಲಾಡ್ ಮತ್ತು ತರಕಾರಿ ಜತೆಗೆ ಸಲಾಡ್ ಮತ್ತು ಖಾದ್ಯಗಳಲ್ಲಿ ಬಳಕೆ ಮಾಡಬಹುದು. ನೆಲ್ಲಿಕಾಯಿಯ ಬೀಜ ತೆಗೆದು ಅದನ್ನು ರುಬ್ಬಿಕೊಳ್ಳಬೇಕು. ಇದನ್ನು ಒಣಗಿಸಿದ ಬಳಿಕ ಶೇಖರಣೆ ಮಾಡಬಹುದು. ನಿಮಗೆ ಬೇಕಾದಾಗ ಸಲಾಡ್ ಅಥವಾ ಬೇರೆ ಖಾದ್ಯಗಳಿಗೆ ಬಳಕೆ ಮಾಡಬಹುದು.

ನೆಲ್ಲಿಕಾಯಿಯೊಂದಿಗೆ ಜೇನುತುಪ್ಪ ಬೆರೆಸಿ ಬಳಸಿ ನೆಲ್ಲಿಕಾಯಿಯೊಂದಿಗೆ ಜೇನುತುಪ್ಪ ಬೆರೆಸಿ ಉಪಯೋಗಿಸುವುದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ನೆಲ್ಲಿಕಾಯಿ ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ, ಜತೆಗೆ ನಂಜುನಿರೋಧಕ, ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಕೂಡ ಇದು ಹೊಂದಿದೆ.

ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ : ನೆಲ್ಲಿಕಾಯಿಯಲ್ಲಿ ಉತ್ತಮ ಪ್ರಮಾಣದಲ್ಲಿ ಫೈಬರ್‌ ಇರುತ್ತದೆ. ಇದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿಂದರೆ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುತ್ತದೆ. ಮಲ ವಿಸರ್ಜನೆಯಲ್ಲಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.

ಕೂದಲಿಗೆ ಪ್ರಯೋಜನಕಾರಿ : ಕೂದಲಿನ ಆರೋಗ್ಯಕ್ಕಾಗಿ ಬಳಸುವ ಪ್ರಾಡಕ್ಟ್ ಗಳಲ್ಲಿ ನೆಲ್ಲಿಕಾಯಿಯ ಬಳಕೆ ಇದ್ದೇ ಇರುತ್ತದೆ. ಇದು ಕೂದಲನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಜೇನುತುಪ್ಪವನ್ನು ನೆಲ್ಲಿಕಾಯಿಯೊಂದಿಗೆ ಬೆರೆಸಿ ಸೇವಿಸಿದರೆ ಸ್ಕಾಲ್ಪ್ ನ ಸೋಂಕಿನಿಂದ ಮುಕ್ತಿ ಪಡೆಯಬಹುದು.

ಜ್ಯೂಸ್ ತಯಾರಿಸಿ ತಾಜಾ ನೆಲ್ಲಿಕಾಯಿ ತಂದು, ಅದರ ಬೀಜ ತೆಗೆಯಿರಿ ಮತ್ತು ಅದನ್ನು ಸರಿಯಾಗಿ ರುಬ್ಬಿಕೊಳ್ಳಿ. ಇದರ ರಸವನ್ನು ತೆಗೆದು ಕುಡಿಯಬಹುದು. ನಿಮಗೆ ದಿನಕ್ಕೆ 5-10 ಮಿ.ಲೀ.ನಷ್ಟು ನೆಲ್ಲಿಕಾಯಿ ರಸ ಸಾಕು.

ನೀವು ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಆಗ ನಿಮಗೆ ತುಂಬಾ ಅಚ್ಚರಿಯ ಫಲಿತಾಂಶವು ಸಿಗುವುದು. ಇದನ್ನು ನಿತ್ಯವೂ ಸೇವಿಸಿದರೆ ಅದರ ಲಾಭ ನಿಮಗೆ ಸಿಗಲಿದೆ.

ಇಲ್ಲಿ ನೀಡಲಾಗಿರುವ ಮಾಹಿತಿಯು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಮನೆಮದ್ದು ಹಾಗೂ ಸಾಮಾನ್ಯ ವಿಷಯಗಳ ಆಧರಿತ ಲೇಖನವಾಗಿದೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್