Health Tips: ರಾತ್ರಿಯ ವೇಳೆ ಮರೆತು ಕೂಡ ಈ ಹಣ್ಣುಗಳನ್ನು ಸೇವಿಸಬೇಡಿ: ಅವು ಯಾವುವು? ಯಾಕೆ? ತಿಳಿಯೋಣ
ಹಣ್ಣುಗಳನ್ನು ತಿನ್ನಿ- ಆರೋಗ್ಯಕ್ಕೆ ಒಳ್ಳೆಯದು ಅಂತಾ ವೈದ್ಯರೂ ಸೇರಿದಂತೆ ಮನೆಯಲ್ಲಿನ ಹಿರಿಯರೂ ಆಗಾಗ ಹೇಳುತ್ತಲೇ ಇರುತ್ತಾರೆ. ಆದರೆ ತಿಳಿದುಕೊಳ್ಳಿ ರಾತ್ರಿ 8 ಗಂಟೆಯ ನಂತರ ಹಣ್ಣುಗಳನ್ನು ತಿನ್ನಬಾರದು. ಅದರಲ್ಲೂ ಕೆಲವು ನಿರ್ದಿಷ್ಟ ಹಣ್ಣುಗಳನ್ನು ರಾತ್ರಿ ಹೊತ್ತು ತಿನ್ನಲೇಬಾರದು.
ಹಣ್ಣುಗಳನ್ನು ತಿನ್ನಿ- ಆರೋಗ್ಯಕ್ಕೆ ಒಳ್ಳೆಯದು ಅಂತಾ ವೈದ್ಯರೂ ಸೇರಿದಂತೆ ಮನೆಯಲ್ಲಿನ ಹಿರಿಯರೂ ಆಗಾಗ ಹೇಳುತ್ತಲೇ ಇರುತ್ತಾರೆ. ಆದರೆ ತಿಳಿದುಕೊಳ್ಳಿ ರಾತ್ರಿ 8 ಗಂಟೆಯ ನಂತರ ಹಣ್ಣುಗಳನ್ನು ತಿನ್ನಬಾರದು. ಅದರಲ್ಲೂ ಕೆಲವು ನಿರ್ದಿಷ್ಟ ಹಣ್ಣುಗಳನ್ನು ರಾತ್ರಿ ಹೊತ್ತು ತಿನ್ನಲೇಬಾರದು.
ಹಣ್ಣುಗಳ (fruits) ಸೇವನೆ ನಮ್ಮ ಆರೋಗ್ಯಕ್ಕೆ (health)ತುಂಬಾನೇ ಒಳ್ಳೆಯದು. ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ಸ್, ಮಿನರಲ್ಸ್ ದೊರೆಯುತ್ತವೆ. ಆದರೆ ಹಣ್ಣುಗಳನ್ನು ತಿನ್ನುವುದಕ್ಕೆ ಸೂಕ್ತ/ ಸಮಂಜಸ ಸಮಯ ಎಂಬುದೂ ಇದೆ. ಹಾಗಾದರೆ ಅಂತಹ ಸರಿಯಾದ ಸಮಯ ಯಾವುದು ಎಂಬುದರ ಬಗ್ಗೆ ಸಂದೇಹಗಳು ಇದ್ದರೆ ಮುಂದಕ್ಕೆ ಈ ಲೇಖನ ಓದಿ.
ಅಲ್ಪಾಹಾರ ಸೇವನೆ ಬಳಿಕ, ಮಧ್ಯಾಹ್ನ ಭೋಜನಕ್ಕೆ ಮುಂಚೆ ಹಣ್ಣುಗಳ ಸೇವನೆಗೆ ಉತ್ತಮವಾಗಿರುತ್ತದೆ ಅನ್ನುತ್ತಾರೆ ಆಹಾರ ತಜ್ಞರು. ನಿಮಗೆ ತೀರಾ ಬೇಕು ಅನಿಸಿದಲ್ಲಿ ಮಧ್ಯಾಹ್ನದ ಊಟದ ನಂತರ ನೀವು ಹಣ್ಣು ತಿನ್ನಬಹುದು. ಆದರೆ ಅದೇ ರಾತ್ರಿ ತಡವಾಗಿ ಊಟ ಮಾಡಿದ ಬಳಿಕ, ಹಣ್ಣುಗಳನ್ನು ಆಲಸ್ಯದಿಂದ ತಡವಾಗಿ ತಿನ್ನುವುದು ತಪ್ಪು. ಇದರಿಂದ ಬಹಳ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದರ ಜೊತೆಗೆ, ರಾತ್ರಿ ಹೊತ್ತು ಕೆಲ ಹಣ್ಣುಗಳನ್ನು ತಿನ್ನಬಾರದು ಅಂತಾನೂ ಇದೆ. ಅವು ಯಾವುವು ತಿಳಿಯೋಣ ಬನ್ನೀ…
ರಾತ್ರಿಯ ವೇಳೆ ಯಾವ ಹಣ್ಣುಗಳನ್ನು ತಿನ್ನಬಾರದು ಅಂದರೆ…
ಬಾಳೆಹಣ್ಣು: ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಾರದು. ಬಾಳೆಹಣ್ಣು ಶಕ್ತಿಯನ್ನು ಕೊಡುತ್ತದೆ. ಆದರೆ ಅದನ್ನು ರಾತ್ರಿ ಸಮಯದಲ್ಲಿ ತಿನ್ನುವುದರಿಂದ ಸಮಸ್ಯೆಗಳು ಉದ್ಭವವಾಗುತ್ತವೆ. ಇದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವ ಪ್ರಮಾದ ಇರುತ್ತದೆ. ರಾತ್ರಿ ಹೊತ್ತು ಬಾಳೆಹಣ್ಣು ತಿನ್ನುವುದರಿಂದ ನಿದ್ರೆಗೆ ಭಂಗ ಬರುತ್ತದೆ.
ಸೇಬು- ಆಪಲ್: ದಿನಕ್ಕೆ ಒಂದು ಸೇಬು ತಿಂದು ಅನಾರೋಗ್ಯವನ್ನು ದೂರವಿಡಿ ಎಂಬುದು ವಾಡಿಕೆ ಮಾತು. ಆದರೆ ರಾತ್ರಿ ಹೊತ್ತು ಆಪಲ್ ತಿನ್ನುವುದನ್ನು ಬಿಟ್ಟುಬಿಡಿ. ರಾತ್ರಿ ಸೇಬು ತಿನ್ನುವುದರಿಂದ ಸಮಸ್ಯೆಗಳು ಎದುರಾಗುತ್ತವೆ. ಏನೆಂದರೆ ಆಪಲ್ ತಿನ್ನುವುದರಿಂದ ಜೀರ್ಣಕ್ರಿಯೆಗೆ ಬಾಧೆಯಾಗುತ್ತದೆ. ರಾತ್ರಿ ಆಪಲ್ ತಿನ್ನುವುದರಿಂದ ಗ್ಯಾಸ್, ಅಸಿಡಿಟಿ ಆಗುತ್ತದೆ.
ಸಪೋಟಾ: ರಾತ್ರಿ ಹೊತ್ತು ಚಿಕೂ ತಿನ್ನಬಾರದು. ಸಪೋಟಾದಲ್ಲಿ ತುಂಬಾ ಸಕ್ಕರೆ ಅಂಶ ಇರುತ್ತದೆ. ಇದು ಶರೀರದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ ಮತ್ತು ದೇಹ ಶಕ್ತಿಯ ಪ್ರಮಾಣವನ್ನು ದಿಢೀರನೆ ಏರಿಸುತ್ತದೆ. ನಿದ್ರೆಗೆ ಬಾಧಕವಾಗುತ್ತದೆ.
ನಿಂಬೆ- ಕಿತ್ತಳೆ: ರಾತ್ರಿ ವೇಳೆ ನಿಂಬೆ- ಕಿತ್ತಳೆ ತಿನ್ನಬಾರದು. ಇದರಲ್ಲಿ ಆಮ್ಲ ಆಹಾರ ಸಮೃದ್ಧಿಯಾಗಿ ಲಭಿಸುತ್ತದೆ. ಇದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದರಿಂದ ನಿದ್ರೆ ಹೋಗುವುದಕ್ಕೆ ಕಷ್ಟವಾಗುತ್ತದೆ.
ಆರೆಂಜ್, ದ್ರಾಕ್ಷಿ: ರಾತ್ರಿ ವೇಳೆ ಸಿಟ್ರಸ್ ಹಣ್ಣುಗಳನ್ನು ತಿನ್ನಬಾರದು. ಆರೆಂಜ್ ಮತ್ತು ದ್ರಾಕ್ಷಿಯಲ್ಲಿ ಆಮ್ಲ ಪದಾರ್ಥ ಧಾರಾಳವಾಗಿ ಇರುತ್ತದೆ. ಹಾಗಾಗಿ ನಿದ್ರೆ ಸಮಯಕ್ಕೆ ಮೊದಲು ಅವುಗಳನ್ನು ತಿನ್ನಬಾರದು. ಕಿದರಲ್ಲಿ ವಿಟಮಿನ್ ಸಿ, ಫೈಬರ್ ಪುಷ್ಕಳವಾಗಿ ಲಭ್ಯವಿರುತ್ತದೆ. ಹಾಗಾಗಿ ಇವುಗಳನ್ನು ತಿನ್ನುವುದರಿಂದ ಗ್ಯಾಸ್ ಮತ್ತು ಅಸಿಡಿಟಿ ಬರುತ್ತದೆ.
To read the article in Telugu click here