ಮಧುಮೇಹಿಗಳು ಬೇಸಿಗೆಯಲ್ಲಿ ಈ ಪಾನೀಯಗಳ ಕುಡಿದು ಆರೋಗ್ಯ ಕಾಪಾಡಿಕೊಳ್ಳಿ

TV9 Digital Desk

| Edited By: ನಯನಾ ರಾಜೀವ್

Updated on: May 08, 2022 | 5:10 PM

ಬೇಸಿಗೆ ಶುರುವಾಗಿದೆ, ಕಲ್ಲಂಗಡಿ, ಮಾವು, ಸೇಬು, ಕರ್ಬೂಜಾ ಸೇರಿದಂತೆ ಹಲವು ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಮಧುಮೇಹಿಗಳು ಯಾವ ಪಾನೀಯಗಳನ್ನು ಕುಡಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮಧುಮೇಹಿಗಳು ಬೇಸಿಗೆಯಲ್ಲಿ ಈ ಪಾನೀಯಗಳ ಕುಡಿದು ಆರೋಗ್ಯ ಕಾಪಾಡಿಕೊಳ್ಳಿ
ಮಜ್ಜಿಗೆ

ಬೇಸಿಗೆ ಶುರುವಾಗಿದೆ, ಕಲ್ಲಂಗಡಿ, ಮಾವು, ಸೇಬು, ಕರ್ಬೂಜಾ ಸೇರಿದಂತೆ ಹಲವು ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಮಧುಮೇಹಿಗಳು ಯಾವ ಪಾನೀಯಗಳನ್ನು ಕುಡಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಬೇಸಿಗೆಯಲ್ಲಿ ಕುಡಿಯಲು ಬಳಸುವ ಪಾನೀಯಗಳು ಮಧುಮೇಹಿಗಳಿಗೆ ಉತ್ತಮವಲ್ಲ. ಏಕೆಂದರೆ ಬಹುತೇಕ ಪಾನೀಯಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ, ಇದು ಮಧುಮೇಹಿಗಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.ಬೇಸಿಗೆಯು ತಾಪಮಾನವನ್ನು ಹೆಚ್ಚಿಸುವುದಲ್ಲದೆ, ಬಾಯಾರಿಕೆಯನ್ನು ಕೂಡಾ ಮತ್ತಷ್ಟು ಹೆಚ್ಚಿಸುತ್ತದೆ. ಹೊರಗಿನ ತಣ್ಣನೆಯ ವಸ್ತುಗಳನ್ನು ತಿನ್ನುವ ಬಯಕೆಯನ್ನು ಕೂಡಾ ಅತಿಯಾಗುತ್ತದೆ.

ಹೀಗಾಗಿ ಮಧುಮೇಹ ರೋಗಿಗಳಿಗೆ ಕೆಲವೇ ಕೆಲವು ಆಯ್ಕೆಗಳಿಗೆ ಬೇಸಿಗೆಯಲ್ಲಿ, ದೇಹದಲ್ಲಿ ನೀರಿನ ಕೊರತೆಯು ಹೆಚ್ಚು ಗೋಚರಿಸುತ್ತದೆ. ಈ ಋತುವಿನಲ್ಲಿ ತಂಪಾದ ಮತ್ತು ತಾಜಾ ಪಾನೀಯಗಳನ್ನು ಕುಡಿಯುವಂತೆ ಹೇಳಲಾಗುತ್ತದೆ.

ಬೆಲ್ಲದ ಹಣ್ಣು:  ನೈಸರ್ಗಿಕ ಫೈಬರ್, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಇದು ಹೊಟ್ಟೆಯನ್ನು ಕೂಡ ತಂಪಾಗಿರಿಸುತ್ತದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

ಶುಂಠಿ ಮತ್ತು ನಿಂಬೆ : ಶುಂಠಿಯು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ, ಹಾಗಾಗಿ ಬೇಸಿಗೆಯಲ್ಲಿ ಸಕ್ಕರೆ ರೋಗಿಗಳಿಗೆ ಇದು ತುಂಬಾ ಒಳ್ಳೆಯ ಪಾನೀಯ ಎಂದು ಹೇಳಬಹುದು. ತಣ್ಣೀರಿನಲ್ಲಿ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಶುಂಠಿಯೊಂದಿಗೆ ಬೆರೆಸಿ ಕುಡಿಯಿರಿ ಮತ್ತು ನಿಮ್ಮ ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸುತ್ತದೆ.

ನೀರು ಮಜ್ಜಿಗೆ : ಎರಡು ಕಪ್ ತಣ್ಣನೆಯ ಮೊಸರು, ಒಂದು ಲೋಟ ನೀರು ಮತ್ತು ಕೆಲವು ಐಸ್ ಕ್ಯೂಬ್‌ಗಳೊಂದಿಗೆ ಸ್ವಲ್ಪ ಜೀರಿಗೆಯನ್ನು ಸೇರಿಸಿ. ಈ ಎಲ್ಲಾ ವಸ್ತುಗಳನ್ನು ಮಿಶ್ರಣ ಮಾಡಿ ಕುಡಿಯಿರಿ. ಇದು ಸಕ್ಕರೆ ಮುಕ್ತ ಪಾನೀಯವಾಗಿದೆ.

ಅಲ್ಲದೇ ಇದು ಅತಿ ಆರೋಗ್ಯಕರ ಪಾನೀಯವಾಗಿದ್ದು ಜೀರ್ಣಕ್ರಿಯೆ ಉತ್ತಮಗೊಳಿಸಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ ನಮ್ಮ ಸಾಂಪ್ರಾದಾಯಿಕ ಊಟದಲ್ಲಿ ಕೊನೆಯದಾಗಿ ಮಜ್ಜಿಗೆಯನ್ನು ಸೇವಿಸಲು ನೀಡಲಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ಸಿದ್ಧ ರೂಪದಲ್ಲಿ ಸಿಗುತ್ತಿರುವ ಮಜ್ಜಿಗೆ ವಾಸ್ತವದಲ್ಲಿ ಮೊಸರಿಗೆ ಕೊಂಚ ನೀರು ಸೇರಿಸಿ ಉಪ್ಪು ಖಾರ ಸೇರಿಸಿರಲಾಗಿರುತ್ತದೆ.

ಫೆಮಿನಾ ಎಂಬ ಮಾಧ್ಯಮದಲಿ ಪ್ರಕಟವಾದ ವರದಿಯ ಪ್ರಕಾರ, ಮಜ್ಜಿಗೆಯನ್ನು ಹೇಗೇ ತಯಾರಿಸಿರಲಿ, ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಂತೂ ಇದ್ದೇ ಇವೆ. ನಿಯಮಿತವಾಗಿ ಮಜ್ಜಿಗೆಯನ್ನು ಸೇವಿಸುತ್ತಾ ಇರುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಜೀರ್ಣಾಂಗಗಳು ಉತ್ತಮ ಆರೋಗ್ಯದಲ್ಲಿರುತ್ತವೆ.

ಇವನ್ನು ಯಂತ್ರಗಳಲ್ಲಿ ಅತಿ ಬಿಸಿಯಾಗಿಸಿ ತಯಾರಿಸಲಾಗುವ ಕಾರಣ ಇವು ಇದರಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿಂದ ವಂಚಿತವಾಗಿರುತ್ತದೆ. ಆದ್ದರಿಂದ ಮಜ್ಜಿಗೆಯನ್ನು ಮನೆಯಲ್ಲಿಯೇ ತಯಾರಿಸುವುದು ಅತ್ಯುತ್ತಮ ಆಯ್ಕೆಯಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada