ಉದ್ಯೋಗದಲ್ಲಿರುವ ಎಲ್ಲಾ ತಾಯಂದಿರನ್ನು ಕಾಡುವ ಆರೋಗ್ಯ ಸಮಸ್ಯೆಗಳಿವು
ಒಂದು ಕುಟುಂಬವು ಸುಸೂತ್ರವಾಗಿ ನಡೆಯಬೇಕಾದರೆ ಅದಕ್ಕೆ ತಾಯಿಯೇ ಅಡಿಪಾಯ, ಯಾವುದೇ ಅಪೇಕ್ಷೆಯಿಲ್ಲದೆ ಗಂಡ, ಮಕ್ಕಳು, ಉದ್ಯೋಗವನ್ನು ನೋಡಿಕೊಳ್ಳುವ ತಾಯಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
ಮಕ್ಕಳು, ಮನೆ, ಉದ್ಯೋಗವೆರಡನ್ನೂ ಸರಿಸಮನಾಗಿ ನಿಭಾಯಿಸಬಲ್ಲ ತಾಯಿಗೆ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಪ್ರತಿಯೊಂದು ಕುಟುಂಬದ ಅಡಿಪಾಯವೇ ಅಮ್ಮ ಎನ್ನಬಹುದು. ಮನೆಯವರಿಗಾಗಿ ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಆಕೆ ಸಿದ್ಧಳಿರುತ್ತಾಳೆ.ತೆರೆದುಕೊಂಡಿರುವುದಿಲ್ಲ, ಗಂಡ, ಮಕ್ಕಳು ತಾಯಿಗೆ ಗಮನ ನೀಡದೇ ಹೋದಾಗ ತಾಯಿಯ ಮನಸ್ಸು ಖಿನ್ನತೆಗೆ ಬೀಳುತ್ತದೆ ಅದು ಕೂಡ ಖಿನ್ನತೆಗೆ ಕಾರಣವಾಗಬಹುದು.
ಹಿಂದೆಲ್ಲಾ ತಾಯಂದಿರು ಹೊರಗಡೆ ಕೆಲಸಕ್ಕೆ ಹೋಗುವುದು ತುಂಬಾ ಕಡಿಮೆ, ಮನೆಯಲ್ಲಿಯೇ ಮನೆಯವರಿಗೋಸ್ಕರ ದುಡಿಯುತ್ತಿದ್ದರು. ಇದು ಕೂಡ ಅವರ ಮನಸ್ಥಿತಿ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತಿತ್ತು. ಮನೆಯಲ್ಲಿಯೇ ಇದ್ದು ಅವರ ಮನಸ್ಸು ಹೊರ ಪ್ರಪಂಚಕ್ಕೆ
ತಾಯಂದಿರು ಅನುಭವಿಸುವ ಆರೋಗ್ಯ ಸಮಸ್ಯೆಗಳು ಹೀಗಿವೆ ಖಿನ್ನತೆಗೆ ಒಳಗಾಗುತ್ತಾರೆ: ತಾಯಿಯಾದವಳಿಗೆ ಮನೆಯವರನ್ನು ನೋಡಿಕೊಳ್ಳುವ ಭರದಲ್ಲಿ ತನ್ನ ಬಗ್ಗೆ ಗಮನಕೊಡಲು ಸಾಧ್ಯವಾಗುತ್ತಿಲ್ಲ. ಸ್ವತಃ ಅಮ್ಮ ತನ್ನ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ದುಡುಯುತ್ತಿರುತ್ತಾಳೆ. ಕೆಲವೊಮ್ಮೆ ಇದು ತಾಯಿ ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಸ್ವತಃ ಅಮ್ಮನೇ ತನ್ನ ಮಾನಸಿಕ ಆರೋಗ್ಯಕ್ಕಾಗಿ ಒಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು ಮನೆಯಲ್ಲಿಯೇ ಇರುವ ತಾಯಂದಿರಿಗೆ ಒಳ್ಳೆಯದು.
ತೂಕ ಹೆಚ್ಚಳ: ನೌಕರಿಯಲ್ಲಿರುವ ತಾಯಂದಿರು ಆಹಾರವನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ, ಅತಿಯಾದ ರಕ್ಷದೊತ್ತಡ, ಮಧುಮೇಹಕ್ಕೂ ಇದು ದಾರಿ ಮಾಡಿಕೊಡಬಹುದು. ನಿತ್ಯ ಸುಮಾರು 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ, ಜಾಗಿಂಗ್ ಮಾಡಿ ಇದು ನಿಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮವಾಗಿಸುತ್ತದೆ.
ಥೈರಾಯ್ಡ್: ಕೆಲಸಕ್ಕೆ ಹೋಗುವ ಹೆಚ್ಚಿನ ತಾಯಂದಿರಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ, ಗರ್ಭಾವಸ್ಥೆಯಲ್ಲಿದ್ದಾಗ ಹಾರ್ಮೋನ್ ಸಮತೋಲವನ್ನು ಕಳೆದುಕೊಳ್ಳುತ್ತದೆ. ಬಳಿಕ ತೂಕ ಹೆಚ್ಚಳ, ಮಲಬದ್ಧತೆ, ಮುಟ್ಟಿನ ದಿನಾಂಕ ಏರುಪೇರು ಸೇರಿದಂತೆ ಹಲವು ತೊಂದರೆಗಳಾಗುತ್ತವೆ. ನಿತ್ಯ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡಿ,
ವಿಪರೀತ ಬೆನ್ನು ನೋವು: ಬ್ರೇಕೆ ತೆಗೆದುಕೊಳ್ಳದೆ ಸದಾ ಕಂಪ್ಯೂಟರ್ ಎದುರು ಕುಳಿತುಕೊಳ್ಳುವುದರಿಂದ ಬೆನ್ನಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ, ಖುರ್ಚಿ ಒರಗಿಕೊಳ್ಳದೆ ಸಿಸ್ಟಂಗೆ ಹೊಂದಿಕೊಂಡಂತೆ ಕುಳಿತು ಕೆಲಸ ಮಾಡುವುದರಿಂದ ಕಣ್ಣಿಗೂ ಹೆಚ್ಚಿನ ಶ್ರಮ ಬಿದ್ದಂಗಾಗುತ್ತದೆ.
ಜೀವನಶೈಲಿ ಹಾಗೂ ಆರೋಗ್ಯಕ್ಕೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ