Mother’s Day Gifts: ತಾಯಂದಿರ ದಿನ ಪ್ರಯುಕ್ತ ಇಂದು ನಿಮ್ಮ ಅಮ್ಮನಿಗೆ ಈ ಉಡುಗೊರೆ ನೀಡಿ
Mother's Day 2022: ತನ್ನ ಸರ್ವಸ್ವವನ್ನೇ ತನ್ನ ಮಕ್ಕಳಿಗೆ ಧಾರೆ ಎರೆಯುವ ತಾಯಿಗೆ ಇಂದು ಸಂಭ್ರಮದ ದಿನ. ಹೌದು, ಇಂದು ಮೇ 8. ಅಂದರೆ ವಿಶ್ವ ತಾಯಂದಿರ ದಿನ
ಒಂಬತ್ತು ತಿಂಗಳು ಹೊತ್ತು, ಹೆರುವ ತಾಯಿ (Mothers) ಓಡಾಡುವ ದೇವರು. ಕಣ್ಣಿಗೆ ಕಾಣುವ ದೇವತೆ. ತನ್ನ ಸರ್ವಸ್ವವನ್ನೇ ತನ್ನ ಮಕ್ಕಳಿಗೆ ಧಾರೆ ಎರೆಯುವ ತಾಯಿಗೆ ಇಂದು ಸಂಭ್ರಮದ ದಿನ. ಹೌದು, ಇಂದು ಮೇ 8. ಅಂದರೆ ವಿಶ್ವ ತಾಯಂದಿರ ದಿನ (world mother day). ಈ ದಿನ ತನ್ನ ಅಮ್ಮನಿಗೆ ಏನಾದರೂ ಉಡುಗೊರೆ ನೀಡಬೇಕು ಅಂತ ಹಲವರು ಅಂದುಕೊಂಡಿರುತ್ತಾರೆ. ಆದರೆ, ಯಾವ ಗಿಫ್ಟ್ ಕೊಡಬೇಕು? ಯಾವ ಉಡುಗೊರೆ ತಾಯಿಗೆ ಹೆಚ್ಚು ಇಷ್ಟವಾಗುತ್ತದೆ? ಅಂತ ಯೋಚಿಸ್ತಾ ಇರುತ್ತೀರಾ ಅಲ್ವಾ? ಚಿಂತೆ ಬಿಡಿ. ನಾವು ನಿಮಗೆ ಉಡುಗೊರೆಯ ಸಲಹೆಗಳನ್ನು ನೀಡುತ್ತೇವೆ.
* ಸೀರೆ: ಮಹಿಳೆಯರಿಗೆ ಸೀರೆ ಅಂದರೆ ಪಂಚಪ್ರಾಣ. ತನ್ನ ತಾಯಿಗೆ ಉಡುಗೊರೆಯಾಗಿ ಸೀರೆಯನ್ನು ಕೊಡಬಹುದು. ಅಮ್ಮನಿಗೆ ಇಷ್ಟವಾಗುವ ಬಣ್ಣದ ಸೀರೆಯನ್ನು ನೀಡಿ. ಖುಷಿಯಲ್ಲಿ ತೇಲುತ್ತಾರೆ. ಕೆಲವರು ಸೀರೆ ಬದಲು ಹೆಚ್ಚಾಗಿ ಚೂಡಿದಾರ್ ಇಷ್ಟಪಡುತ್ತಾರೆ. ಹೀಗಾಗಿ ಚೂಡಿದಾರ್ ಕೂಡಾ ನೀಡಬಹುದು.
* ವಾಚ್: ಕೆಲ ಮಹಿಳೆಯರಿಗೆ ವಾಚ್ ಎಂದರೆ ತುಂಬಾ ಕ್ರೇಜ್ ಇರುತ್ತದೆ. ಅಂತವರ ಮಕ್ಕಳು ತನ್ನ ತಾಯಿಗೆ ತಾಯಂದಿರ ದಿನದ ವಿಶೇಷವಾಗಿ ವಾಚ್ ನೀಡಬಹುದು. ಇತ್ತೀಚೆಗೆ ಸ್ಮಾರ್ಟ್ ವಾಚ್ಗಳ ಬಳಕೆ ಹೆಚ್ಚಿದೆ. ಹೀಗಾಗಿ ಸ್ಮಾರ್ಟ್ ವಾಚ್ಗಳನ್ನೇ ಕೊಡಬಹುದು.
* ಆಭರಣ: ಈ ದಿನದ ಸ್ಪೆಷಲ್ ಆಗಿ ಆಭರವನ್ನು ಉಡುಗೊರೆಯಾಗಿ ನೀಡಬಹುದು. ನೆಕ್ಲೇಸ್, ಬಳೆ, ಸರ, ಉಂಗುರ ಹೀಗೆ ನಿಮಗೆ ಅನುಕೂಲಕ್ಕೆ ತಕ್ಕಂತೆ ಆಭರಣವನ್ನು ನೀಡಿ.
* ಸೌಂದರ್ಯವರ್ಧಕಗಳು: ಮನೆಯಲ್ಲಿನ ಎಲ್ಲ ಜಂಜಾಟಗಳ ನಡುವೆ, ಸಾಮಾನ್ಯವಾಗಿ ತಾಯಂದಿರು ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತು ಬಿಡುತ್ತಾರೆ. ಹೀಗಾಗಿ ದಿನದಂದು ನೀವು ನಿಮ್ಮ ತಾಯಿಗೆ ಮೇಕಪ್ ಅಥವಾ ಹೇರ್ ಡ್ರೆಸ್ಸಿಂಗ್ ಉಪಕರಣಗಳನ್ನ ನೀಡಬಹುದು.
* ಮೊಬೈಲ್: ಮೊಬೈಲ್ ಕೂಡಾ ತಾಯಿಗೆ ನೀಡಲು ಉತ್ತಮ ಉಡುಗೊರೆ. ಮಕ್ಕಳು ಬೇರೆ ಬೇರೆ ನಗರಗಲ್ಲಿ ಇದ್ದರೆ, ಅಮ್ಮನಿಗೆ ತನ್ನ ಮಕ್ಕಳನ್ನು ಆಗಾಗ ನೋಡಬೇಕು ಅಂತ ಅನಿಸುತ್ತದೆ. ಹೀಗಾಗಿ ಸ್ಮಾರ್ಟ್ ಫೋನ್ಗಳನ್ನ ನೀಡಿದರೆ ವಿಡಿಯೋ ಕಾಲ್ ಮೂಲಕ ಖುಷಿ ಪಡಬಹುದು.
ಇದನ್ನೂ ಓದಿ
ಶ್ರೀಶೈಲ ಜಗದ್ಗುರುಗಳು ಪಾದಪೂಜೆ ಮಾಡಿದ ಜನಾರ್ದನರೆಡ್ಡಿ ದಂಪತಿ; ಯಡೂರು-ಶ್ರೀಶೈಲದವರೆಗಿನ ಪಾದಯಾತ್ರೆ ಬಗ್ಗೆ ಚರ್ಚೆ