ಶ್ರೀಶೈಲ ಜಗದ್ಗುರುಗಳು ಪಾದಪೂಜೆ ಮಾಡಿದ ಜನಾರ್ದನರೆಡ್ಡಿ ದಂಪತಿ; ಯಡೂರು-ಶ್ರೀಶೈಲದವರೆಗಿನ ಪಾದಯಾತ್ರೆ ಬಗ್ಗೆ ಚರ್ಚೆ
ರೆಡ್ಡಿ ಬ್ರದರ್ಸ್, ಶ್ರೀರಾಮುಲು ಶ್ರೀಶೈಲ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಬಳಿಕ ಶ್ರೀಶೈಲ ಜಗದ್ಗುರುಗಳು ಯಡೂರು ಕ್ಷೇತ್ರದಿಂದ ಶ್ರೀಶೈಲದವರೆಗೂ ನಡೆಯಲಿರುವ ಪಾದಯಾತ್ರೆ ಬಗ್ಗೆ ಪೂರ್ವಸಿದ್ಧತಾ ಸಭೆ ನಡೆಸಿದ್ರು.
ಬಳ್ಳಾರಿ: ಮಾಜಿ ಸಚಿವ ಜನಾರ್ದನರೆಡ್ಡಿ ನಿವಾಸಕ್ಕೆ ಶ್ರೀಶೈಲ ಜಗದ್ಗುರುಗಳು ಭೇಟಿ ನೀಡಿದ್ದಾರೆ. ಜನಾರ್ದನರೆಡ್ಡಿ, ಪತ್ನಿ ಲಕ್ಷ್ಮೀ ಅರುಣಾ ಜಗದ್ಗುರುಗಳ ಪಾದಪೂಜೆ ಮಾಡಿದ್ದಾರೆ. ರೆಡ್ಡಿ ಬ್ರದರ್ಸ್, ಶ್ರೀರಾಮುಲು ಶ್ರೀಶೈಲ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಬಳಿಕ ಶ್ರೀಶೈಲ ಜಗದ್ಗುರುಗಳು ಯಡೂರು ಕ್ಷೇತ್ರದಿಂದ ಶ್ರೀಶೈಲದವರೆಗೂ ನಡೆಯಲಿರುವ ಪಾದಯಾತ್ರೆ ಬಗ್ಗೆ ಪೂರ್ವಸಿದ್ಧತಾ ಸಭೆ ನಡೆಸಿದ್ರು.
‘ದೇಶ ಒಂದು ಅಂದ ಮೇಲೆ ಎಲ್ಲರಿಗೂ ಒಂದೇ ಕಾನೂನು’ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕಾನೂನು ಪಾಲಿಸಬೇಕು. ದೇಶ ಒಂದು ಅಂದ ಮೇಲೆ ಎಲ್ಲರಿಗೂ ಒಂದೇ ಕಾನೂನು ಎಂದು ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಪಂಡಿರಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಒಂದು ಧರ್ಮದವರು ಮಾಡ್ತಾರೆಂದು ಮತ್ತೊಬ್ಬರು ಮಾಡುತ್ತಾರೆ. ದೇಶ ಒಂದು ಅಂದ ಮೇಲೆ ನಮಗೆಲ್ಲರಿಗೂ ಒಂದೇ ಕಾನೂನು. ದೇಶದ ಪ್ರತಿಯೊಬ್ಬ ಪ್ರಜೆಯೂ ಕಾನೂನಿಗೆ ಗೌರವ ಕೊಡಬೇಕು ಎಂದರು. ಇನ್ನು ಭಜನೆ ವಿಷಯಕ್ಕೆ ಸ್ವಾಮೀಜಿ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ಒಬ್ಬರಿಗೆ ಅವಕಾಶ ನೀಡಿ, ಮತ್ತೊಬ್ಬರಿಗೆ ಅವಕಾಶ ಕೊಡದಿದ್ರೆ ತಪ್ಪು. ಕಾನೂನು ಪಾಲಿಸದಿದ್ದರೆ ಇಂತಹ ಅವಾಂತರ ಸೃಷ್ಟಿಯಾಗುತ್ತದೆ. ಸುಪ್ರೀಂಕೋರ್ಟ್ ಆದೇಶವನ್ನು ನಾವೆಲ್ಲರೂ ಗೌರವಿಸಬೇಕು ಎಂದು ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಶ್ರೀಶೈಲ ಜಗದ್ಗುರುಗಳ ಹೇಳಿದ್ದಾರೆ.
ಒಳ್ಳಾರಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:07 am, Sun, 8 May 22