ಅಂಜನಾದ್ರಿಯನ್ನ ಮಂತ್ರಾಲಯ ಶ್ರೀಗಳಿಗೆ ಹಸ್ತಾಂತರ ಮಾಡಬೇಕು; ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್ಆರ್ ಶ್ರೀನಾಥ್ ಒತ್ತಾಯ
ವಿಶ್ವದಲ್ಲಿ ಅಂಜನಾದ್ರಿ ಪರ್ವತ ದೊಡ್ಡ ಧಾರ್ಮಿಕ ಕೇಂದ್ರವಾಗುತ್ತಿದೆ. ನಮ್ಮ ಧರ್ಮದ ಪ್ರಕಾರ ಹನುಮನ ಪೂಜಾ ವಿಧಿವಿಧಾನ ಆಗಬೇಕು. ಹೀಗಾಗಿ ಮಂತ್ರಾಲಯದ ರಾಯರ ಮಠಕ್ಕೆ ಹಸ್ತಾಂತರ ಮಾಡಬೇಕು.
ಅಂಜನಾದ್ರಿಯನ್ನ ಮಂತ್ರಾಲಯ (Mantralayam) ಶ್ರೀಗಳಿಗೆ ಹಸ್ತಾಂತರ ಮಾಡಬೇಕು ಅಂತ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್ಆರ್ ಶ್ರೀನಾಥ್ (HR Shrinath) ಒತ್ತಾಯಿಸಿದ್ದಾರೆ. ಪೂಜಾ ವಿಧಿವಿಧಾನ & ಅಭಿವೃದ್ಧಿ ವಿಷಯಕ್ಕಾಗಿ ಹಸ್ತಾಂತರಿಸಬೇಕು. ಸದ್ಯ ಅಂಜನಾದ್ರಿ ಬೆಟ್ಟ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದೆ. ವಿಶ್ವದಲ್ಲಿ ಅಂಜನಾದ್ರಿ ಪರ್ವತ ದೊಡ್ಡ ಧಾರ್ಮಿಕ ಕೇಂದ್ರವಾಗುತ್ತಿದೆ. ನಮ್ಮ ಧರ್ಮದ ಪ್ರಕಾರ ಹನುಮನ ಪೂಜಾ ವಿಧಿವಿಧಾನ ಆಗಬೇಕು. ಹೀಗಾಗಿ ಮಂತ್ರಾಲಯದ ರಾಯರ ಮಠಕ್ಕೆ ಹಸ್ತಾಂತರ ಮಾಡಬೇಕು. ಈ ಮೂಲಕ ಅಂಜನಾದ್ರಿ ಇನ್ನಷ್ಟು ದೊಡ್ಡ ಶಕ್ತಿ ಕೇಂದ್ರವಾಗುತ್ತೆ. ರಾಘವೇಂದ್ರ ಸ್ವಾಮಿಗಳು ಆಂಜನೇಯನ ಭಕ್ತರಾಗಿದ್ದರು. ಅಂಜನಾದ್ರಿ ಬೆಟ್ಟದ ಪಕ್ಕದಲ್ಲೇ ನವ ವೃಂದಾವನ ಕೂಡ ಇದೆ ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹೆಚ್ಆರ್ ಶ್ರೀನಾಥ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ
ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಆರೋಗ್ಯದಲ್ಲಿ ಏರುಪೇರು! ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲು
Jacqueline Fernandez: ವಿಶೇಷ ಗೆಟಪ್ನಲ್ಲಿ ಮಿಂಚಿದ ‘ವಿಕ್ರಾಂತ್ ರೋಣ’ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್