ಸಂತ ಸಮ್ಮೇಳನಕ್ಕೆ ಕೊಪ್ಪಳ ಅಂಜನಾದ್ರಿ ಪರ್ವತದ ಅರ್ಚಕರಿಂದ ಯುಪಿ ಸಿಎಂ ಯೋಗಿ ಆದಿತ್ಯನಾಥ್​ಗೆ ಆಹ್ವಾನ

ಅಗಸ್ಟ್​ನಲ್ಲಿ ಅಂಜನಾದ್ರಿ ಪರ್ವತದಲ್ಲಿ ನೂರಾರು ಸಾಧು ಸಂತರನ್ನ ಕರೆಸಿ ಸಂತ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಸಂತ ಸಮ್ಮೇಳನದ ಸನಾತನ ಹಿಂದೂ ಧರ್ಮದ ಸಾಧಕ ಬಾಧಕಗಳ ಚರ್ಚೆ ನಡೆಯಲಿದೆ.

ಸಂತ ಸಮ್ಮೇಳನಕ್ಕೆ ಕೊಪ್ಪಳ ಅಂಜನಾದ್ರಿ ಪರ್ವತದ ಅರ್ಚಕರಿಂದ ಯುಪಿ ಸಿಎಂ ಯೋಗಿ ಆದಿತ್ಯನಾಥ್​ಗೆ ಆಹ್ವಾನ
ಅಂಜನಾದ್ರಿ ಪರ್ವತದ ಅರ್ಚಕರು ಸಂತ ಸಮ್ಮೇಳನಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ಗೆ ಆಹ್ವಾನ ನೀಡಿದ್ದಾರೆ
Follow us
TV9 Web
| Updated By: sandhya thejappa

Updated on: May 04, 2022 | 2:51 PM

ಕೊಪ್ಪಳ: ಅಂಜನಾದ್ರಿ (Anjanadri) ಸದ್ಯ ಬಹಳ ಚರ್ಚೆಯಲ್ಲಿರುವ ಹೆಸರು. ಕೊಪ್ಪಳ (Koppal) ಜಿಲ್ಲೆಯ ಗಂಗಾವತಿಯ ಕಿಷ್ಕಿಂಧೆ ಪ್ರದೇಶದಲ್ಲಿರುವ ಅಂಜನಾದ್ರಿ ಇದೀಗ ನಾನಾ ಕಾರಣಕ್ಕೆ ಸುದ್ದಿಯಲ್ಲಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ಟಿಟಿಡಿ ಹನುಮ ಹುಟ್ಟಿದ್ದು ನಮ್ಮಲ್ಲೆ ಎಂದು ಖ್ಯಾತೆ ತಗೆದಿತ್ತು. ಅದಾದ ಬಳಿಕ ಅಂಜನಾದ್ರಿ ಹೆಸರು ಬಹಳ ಚರ್ಚೆಯಲ್ಲಿದೆ. ಕಿಷ್ಕಿಂಧೆ ಪ್ರದೇಶವೇ ಹನುಮ ಹುಟ್ಟಿದ ಸ್ಥಳ ಅನ್ನೋದಕ್ಕೆ ಸಾಕಷ್ಟು ಉದಹಾರಣೆಗಳಿವೆ. ವಾಲ್ಮೀಕಿಯಲ್ಲೂ ಕಿಷ್ಕಿಂಧೆ ಪ್ರದೇಶ ಹನುಮ ಹುಟ್ಟಿದ ಸ್ಥಳ ಎಂದು ಉಲ್ಲೇಖವಿದೆ. ಆದರೆ ಟಿಟಿಡಿ ಸುಮ್ಮನೆ ಖ್ಯಾತೆ ತೆಗೆದು ಹನುಮನ ವಿವಾದ ಸೃಷ್ಟಿ ಮಾಡಿತ್ತು. ಯಾವಾಗ ಟಿಟಿಡಿ ವಿವಾದ ಹುಟ್ಟುಹಾಕಿತೋ ಕರ್ನಾಟಕ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ಒತ್ತು ಕೊಟ್ಟಿದೆ. ಅಂಜನಾದ್ರಿಯೇ ಹನುಮ ಜನ್ಮಸ್ಥಳ ಎಂದು ಘೋಷಣೆ ಮಾಡುವ ಚಿಂತನೆಯಲ್ಲಿದೆ.

ಅಂಜನಾದ್ರಿಯಲ್ಲಿ ನಡೆಯಲಿದೆ ಸಂತ ಸಮ್ಮೇಳನ: ಅಗಸ್ಟ್​ನಲ್ಲಿ ಅಂಜನಾದ್ರಿ ಪರ್ವತದಲ್ಲಿ ನೂರಾರು ಸಾಧು ಸಂತರನ್ನ ಕರೆಸಿ ಸಂತ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಸಂತ ಸಮ್ಮೇಳನದ ಸನಾತನ ಹಿಂದೂ ಧರ್ಮದ ಸಾಧಕ ಬಾಧಕಗಳ ಚರ್ಚೆ ನಡೆಯಲಿದೆ. ಇದೇ ಅಗಸ್ಟ್​ನಲ್ಲಿ ತುಂಗಭದ್ರಾ ನದಿ ತೀರ ಕಿಷ್ಕಿಂಧೆ ಪ್ರದೇಶ ಹನುಮನ ಜನ್ಮಭೂಮಿಯಲ್ಲಿ ನೂರಾರು ಸಂತರ ಸಮಾಗಮ ಆಗಲಿದೆ. ಸಂತ ಸಮ್ಮೇಳನ ಹೆಸರಲ್ಲಿ ಈ ಒಂದು ಅದ್ಭುತ ಕಾರ್ಯಕ್ರಮದ ಯೋಜನೆ ರೂಪಿಸಲಾಗಿದೆ.

ಸಂತ ಸಮ್ಮೇಳನಕ್ಕೆ ಯೋಗಿ ಆದಿತ್ಯನಾಥ್ ಅಹ್ವಾನ: ಸಂತ ಸಮ್ಮೇಳನಕ್ಕೆ ಯೋಗಿ ಆದಿತ್ಯನಾಥ್​ಗೆ ಅಹ್ವಾನ ನೀಡಲಾಗಿದೆ. ಅಂಜನಾದ್ರಿ ಪರ್ವತದ ಅರ್ಚಕ ವಿದ್ಯಾದಾಸ್ ಬಾಬಾ ಉತ್ತರ ಪ್ರದೇಶಕ್ಕೆ ತೆರಳಿ ಯೋಗಿ ಆದಿತ್ಯನಾಥ್​ಗೆ ಅಹ್ವಾನ ನೀಡಿದ್ದಾರೆ. ಅಗಸ್ಟ್ನಲ್ಲಿ ನಡೆಯುವ ಸಂತ ಸಮ್ಮೇಳನಕ್ಕೆ ಬರುವಂತೆ ಅಹ್ವಾನ ನೀಡಿದ್ದು, ಇದಕ್ಕೆ ಯೋಗಿ ಸಮ್ಮತ ಸೂಚಿಸಿದ್ದಾರೆ ಎನ್ನಲಾಗಿದೆ. ಅರ್ಚಕ ವಿದ್ಯಾದಾಸ್ ಬಾಬಾ ಯೋಗಿ ಆದಿತ್ಯನಾಥ್ನನ್ನು ಭೇಟಿ ಮಾಡಿ ಅಗಸ್ಟ್ ನಲ್ಲಿ ಅಂಜನಾದ್ರಿ ಪರ್ವತದಲ್ಲಿ ಸಂತ ಸಮ್ಮೇಳನಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ಯೋಗಿ ಸಮ್ಮತಿ ಸೂಚಿಸಿದ್ದಾರೆ. ಇದಲ್ಲದೆ ಗುಜರಾತ್ ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ಗೂ ಅಹ್ವಾನ ನೀಡಲಾಗಿದೆ.

ಅಗಸ್ಟ್​​ನಲ್ಲಿ ಅಂಜನಾದ್ರಿ ಪರ್ವತದಲ್ಲಿ ಸಂತ ಸಮ್ಮೇಳನ ಆಯೋಜನೆ ಮಾಡಲಾಗಿದೆ. ನೂರಾರು ಸಾಧು ಸಂತರು ಇದರಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ನಾನು ಉತ್ತರ ಪ್ರದೇಶಕ್ಕೆ ಬಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಅಹ್ವಾನ ನೀಡಿದ್ದು, ಅವರು ಹನುಮ ಹುಟ್ಟಿದ ಸ್ಥಳಕ್ಜೆ ಬರಲು ಸಮ್ಮತಿ ಸೂಚಿಸಿದ್ದಾರೆ ಅಂತ ಅಂಜನಾದ್ರಿ ಅರ್ಚಕ ವಿದ್ಯಾದಾಸ್ ಬಾಬಾ ಹೇಳಿದರು.

ಇದನ್ನೂ ಓದಿ

ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಎಂದು ಬಾಳ್ ಠಾಕ್ರೆ ಹೇಳುತ್ತಿರುವ ವಿಡಿಯೊ ಹಂಚಿಕೊಂಡ ರಾಜ್ ಠಾಕ್ರೆ

ಕಾಳಮ್ಮ ದೇವಿಯ ಉತ್ಸವದಲ್ಲಿ ವಿಶಿಷ್ಟ ಹರಕೆ ತೀರಿಸಿದ ಭಕ್ತರು; ಕಂಪ್ಲಿ-ಕೋಟೆಯಲ್ಲಿ ನಡೆದ ಕಾಳಮ್ಮ ಉತ್ಸವ ವೀಕ್ಷಿಸಲು ಬಂದ ಭಕ್ತಗಣ