ಕಾಳಮ್ಮ ದೇವಿಯ ಉತ್ಸವದಲ್ಲಿ ವಿಶಿಷ್ಟ ಹರಕೆ ತೀರಿಸಿದ ಭಕ್ತರು; ಕಂಪ್ಲಿ-ಕೋಟೆಯಲ್ಲಿ ನಡೆದ ಕಾಳಮ್ಮ ಉತ್ಸವ ವೀಕ್ಷಿಸಲು ಬಂದ ಭಕ್ತಗಣ
ಕಾಳಮ್ಮ ದೇವಿಯ ಪೂಜಾ ಮಹೋತ್ಸವದ ಪ್ರಯುಕ್ತ ತುಂಗಭದ್ರಾ ನದಿ ತೀರದಿಂದ ಮುತ್ತೈದೆಯರು ಪೂರ್ಣ ಕುಂಭದೊಂದಿಗೆ ಬೃಹತ್ ಮೆರವಣಿಗೆ ಅತ್ಯಂತ ಸಂಭ್ರಮದಿಂದ ಮಂಗಳವಾರ ನಡೆಯಿತು. ಮೆರವಣಿಗೆಯಲ್ಲಿ ನಾಲ್ಕು ಜನ ಭಕ್ತಾಧಿಗಳು ರುಬ್ಬುಗುಂಡು ಅಸ್ತ್ರ (ಅಲಗು), ಮೂವರು ಭಕ್ತಾಧಿಗಳು ಆಟೋರಿಕ್ಷಾ ಅಸ್ತ್ರ(ಅಲಗು) ದೊಂದಿಗೆ ಎಳೆಯುವ ಹಾಗೂ ಒಬ್ಬ ಭಕ್ತರು ಕೊಡೆ(ಛತ್ರಿ)ಅಸ್ತ್ರ (ಅಲಗು) ಮತ್ತು ಮತ್ತೊಬ್ಬ ಭಕ್ತರು ನಿಂಬೆಹಣ್ಣಿನ ಅಸ್ತ್ರ (ಅಲಗು)ದ ಹರಕೆ ತೀರಿಸಿದರು.
ಬಳ್ಳಾರಿ: ಜಿಲ್ಲೆಯ ಕಂಪ್ಲಿ ಪಟ್ಟಣದ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರರು ತಮ್ಮ ಆರಾಧ್ಯ ದೈವವಾಗಿರುವ ಕಾಳಮ್ಮ ದೇವಿಯ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಏಪ್ರಿಲ್ 4ರಂದು ಆಚರಿಸಿದರು. ಸೋಮವಾರದಂದು ಧ್ವಜಾರೋಹಣ. ಸಂಜೆ ಗಂಗೆಸ್ಥಳ ಮತ್ತು ಅಗ್ನಿ ಕುಂಭೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ಶ್ರದ್ಧಾಭಕ್ತಿಯಿಂದ ಜರುಗಿತು.
ಕಾಳಮ್ಮ ದೇವಿಯ ಪೂಜಾ ಮಹೋತ್ಸವದ ಪ್ರಯುಕ್ತ ತುಂಗಭದ್ರಾ ನದಿ ತೀರದಿಂದ ಮುತ್ತೈದೆಯರು ಪೂರ್ಣ ಕುಂಭದೊಂದಿಗೆ ಬೃಹತ್ ಮೆರವಣಿಗೆ ಅತ್ಯಂತ ಸಂಭ್ರಮದಿಂದ ಮಂಗಳವಾರ ನಡೆಯಿತು. ಮೆರವಣಿಗೆಯಲ್ಲಿ ನಾಲ್ಕು ಜನ ಭಕ್ತಾಧಿಗಳು ರುಬ್ಬುಗುಂಡು ಅಸ್ತ್ರ (ಅಲಗು), ಮೂವರು ಭಕ್ತಾಧಿಗಳು ಆಟೋರಿಕ್ಷಾ ಅಸ್ತ್ರ(ಅಲಗು) ದೊಂದಿಗೆ ಎಳೆಯುವ ಹಾಗೂ ಒಬ್ಬ ಭಕ್ತರು ಕೊಡೆ(ಛತ್ರಿ)ಅಸ್ತ್ರ (ಅಲಗು) ಮತ್ತು ಮತ್ತೊಬ್ಬ ಭಕ್ತರು ನಿಂಬೆಹಣ್ಣಿನ ಅಸ್ತ್ರ (ಅಲಗು)ದ ಹರಕೆ ತೀರಿಸಿದರು. ಇದರ ಜೊತೆಗೆ ಕೆಲ ಭಕ್ತರು ತಮ್ಮ ಹರಕೆಯಾನುಸಾರ 7 ಅಡಿ ಉದ್ದದ ತ್ರಿಶೂಲವನ್ನು ಬಾಯಿಗೆ ಸಿಕ್ಕಿಸಿಕೊಂಡು ತಮ್ಮ ಬೆನ್ನುಗೆ ಕಬ್ಬಿಣದ ಕೊಕ್ಕೆಗಳನ್ನು ಹಾಕಿಕೊಂಡು ಸುಮಾರು ಒಂದು ಕಿಮೀ. ದೂರದ ಸುಂಕಲಮ್ಮ ದೇವಿ ದೇವಸ್ಥಾನದವರೆಗೆ ಅವುಗಳನ್ನು ಎಳೆಯುವ ಮೂಲಕ ತಮ್ಮ ಭಕ್ತಿಯ ಹರಕೆ ಅರ್ಪಿಸಿದರು. ಶಿವರಾಜ ಎಂಬ ಭಕ್ತ ಮೈಮೇಲೆ ಕೊಡೆ ಅಸ್ತ್ರದೊಂದಿಗೆ ಹರಕೆ ಹಾಗೂ ಈಶ್ವರ 80 ನಿಂಬೆಹಣ್ಣಿನ ಅಸ್ತ್ರ ಹಾಕಿಸಿಕೊಂಡು ಭಕ್ತಿಯ ಹರಕೆ ವಿಶೇಷವಾಗಿತ್ತು. ಹಾಲಿ ಮತ್ತು ಮಾಜಿ ಶಾಸಕರು ಉತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ನಂತರ ನೆರೆದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಕಂಪ್ಲಿ ಕೋಟೆಯಲ್ಲಿ ನಡೆದ ಮೀನುಗಾರರ ಈ ಉತ್ಸವವನ್ನು ವೀಕ್ಷಿಸಲು ಕಂಪ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಸೇರಿದ್ದರು.
ಹನುಮಾನ್ ಚಾಲೀಸಾ ವಿವಾದ; ಸಂಸದೆ ನವನೀತ್ ರಾಣಾ-ಶಾಸಕ ರವಿ ರಾಣಾಗೆ ಅಂತೂ ಸಿಕ್ತು ಜಾಮೀನು, ಕೋರ್ಟ್ನಿಂದ ಎಚ್ಚರಿಕೆ
Published On - 2:32 pm, Wed, 4 May 22