‘ನನ್ನ ಕನ್ಯತ್ವ ಮಾರಾಟ ಮಾಡಿ ಸೋನಾಕ್ಷಿ ಸ್ಟಾರ್ ಆಗಿದ್ದಾರೆ’; ಶತ್ರುಘ್ನ ಸಿನ್ಹಾ ಕುಟುಂಬದ ಮೇಲೆ ಮಾಜಿ ಬಿಗ್​ಬಾಸ್ ಸ್ಪರ್ಧಿಯ ಗಂಭೀರ ಆರೋಪ

Pooja Mishra | Shatrughan Simha | Sonakshi Sinha: ಹಿರಿಯ ನಟ, ಹಾಲಿ ಸಂಸದ ಶತ್ರುಘ್ನ ಸಿನ್ಹಾ ಹಾಗೂ ಅವರ ಪತ್ನಿ ಮೇಲೆ ಗಂಭೀರ ಆರೋಪ ಎದುರಾಗಿದೆ. ಬಿಗ್​ಬಾಸ್ ಖ್ಯಾತಿಯ ನಟಿ ಪೂಜಾ ಮಿಶ್ರಾ ಅವರು ಶತ್ರುಘ್ನಾ ಸಿಂಹ ಹಾಗೂ ಅವರ ಪತ್ನಿ ಪೂನಂ ಸಿನ್ಹಾ ಮೇಲೆ ‘ಲೈಂಗಿಕ ಹಗರಣ’ ಹಾಗೂ ಮಾಟ ನಡೆಸಿದ ಗಂಭೀರ ಆರೋಪ ಮಾಡಿದ್ದಾರೆ.

‘ನನ್ನ ಕನ್ಯತ್ವ ಮಾರಾಟ ಮಾಡಿ ಸೋನಾಕ್ಷಿ ಸ್ಟಾರ್ ಆಗಿದ್ದಾರೆ’; ಶತ್ರುಘ್ನ ಸಿನ್ಹಾ ಕುಟುಂಬದ ಮೇಲೆ ಮಾಜಿ ಬಿಗ್​ಬಾಸ್ ಸ್ಪರ್ಧಿಯ ಗಂಭೀರ ಆರೋಪ
ಪೂಜಾ ಮಿಶ್ರಾ (ಎಡ ಚಿತ್ರ), ಶತ್ರುಘ್ನ ಸಿಂಹ ಕುಟುಂಬ (ಬಲ ಚಿತ್ರ)
Follow us
TV9 Web
| Updated By: shivaprasad.hs

Updated on: May 04, 2022 | 2:27 PM

ಹಿರಿಯ ನಟ, ಹಾಲಿ ಸಂಸದ ಶತ್ರುಘ್ನ ಸಿನ್ಹಾ (Shatrughan Sinha) ಹಾಗೂ ಅವರ ಪತ್ನಿ ಮೇಲೆ ಗಂಭೀರ ಆರೋಪ ಎದುರಾಗಿದೆ. ಬಿಗ್​ಬಾಸ್ ಖ್ಯಾತಿಯ ನಟಿ ಪೂಜಾ ಮಿಶ್ರಾ (Pooja Mishra) ಅವರು ಶತ್ರುಘ್ನಾ ಸಿಂಹ ಹಾಗೂ ಅವರ ಪತ್ನಿ ಪೂನಂ ಸಿನ್ಹಾ (Poonam Sinha) ಮೇಲೆ ‘ಲೈಂಗಿಕ ಹಗರಣ’ ಹಾಗೂ ಮಾಟ ನಡೆಸಿದ ಗಂಭೀರ ಆರೋಪ ಮಾಡಿದ್ದಾರೆ. ನವಭಾರತ್ ಟೈಮ್ಸ್ ಜತೆ ಮಾತನಾಡಿದ ಪೂಜಾ ಮಿಶ್ರಾ, ‘‘ಶತ್ರುಘ್ನಾ ಸಿನ್ಹಾ ನನ್ನನ್ನು ಲೈಂಗಿಕ ಹಗರಣ ದಂಧೆಗೆ ತಳ್ಳಿದ್ದರು ಹಾಗೂ ನನ್ನ ಕನ್ಯತ್ವವನ್ನು ಮಾರಾಟ ಮಾಡಿ ಅವರ ಪುತ್ರಿ ಸೋನಾಕ್ಷಿ ಸಿನ್ಹಾರನ್ನು ಸ್ಟಾರ್ ಮಾಡಿದರು’’ ಎಂದು ಆರೋಪಿಸಿದ್ದಾರೆ. ಇದಕ್ಕೆ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ಸಹಕಾರವೂ ಇತ್ತೆಂದು ಪೂಜಾ ಹೇಳಿದ್ದಾರೆ. ಪೂಜಾ ಹೇಳಿಕೆಯಂತೆ ಅವರ ತಂದೆ ಹಾಗೂ ಶತ್ರುಘ್ನ ಸಿನ್ಹಾ ಒಂದು ಕಾಲದಲ್ಲಿ ಸ್ನೇಹಿತರಾಗಿದ್ದರಂತೆ. ಆಗ ಪೂನಂ ಸಿನ್ಹಾ ತಮ್ಮ ತಂದೆಗೆ ‘ವೇಶ್ಯೆಯರು ಮಾತ್ರ ಬಾಲಿವುಡ್​ನಲ್ಲಿ ಕೆಲಸ ಮಾಡುತ್ತಾರೆ’ ಎಂದು ಬ್ರೈನ್​ ವಾಶ್ ಮಾಡಿದ್ದರು. ಹೀಗಾಗಿ ಚಿತ್ರರಂಗಕ್ಕೆ ಬರುವ ಅವಕಾಶ ತಪ್ಪಿಹೋಯಿತು ಎಂದಿದ್ದಾರೆ.

2005ರಲ್ಲಿ ನಿವೃತ್ತರಾದ ಪೂಜಾ ಮಿಶ್ರಾ ತಂದೆ ನಂತರ ಪುಣೆಗೆ ತೆರಳಿದರಂತೆ. ಅಲ್ಲಿಂದ ಸೋನಾಕ್ಷಿ ಸಿನ್ಹಾ ಅವರ ಪೋಷಕರು ಮುಂಬೈನಲ್ಲಿ ತಮಗೆ ಕಿರುಕುಳ ನೀಡಲು ಆರಂಭಿಸಿದರು ಎಂದಿದ್ದಾರೆ. ಇದಲ್ಲದೇ ತಮ್ಮ 35 ಚಿತ್ರಗಳ ಆಫರ್​ಗಳನ್ನು ಕದ್ದರು ಎಂದು ಆರೋಪಿಸಿರುವ ಪೂಜಾ, ‘‘ನಾನು ಅವರಿಗಿಂತ ದೊಡ್ಡ ಸ್ಟಾರ್ ಆಗುತ್ತೇನೆ ಎಂದು ಶತ್ರುಘ್ನ ಸಿನ್ಹಾ ಭಯಗೊಂಡಿದ್ದರು’’ ಎಂದಿದ್ದಾರೆ.

‘‘ಸಿನ್ಹಾ ಕುಟುಂಬವು ದುರಾಸೆ ಹಾಗೂ ರಾಕ್ಷಸೀ ನಡವಳಿಕೆ ಹೊಂದಿದ್ದಾರೆ. ನನ್ನ ಪ್ರಾಯೋಜಕರನ್ನು ನಮ್ಮ ಮನೆಗೆ ನುಗ್ಗಿ ತಮ್ಮೆಡೆಗೆ ಸೆಳೆದುಕೊಳ್ಳುತ್ತಿದ್ದರು. ಒಮ್ಮೆ ಶತ್ರುಘ್ನ ಸಿನ್ಹಾ ಹುಟ್ಟುಹಬ್ಬಕ್ಕೆ ನಾನು ಕ್ಯಾಂಡಲ್ ತೆಗೆದುಕೊಂದು ಹೋಗಿದ್ದಾಗ ಪೂನಂ ಸಿನ್ಹಾ ಏನನ್ನೋ ತಿನ್ನಿಸಿ ನನ್ನ ಮೇಲೆ ಮಾಟ ಮಾಡಿಸಿದರು. 2007ರಿಂದ 2014ರವರೆಗೆ ಲೋಖಂಡವಾಲಾದಲ್ಲಿ ನಾನು ವಾಸವಿದ್ದೆ. ಆಗ ನನ್ನ ಮನೆಯ ಮೇಲೆಯೇ ಸಿನ್ಹಾ ಕುಟುಂಬ ವಾಸವಿತ್ತು. ನಾನು ಸಿಂಗಾಪುರದಿಂದ ಶಾಪಿಂಗ್ ಮುಗಿಸಿ ಬರುವಾಗ ಇವರು ಮನೆಯಿಂದ ವಸ್ತುಗಳನ್ನು ಕದಿಯುತ್ತಿದ್ದರು’’ ಎಂದಿದ್ದಾರೆ ಪೂಜಾ ಮಿಶ್ರಾ.

ಶತ್ರುಘ್ನ ಸಿನ್ಹಾ ಕುಟುಂಬದ ಮೇಲೆ ಮತ್ತೊಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ ಪೂಜಾ ಮಿಶ್ರಾ. ‘‘ಶತ್ರುಘ್ನ ಸಿನ್ಹಾ ನನ್ನ ಕನ್ಯತ್ವ ಮಾರಿ ಮಗಳು ಸೋನಾಕ್ಷಿ ಸಿನ್ಹಾರನ್ನು ಸ್ಟಾರ್ ಮಾಡಿದರು. ಶತ್ರುಘ್ನಾ ಸಿನ್ಹಾರಿಂದಾಗಿಯೇ ನಾನು ಮದುವೆಯಾಗಲಿಲ್ಲ. ಅನೇಕ ಬಾರಿ ಮಾದಕ ದ್ರವ್ಯವನ್ನು ತಿನ್ನಿಸಿ ಅವರು ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ನನ್ನ ಹಾಳಾದ ವೃತ್ತಿ ಜೀವನಕ್ಕೆ ಯಾರನ್ನಾದರೂ ದೂಷಿಸುವುದಾದರೆ ಅದು ಶತ್ರುಘ್ನಾ ಸಿನ್ಹಾರನ್ನು ಮಾತ್ರ. 17 ವರ್ಷ ಈ ಎಲ್ಲದರಿಂದ ಕಷ್ಟಪಟ್ಟಿದ್ದೇನೆ’’ ಎಂದಿದ್ದಾರೆ ಪೂಜಾ ಮಿಶ್ರಾ.

ಈ ಹಿಂದೆ ಪೂಜಾ ಮಿಶ್ರಾ ಸಲ್ಮಾನ್ ಖಾನ್ ಮತ್ತು ಅವರ ಸಹೋದರರಾದ ಸೊಹೈಲ್ ಖಾನ್ ಹಾಗೂ ಅರ್ಬಾಜ್ ಖಾನ್ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದರು.

ಪೂಜಾ ಮಿಶ್ರಾ ಯಾರು?

ಪೂಜಾ ಮಿಶ್ರಾ ಟಿವಿ ನಿರೂಪಕಿ, ನಟಿ ಹಾಗೂ ರೂಪದರ್ಶಿಯಾಗಿದ್ದಾರೆ. ‘ಬಿಗ್ ಬಾಸ್ 5’ರ ಮೂಲಕ ಅವರು ಖ್ಯಾತಿಗಳಿಸಿದರು. ‘ಅಮ್ಮ’ (2016, ‘ಡ್ರೀಮ್ಸ್: ದಿ ಮೂವಿ’ (2013) ಚಿತ್ರಗಳಲ್ಲಿ ಪೂಜಾ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ: ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ

ಎಲ್ಲರ ಎದುರು ಸಲ್ಮಾನ್​ ಖಾನ್​ಗೆ ಕಿಸ್​ ಮಾಡಿದ ಸಿದ್ದಾರ್ಥ್​ ಶುಕ್ಲಾ ಪ್ರೇಯಸಿ ಶೆಹನಾಜ್ ಗಿಲ್​; ವಿಡಿಯೋ ವೈರಲ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ