ರಾಕಿ ಭಾಯ್ಗೆ ಈದ್ ಗಿಫ್ಟ್; ಹಬ್ಬದ ದಿನವೇ ಹಿಂದಿ ಬಾಕ್ಸ್ ಆಫೀಸ್ನಲ್ಲಿ 9.57 ಕೋಟಿ ರೂ. ಬಾಚಿದ ‘ಕೆಜಿಎಫ್ 2’
KGF Chapter 2 Box Office Collection: ‘ಕೆಜಿಎಫ್: ಚಾಪ್ಟರ್ 2’ ಪಾಲಿಗೆ ಈದ್ ಹಬ್ಬ ಗ್ರ್ಯಾಂಡ್ ಆಗಿದೆ. 20ನೇ ದಿನವೂ ಪ್ರೇಕ್ಷಕರು ಮುಗಿಬಿದ್ದು ಈ ಸಿನಿಮಾ ನೋಡಿದ್ದಾರೆ.
‘ರಾಕಿಂಗ್ ಸ್ಟಾರ್’ ಯಶ್ (Yash) ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಹಿಂದಿ ಬಾಕ್ಸ್ ಆಫೀಸ್ನಲ್ಲಿ ಬರೆದ ದಾಖಲೆಗಳು ಒಂದೆರಡಲ್ಲ. ರಿಲೀಸ್ ಆಗಿ 20 ದಿನ ಕಳೆದರೂ ಈ ಚಿತ್ರದ ಹವಾ ಕಮ್ಮಿ ಆಗಿಲ್ಲ. ಮೊದಲ ದಿನವೇ ಹಿಂದಿ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲು ಹೆಣಗಾಡುತ್ತಿವೆ. ಈ ಸಂದರ್ಭದಲ್ಲಿ ‘ಕೆಜಿಎಫ್ 2’ (KGF Chapter 2) ಸಿನಿಮಾ 20ನೇ ದಿನವಾದ ಮೇ 3ಕ್ಕೆ ಬರೋಬ್ಬರಿ 9.57 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೇ 3ರಂದು ಎಲ್ಲೆಡೆ ಈದ್ ಹಬ್ಬವನ್ನು ಆಚರಿಸಲಾಗಿದೆ. ಈ ಪ್ರಯುಕ್ತ ರಜೆ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿದ್ದಾರೆ. ಹಿಂದಿಯಲ್ಲಿ ಹೊಸ ಸಿನಿಮಾಗಳು ರಿಲೀಸ್ ಆಗಿದ್ದರೂ ಕೂಡ ಪ್ರೇಕ್ಷಕರ ಮೊದಲ ಆಯ್ಕೆ ‘ಕೆಜಿಎಫ್: ಚಾಪ್ಟರ್ 2’ ಆಗಿದೆ. ಹಾಗಾಗಿ ಈದ್ (Eid 2022) ಹಬ್ಬದ ದಿನ ಈ ಸಿನಿಮಾಗೆ ಈ ಪರಿ ಕಲೆಕ್ಷನ್ ಆಗಿದೆ. ಯಾವುದೇ ಸಿನಿಮಾ ತೆರೆಕಂಡು 20ನೇ ದಿನಕ್ಕೆ 9.57 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದು ಎಂದರೆ ತಮಾಷೆಯ ವಿಷಯವೇ ಅಲ್ಲ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಗೆಲುವು ಸಿಕ್ಕಿದೆ. ಯಶ್ ಅವರು ತಮ್ಮ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ದೇಶಾದ್ಯಂತ ಖ್ಯಾತಿ ಹೆಚ್ಚಿದೆ. ನಟಿ ಶ್ರೀನಿಧಿ ಶೆಟ್ಟಿ ಕೂಡ ಮಿಂಚುತ್ತಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಭರ್ಜರಿ ಲಾಭ ಮಾಡಿಕೊಂಡಿದೆ. ಒಟ್ಟಿನಲ್ಲಿ ಕನ್ನಡದ ಈ ಸಿನಿಮಾ ದೇಶಾದ್ಯಂತ ಬ್ಲಾಕ್ ಬಸ್ಟರ್ ಹಿಟ್ ಆಗಿದೆ.
‘ಕೆಜಿಎಫ್ 2’ ಸಿನಿಮಾದಲ್ಲಿ ರಾಕಿ ಭಾಯ್ ಪಾತ್ರಕ್ಕೆ ಚಿನ್ನದ ಮೇಲೆ ಅತಿಯಾದ ವ್ಯಾಮೋಹ ಇರುತ್ತದೆ. ಇನ್ನೂ ಬೇಕು ಇನ್ನೂ ಎಂಬ ಸ್ವಭಾವ ಆತನದ್ದಾಗಿರುತ್ತದೆ. ಬಾಕ್ಸ್ ಆಫೀಸ್ ವಿಚಾರದಲ್ಲಿ ಅದು ನಿಜವಾಗುತ್ತದೆ. ಹಿಂದಿ ಮಾರುಕಟ್ಟೆಯಲ್ಲಿ 382 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರೂ ಕೂಡ ಇನ್ನೂ ಬೇಕು ಇನ್ನೂ ಬೇಕು ಎಂದು ಅಬ್ಬರಿಸುತ್ತಿದ್ದಾನೆ ರಾಕಿ ಭೌಯ್. ಶೀಘ್ರದಲ್ಲೇ ‘ದಂಗಲ್’ ಕಲೆಕ್ಷನ್ (387.38 ಕೋಟಿ ರೂ.) ಅನ್ನು ‘ಕೆಜಿಎಫ್ 2’ ಚಿತ್ರ ಬೀಟ್ ಮಾಡಲಿದೆ. ಇನ್ನೇನಿದ್ದರೂ 400 ಕೋಟಿ ಕ್ಲಬ್ ಸೇರುವುದು ಮಾತ್ರ ಬಾಕಿ.
ವಿಶ್ವಾದ್ಯಂತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಸಾವಿರ ಕೋಟಿ ರೂಪಾಯಿ ಗಡಿ ದಾಟಿದೆ. ತಮಿಳು ವರ್ಷನ್ ಕೂಡ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ ಈವರೆಗೆ ಈ ಸಿನಿಮಾ ಗಳಿಸಿದ ಮೊತ್ತದ ಬಗ್ಗೆ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
#KGF2 is the biggest beneficiary on #Eid holiday… Biz, expectedly, jumps again… Should cross #Dangal today [third Wed]… Countdown begins for ₹ 400 cr… [Week 3] Fri 4.25 cr, Sat 7.25 cr, Sun 9.27 cr, Mon 3.75 cr, Tue 9.57 cr. Total: ₹ 382.90 cr. #India biz. #Hindi pic.twitter.com/TYgd5a25Lb
— taran adarsh (@taran_adarsh) May 4, 2022
ಈ ಸಿನಿಮಾವನ್ನು ಉತ್ತರ ಭಾರತದ ಪ್ರೇಕ್ಷಕರು ಹೆಚ್ಚು ಇಷ್ಟಪಟ್ಟಿದ್ದಾರೆ. ಸಂಜಯ್ ದತ್, ರವೀನಾ ಟಂಡನ್ ಅವರು ಪವರ್ಫುಲ್ ಪಾತ್ರಗಳನ್ನು ಮಾಡಿರುವುದು ಚಿತ್ರಕ್ಕೆ ಪ್ಲಸ್ ಆಗಿದೆ. ಇತ್ತೀಚೆಗೆ ರಿಲೀಸ್ ಆಗಿರುವ ಹಿಂದಿಯ ‘ರನ್ವೇ 34’ ಹಾಗೂ ‘ಹೀರೋಪಂತಿ 2’ ಸಿನಿಮಾಗಳು ಈದ್ ಹಬ್ಬದ ದಿನ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲು ಸೋತಿವೆ. ಈ ಚಿತ್ರಗಳ ಕಥೆ ಬಹುತೇಕ ಮುಗಿಯಿತು ಎಂದೇ ಹೇಳಲಾಗುತ್ತಿದೆ.
ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿಕೆ ನೀಡುವ ಮೂಲಕ ಅಜಯ್ ದೇವಗನ್ ಅವರು ದಕ್ಷಿಣ ಭಾರತದ ಅನೇಕರ ವಿರೋಧ ಕಟ್ಟಿಕೊಂಡಿದ್ದರು. ಅದರ ಬೆನ್ನಲ್ಲೇ ಅವರ ‘ರನ್ವೇ 34’ ಚಿತ್ರ ರಿಲೀಸ್ ಆಯಿತು. ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂಬುದನ್ನು ತಿಳಿಯುವ ಕೌತುಕ ಎಲ್ಲರಲ್ಲೂ ಇತ್ತು. 5 ದಿನಕ್ಕೆ 19 ಕೋಟಿ ಕಲೆಕ್ಷನ್ ಮಾಡುವಲ್ಲಿ ಈ ಸಿನಿಮಾ ಸುಸ್ತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ:
ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿ ಮಾಡಿದ ಯಶ್-ರಾಧಿಕಾ ಪಂಡಿತ್; ಮುಂದಿನ ಸಿನಿಮಾ ಬಗ್ಗೆ ಕುತೂಹಲ
ಅಕ್ಷಯ್ ಬಳಿಕ ಯಶ್ಗೆ ಪಾನ್ ಮಸಾಲ ಆಫರ್; ಎಷ್ಟು ಕೋಟಿ ಕೊಟ್ರೂ ಈ ಕೆಲಸ ಮಾಡಲ್ಲ ಎಂದ ನಟ