AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​: ಚಾಪ್ಟರ್​ 2’ ಬಗ್ಗೆ ಉಪೇಂದ್ರ ಮೆಚ್ಚುಗೆ; ಇನ್ನುಳಿದವರ ಮೌನಕ್ಕೆ ಯಶ್​ ಫ್ಯಾನ್ಸ್​ ತಕರಾರು​

KGF Chapter 2 | Upendra: ‘ಕೆಜಿಎಫ್​ 2’ ನೋಡಿರುವ ಉಪೇಂದ್ರ ಅವರು ಮನಸಾರೆ ಹೊಗಳಿದ್ದಾರೆ. ಚಿತ್ರತಂಡದಲ್ಲಿನ ಅನೇಕರ ಕೆಲಸವನ್ನು ಗಮನಿಸಿ ಆ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಬಗ್ಗೆ ಉಪೇಂದ್ರ ಮೆಚ್ಚುಗೆ; ಇನ್ನುಳಿದವರ ಮೌನಕ್ಕೆ ಯಶ್​ ಫ್ಯಾನ್ಸ್​ ತಕರಾರು​
ಯಶ್​, ಉಪೇಂದ್ರ​​
TV9 Web
| Edited By: |

Updated on: Apr 21, 2022 | 2:11 PM

Share

ಸಿನಿಮಾ ಲೋಕದಲ್ಲಿ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಮಾಡಿರುವ ಸಾಧನೆ ಸಣ್ಣದೇನಲ್ಲ. ಕನ್ನಡದ ಈ ಚಿತ್ರಕ್ಕೆ ದೇಶಾದ್ಯಂತ ಇರುವ ಪ್ರೇಕ್ಷಕರು ಫಿದಾ ಆಗಿದ್ದಾರೆ. 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿ ಈ ಸಿನಿಮಾ ಮುನ್ನುಗ್ಗುತ್ತಿದೆ. ಯಶ್​ (Yash) ಅಭಿನಯಕ್ಕೆ, ಪ್ರಶಾಂತ್​ ನೀಲ್​ ನಿರ್ದೇಶನಕ್ಕೆ ಪರಭಾಷೆ ಮಂದಿ ಕೂಡ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇಷ್ಟು ದೊಡ್ಡ ಸಿನಿಮಾವನ್ನು ನಿರ್ಮಾಣ ಮಾಡಿದ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೂ ಭೇಷ್​ ಎನ್ನುತ್ತಿದ್ದಾರೆ. ‘ರಿಯಲ್​ ಸ್ಟಾರ್​’ ಉಪೇಂದ್ರ (Upendra) ಕೂಡ ಈ ಸಿನಿಮಾಗೆ ಮನಸೋತಿದ್ದಾರೆ. ಇಡೀ ತಂಡವನ್ನು ಅವರೀಗ ಹೊಗಳಿದ್ದಾರೆ. ಇದು ‘ಕೆಜಿಎಫ್​ 2’ ಸಿನಿಮಾ ಟೀಮ್​ ಬಲವನ್ನು ಹೆಚ್ಚಿಸಿದೆ. ದಶಕಗಳ ಹಿಂದೆಯೇ ಡಿಫರೆಂಟ್​ ಸಿನಿಮಾವನ್ನು ನಿರ್ದೇಶಿಸಿ ಸೈ ಎನಿಸಿಕೊಂಡವರು ಉಪೇಂದ್ರ. ಅವರಿಗೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ತುಂಬ ಇಷ್ಟ ಆಗಿದೆ. ತಮ್ಮ ಅನಿಸಿಕೆಯನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಒಟ್ಟಾರೆ ಉಪೇಂದ್ರ ಹೇಳಿದ್ದೇನು? ಅದಕ್ಕೆ ಯಶ್​ ಫ್ಯಾನ್ಸ್​ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ? ಈ ಕುರಿತು ಪೂರ್ತಿ ವಿವರ ಇಲ್ಲಿದೆ..

‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆ ಆಗುವುದಕ್ಕಿಂತ ಒಂದು ದಿನ ಮುನ್ನವೇ ಉಪೇಂದ್ರ ಈ ತಂಡಕ್ಕೆ ಶುಭ ಕೋರಿದ್ದರು. ‘ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರ ಕೆಜಿಎಫ್​ ಇಡೀ ವಿಶ್ವವೇ ತಿರುಗಿ ನೋಡುವಂತಹ ಯಶಸ್ಸು ಗಳಿಸಲಿ’ ಎಂದು ಅವರು ಹಾರೈಸಿದ್ದರು. ಈಗ ಈ ಸಿನಿಮಾ ನೋಡಿರುವ ಅವರು ಮನಸಾರೆ ಹೊಗಳಿದ್ದಾರೆ. ಚಿತ್ರತಂಡದಲ್ಲಿನ ಅನೇಕರ ಕೆಲಸವನ್ನು ಗಮನಿಸಿ ಆ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

‘ಕೆಜಿಎಫ್ 2 ಚಿತ್ರವನ್ನು ನೋಡಿದೆ. ಆಹಾ ಎಂಥಾ ಮಾಸ್ಟರ್​ ಪೀಸ್​ ಸಿನಿಮಾ. ಪ್ರಶಾಂತ್​ ನೀಲ್​ ನೀವು ನೆಕ್ಸ್ಟ್​ ಲೆವೆಲ್​ ನಿರ್ದೇಶಕ. ಅದ್ಭುತ ನಿರ್ದೇಶನ, ಅಸಾಧಾರಣ ಸ್ಕ್ರಿಪ್ಟ್​, ಡೈಲಾಗ್​, ಮ್ಯೂಸಿಕ್​, ಆರ್ಟ್​, ಹೊಂಬಾಳೆ ಫಿಲ್ಮ್ಸ್​ ರಾಜಿ ಇಲ್ಲದ ಪ್ರೊಡಕ್ಷನ್​’ ಎಂದು ಪೋಸ್ಟ್​ ಮಾಡಿರುವ ಉಪೇಂದ್ರ ಅವರು ಯಶ್​ ನಟನೆಗೆ ಶಹಭಾಷ್​ ಎಂದಿದ್ದಾರೆ.

ಭುವನ್​ ಗೌಡ ಅವರ ಛಾಯಾಗ್ರಹಣ, ಸಂಜಯ್​ ದತ್​ ಮತ್ತು ರವೀನಾ ಟಂಡನ್​ ಅವರ ಅಭಿನಯವನ್ನು ಉಪೇಂದ್ರ ಹಾಡಿ ಹೊಗಳಿದ್ದಾರೆ. ಅವರು ಮಾಡಿರುವ ಈ ಟ್ವೀಟ್​ಗೆ ಅನೇಕರು ನಾನಾ ಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ‘ಕೆಜಿಎಫ್​ 2’ ಬಗ್ಗೆ ಕನ್ನಡದ ಇನ್ನಿತರೆ ನಟರು ಮೌನ ವಹಿಸಿದ್ದಾರೆ ಎಂದು ಕೆಲವು ನೆಟ್ಟಿಗರು ತಕರಾರು ತೆಗೆದಿದ್ದಾರೆ. ಬೇರೆ ನಟರು ಇನ್ನೂ ‘ಕೆಜಿಎಫ್​ 2’ ನೋಡಿಲ್ವಾ? ಅವರೆಲ್ಲ ಯಾಕೆ ಮಾತನಾಡುತ್ತಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ. ‘ಬೇರೆ ನಟರು ಮಾತನಾಡಬೇಕು ಎಂದೇನೂ ಇಲ್ಲ. ಅವರ ಸಿನಿಮಾಗಳು ಬಂದಾಗ ಯಶ್​ ಕೂಡ ಮಾತನಾಡಿರಲಿಲ್ಲ’ ಎಂದು ಕೆಲವರು ವಾದ ಮಂಡಿಸಿದ್ದಾರೆ.

ವಿವಾದ ಏನೇ ಇರಲಿ, ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ಬಿಡುಗಡೆಯಾಗಿ 7 ದಿನ ಕಳೆದರೂ ಈ ಚಿತ್ರದ ಹವಾ ಕಡಿಮೆ ಆಗಿಲ್ಲ. ಇನ್ನೂ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಉತ್ತರ ಭಾರತದ ಪ್ರೇಕ್ಷಕರು ಕೂಡ ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ.

ಇದನ್ನೂ ಓದಿ:

ಮದುವೆ ಆಹ್ವಾನ ಪತ್ರಿಕೆಯಲ್ಲೂ ‘ಕೆಜಿಎಫ್​: ಚಾಪ್ಟರ್​ 2’ ಡೈಲಾಗ್​; ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್

‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ