ಪವರ್​ ಫುಲ್ ಪೀಪಲ್​ ಕಮ್​ ಫ್ರಂ ಪವರ್​ ಫುಲ್​ ಪ್ಲೇಸಸ್​​! ಇದು ಕೆಜಿಎಫ್​ ಸಿನಿಮಾ ಎಫೆಕ್ಟ್​ ಸೈನೈಡ್​ ಗುಡ್ಡಗಳ ಮೇಲೆ ಪ್ರವಾಸಿಗರ ದಂಡು!

KGF Chapter 2: ಒಟ್ನಲ್ಲಿ ಕೆಜಿಎಫ್ ಹೆಸರು ಕೇಳಿದ್ರೆ ಈಡೀ ವಿಶ್ವವೇ ರೋಮಾಂಚನಗೊಳ್ಳುತ್ತೆ. ಇಂತಹ ಸ್ಥಳದ ಇತಿಹಾಸದೊಂದಿಗೆ ಸಿನಿಮಾ ಆದ್ರೆ ಯಾರು ತಾನೇ ಫಿದಾ ಆಗಲ್ಲ ಹೇಳಿ. ಅದೂ ಕೆಜಿಎಫ್ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಸಿನಿಮಾ ಆಗಿದ್ದು, ಸಿನಿಮಾದಲ್ಲೇ ಹೇಳಿದಂತೆ ಪವರ್​ ಫುಲ್ ಪೀಪಲ್​ ಕಮ್​ ಫ್ರಂ ಪವರ್​ ಫುಲ್​ ಪ್ಲೇಸಸ್​​ ಎನ್ನುವಂತೆ ಈ ಸ್ಥಳಕ್ಕೆ ಅಷ್ಟೊಂದು ಪವರ್​ ಇದೆ

ಪವರ್​ ಫುಲ್ ಪೀಪಲ್​ ಕಮ್​ ಫ್ರಂ ಪವರ್​ ಫುಲ್​ ಪ್ಲೇಸಸ್​​! ಇದು ಕೆಜಿಎಫ್​ ಸಿನಿಮಾ ಎಫೆಕ್ಟ್​ ಸೈನೈಡ್​ ಗುಡ್ಡಗಳ ಮೇಲೆ ಪ್ರವಾಸಿಗರ ದಂಡು!
ಪವರ್​ ಫುಲ್ ಪೀಪಲ್​ ಕಮ್​ ಫ್ರಂ ಪವರ್​ ಫುಲ್​ ಪ್ಲೇಸಸ್​​! ಇದು ಕೆಜಿಎಫ್​ ಸಿನಿಮಾ ಎಫೆಕ್ಟ್​ ಸೈನೈಡ್​ ಗುಡ್ಡಗಳ ಮೇಲೆ ಪ್ರವಾಸಿಗರ ದಂಡು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 20, 2022 | 8:48 PM

ಭಾರತ ಚಿತ್ರರಂಗದಲ್ಲೆ ಸಖತ್ ಸದ್ದು ಮಾಡುತ್ತಿರುವ ಕನ್ನಡದ ಕೆಜಿಎಫ್ ಚಾಪ್ಟರ್​ 2 ಚಿತ್ರದ ಎಫೆಕ್ಟ್, ಕೆಜಿಎಫ್ (KGF) ಸೈನೈಡ್ ಗುಡ್ಡಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ! ರಾಕಿಂಗ್ ಸ್ಟಾರ್ ಯಶ್​ ಅಭಿನಯದ (Yash) ಕೆಜಿಎಫ್​-2 ಸಿನಿಮಾ (KGF Chapter 2) ಬಿಡುಗಡೆಯಾದ ನಂತರ ಈಗ ಕೆಜಿಎಫ್ ಸಿನಿಮಾ ಚಿತ್ರೀಕರಣ ಮಾಡಿದ ಸ್ಥಳವನ್ನು ನೋಡಲು ದೂರದ ಊರುಗಳಿಂದ ಜನರು ಬರುತ್ತಿದ್ದಾರೆ.

ಕೆಜಿಎಫ್​-2 ಸಿನಿಮಾ ಎಫೆಕ್ಟ್​ ಸೈನೈಡ್​ ಗುಡ್ಡಗಳತ್ತ ಪ್ರವಾಸಿಗರ ದಂಡು..! ಕೆಜಿಎಫ್​ ಅಂದ್ರೆನೆ ಅದಕ್ಕೊಂದು ಪ್ರತ್ಯೇಕ ಹಾಗೂ ವಿಶ್ವ ಮಟ್ಟದ ಮನ್ನಣೆ ಇದೆ ಕಾರಣ ಅದು ನೂರಾರು ವರ್ಷಗಳ ಕಾಲ ಇಡೀ ವಿಶ್ವಕ್ಕೆ ಚಿನ್ನವನ್ನು ಕೊಟ್ಟಂತ ಹೆಗ್ಗಳಿಗೆ ಈ ಕೆಜಿಎಫ್​ ನೆಲಕ್ಕಿದೆ. ಆದರೆ ಈಗ ಕೆಜಿಎಫ್ ಅನ್ನೋ ಹೆಸರಿನ ಸಿನಿಮಾ ಇಡೀ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದು ದಶಕಗಳ ನಂತರ ಈಗ ಮತ್ತೆ ಕೆಜಿಎಫ್​ ಪ್ರವಾಸಿಗರನ್ನು ಅಕರ್ಷಿಸುತ್ತಿದೆ… ಇದು ಕೆಜಿಎಫ್​ ಅನ್ನೋ ಸಿನಿಮಾದ ಎಫೆಕ್ಟ್​ನಿಂದಾಗಿ (Prashanth Neel).

ಹೌದು ಸಿನಿಮಾದ ಚಿತ್ರೀಕರಣ ಬಹುತೇಕ ಕೆಜಿಎಫ್​ ನ ಇದೆ ಸೈನೈಡ್ ಗುಡ್ಡಗಳ ಮೇಲೆ ನಡೆದಿತ್ತು. ಇಲ್ಲೆ ನಿರ್ದೇಶಕ ಪ್ರಶಾಂತ್ ನೀಲ್ ನರಾಚಿ ಕೋಟೆಯನ್ನು ಸೃಷ್ಟಿಸಿ ಸಿನಿಮಾ ಚಿತ್ರೀಕರಣ ಮಾಡಿದ್ದರು. ಹಾಗಾಗಿ ಸಧ್ಯ ಈ ಸ್ಥಳದಲ್ಲಿ ನೂರಾರು ಪ್ರವಾಸಿಗರು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಜನರು ಆ ಸ್ಥಳವನ್ನು ನೋಡಲು ಬರುತ್ತಿದ್ದಾರೆ. ಯಾಕಂದ್ರೆ ಕೆಜಿಎಫ್ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಇಡೀ ದೇಶದ ಸಿನಿ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಸಿನಿಮಾ ಆಗಿದ್ದು, ಪ್ರತಿಯೊಬ್ಬರೂ ಸಿನಿಮಾವನ್ನ ಮೆಚ್ಚಿಕೊಳ್ಳುತ್ತಿದ್ದಾರೆ. ಅದರಿಂದ ಸೈನೈಡ್ ಗುಡ್ಡಗಳನ್ನ ನೋಡಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಕೆಜಿಎಫ್​ ಗೂ ಮೊದಲು ನೂರಾರು ಸಿನಿಮಾ ಚಿತ್ರೀಕರಣ ಮಾಡಲಾಗಿದೆ..! ಕೆಜಿಎಫ್ ಸಿನಿಮಾ ಅಂದ್ರೆ ನರಾಚಿ ಕೋಟೆಯ ಸೆಟ್ ನ್ನು ಇದೇ ಸೈನೈಡ್​ ಗುಡ್ಡಗಳ ಮೇಲೆ ಹಾಕಲಾಗಿತ್ತು. ಕೆಜಿಎಫ್ ಸೈನೈಡ್ ಗುಡ್ಡಗಳು ಹಲವು ವೈಶಿಷ್ಟ್ಯಗಳಿಂದ ಕೂಡಿದ್ದು, ಸಿನಿ ಪ್ರಿಯರು ಸೇರಿದಂತೆ ಸಿನಿ ತಂಡವನ್ನ ಆಕರ್ಷಿಸುವಂತಿವೆ. ಹಾಗಾಗಿ ಕಳೆದ 20 ವರ್ಷಗಳಿಂದ ದಕ್ಷಿಣ ಭಾರತದ ಬಹುತೇಕ ಯಶಸ್ವಿ ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ. ಅದರಲ್ಲೂ ಕನ್ನಡದ ಓಂ, ಗಂಡುಗಲಿ, ಕರಿಯ, ಶಿವ, ಚಾಮುಂಡಿ, ತೆಲುಗು, ತಮಿಳು, ಹಿಂದಿ, ಸೇರಿದಂತೆ ನಾನಾ ಭಾಷೆಯ ಸಿನಿಮಾಗಳ ಚಿತ್ರೀಕರಣ ಈ ಸೈನೈಡ್ ಗುಡ್ಡಗಳ ಮೇಲೆ ನಡೆದಿದೆ.

People throng Yash and Prashanth Neel starrer KGF Chapter 2 shooting spot in KGF town

ಕೆಜಿಎಫ್​ ಗೂ ಮೊದಲು ನೂರಾರು ಸಿನಿಮಾ ಚಿತ್ರೀಕರಣ ಮಾಡಲಾಗಿದೆ

ಕೆಜಿಎಫ್​-2 ತೆರೆಕಂಡ ಮೇಲೆ ಆಕರ್ಶಣೆಯ ಕೇಂದ್ರವಾಗುತ್ತಿದೆ ಸೈನೈಡ್​ ಗುಡ್ಡಗಳು..! ಕಳೆದ ವಾರ ತೆರೆ ಕಂಡ ಕೆಜಿಎಫ್-2 ಚಿತ್ರ ಯಶಸ್ವಿಯಾಗುತ್ತಿದ್ದಂತೆ ಕೆಜಿಎಫ್ ಅನ್ನೋ ಹೆಸರು ಹಾಗೂ ಸ್ಥಳದ ಮಹಿಮೆ ತಿಳಿಯಲು ಅಭಿಮಾನಿಗಳು ಹಾಗೂ ಪ್ರವಾಸಿಗರು ಸೈನೈಡ್ ಗುಡ್ಡಗಳತ್ತ ಬರುತ್ತಿದ್ದಾರೆ. ರಾಕಿ ಭಾಯ್ ಮತ್ತು ಅಧೀರನ ಕಾಳಗದ ಸ್ಥಳ ನೋಡಬೇಕು ಅನ್ನೋ ಕುತೂಹಲದಲ್ಲಿ ಸಾಕಷ್ಟು ಜನರು ಕೆಜಿಎಫ್ ಮಣ್ಣು ಹಾಗೂ ಧೂಳಿನಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಒಟ್ನಲ್ಲಿ ಕೆಜಿಎಫ್ ಹೆಸರು ಕೇಳಿದ್ರೆ ಈಡೀ ವಿಶ್ವವೇ ರೋಮಾಂಚನಗೊಳ್ಳುತ್ತೆ. ಇಂತಹ ಸ್ಥಳದ ಇತಿಹಾಸದೊಂದಿಗೆ ಸಿನಿಮಾ ಆದ್ರೆ ಯಾರು ತಾನೇ ಫಿದಾ ಆಗಲ್ಲ ಹೇಳಿ. ಅದೂ ಕೆಜಿಎಫ್ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಸಿನಿಮಾ ಆಗಿದ್ದು, ಸಿನಿಮಾದಲ್ಲೇ ಹೇಳಿದಂತೆ ಪವರ್​ ಫುಲ್ ಪೀಪಲ್​ ಕಮ್​ ಫ್ರಂ ಪವರ್​ ಫುಲ್​ ಪ್ಲೇಸಸ್​​ ಎನ್ನುವಂತೆ ಈ ಸ್ಥಳಕ್ಕೆ ಅಷ್ಟೊಂದು ಪವರ್​ ಇದೆ.. Powerful people come from powerful places – KGF Chapter 1 Powerful Dialogue. -ರಾಜೇಂದ್ರ ಸಿಂಹ, ಟಿವಿ9, ಕೋಲಾರ

KGF-2 : KGF2 ಶೂಟಿಂಗ್ ಸ್ಪಾಟ್ ನೋಡಲು ಮುಗಿಬಿದ್ದ ಅಭಿಮಾನಿಗಳು

Published On - 8:12 pm, Wed, 20 April 22

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ