KGF Chapter 2: ‘ಕೆಜಿಎಫ್ ಚಾಪ್ಟರ್ 2’ ಯಶಸ್ಸಿನ ಬಗ್ಗೆ ಡಾಲಿ ಧನಂಜಯ್ ಹೇಳಿದ್ದೇನು?

Kaaneyadavara Bagge Prakatane Movie | Daali Dhananjay: ಇತ್ತೀಚೆಗೆ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರತಂಡ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ಸ್ಯಾಂಡಲ್​ವುಡ್ ತಾರೆಯರಾದ ದುನಿಯಾ ವಿಜಯ್, ಡಾಲಿ ಧನಂಜಯ್ ಚಿತ್ರತಂಡಕ್ಕೆ ಸಾಥ್ ನೀಡಿ ಶುಭ ಹಾರೈಸಿದರು. ಈ ವೇಳೆ ‘ಕೆಜಿಎಫ್ ಚಾಪ್ಟರ್ 2’ ಯಶಸ್ಸಿನ ಬಗ್ಗೆ ಧನಂಜಯ್ ಮಾತನಾಡಿದರು.

TV9kannada Web Team

| Edited By: shivaprasad.hs

Apr 20, 2022 | 4:24 PM

ಇತ್ತೀಚೆಗೆ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ (Kaaneyadavara Bagge Prakatane) ಚಿತ್ರತಂಡ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ಸ್ಯಾಂಡಲ್​ವುಡ್ ತಾರೆಯರಾದ ದುನಿಯಾ ವಿಜಯ್ (Duniya Vijay), ಡಾಲಿ ಧನಂಜಯ್ (Daali Dhananjay), ಧೀರನ್ ರಾಮ್​ಕುಮಾರ್ ಚಿತ್ರತಂಡಕ್ಕೆ ಸಾಥ್ ನೀಡಿ ಶುಭ ಹಾರೈಸಿದರು. ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ದೊಡ್ಡ ಮಟ್ಟದಲ್ಲಿ ಕುತೂಹಲ ಮೂಡಿಸಿದ್ದು, ಚಿತ್ರದಲ್ಲಿ ಖ್ಯಾತ ಕಲಾವಿದರ ದಂಡೇ ಇದೆ. ರಂಗಾಯಣ ರಘು, ತಬಲಾ ನಾಣಿ, ರವಿಶಂಕರ್, ತಿಲಕ್, ಆಶಿಕಾ ರಂಗನಾಥ್ ಮೊದಲಾದವರು ಅಭಿನಯಿಸಿರುವ ಈ ಚಿತ್ರದ ಟ್ರೇಲರ್ ಈಗಾಗಲೇ ಸಿನಿಪ್ರೇಮಿಗಳ ಮನಗೆದ್ದಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಾಲಿ ಧನಂಜಯ್ ಚಿತ್ರತಂಡಕ್ಕೆ ಶುಭಹಾರೈಸಿದರು. ಈ ವೇಳೆ ಅವರಿಗೆ ಸದ್ಯ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿರುವ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು.

ನಂತರ ‘ಕೆಜಿಎಫ್ ಚಾಪ್ಟರ್ 2’ ಬಗ್ಗೆ ಮಾತನಾಡಿದ ಧನಂಜಯ್, ಚಿತ್ರವನ್ನು, ಚಿತ್ರತಂಡವನ್ನು ಹೊಗಳಿದರು. ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ಧನಂಜಯ್, ‘‘ಕೆಜಿಎಫ್ ಚಿತ್ರ ಒಂದು ಹೆಮ್ಮೆ. ಯಾರು ಏನೇ ಸಾಧನೆ ಮಾಡಿದರೂ ಅದು ನಮಗೆ ಪ್ರೇರಣೆ ನೀಡುತ್ತದೆ. ದೂರದೃಷ್ಟಿಯುಳ್ಳ ನಿರ್ಮಾಪಕರು, ನಿರ್ದೇಶಕರು ಹಾಗೂ ನಟರಿದ್ದಾಗ ಮಾತ್ರ ಅಂತಹ ಚಿತ್ರ ಮಾಡಲು ಸಾಧ್ಯ. ಒಂದು ಕನಸು ಗೆದ್ದಾಗ ಅಂತಹ ನೂರಾರು ಕನಸುಗಳಿಗೆ ದಾರಿಯಾಗುತ್ತದೆ. ಅಂತಹ ಕನಸುಗಳನ್ನು ಕಾಣೋಣ, ಅದರೆಡೆಗೆ ನಾನೂ ಕೆಲಸ ಮಾಡುತ್ತೇನೆ’’ ಎಂದಿದ್ದಾರೆ ಧನಂಜಯ್.

ಇದನ್ನೂ ಓದಿ: ಮದುವೆ ಆಹ್ವಾನ ಪತ್ರಿಕೆಯಲ್ಲೂ ‘ಕೆಜಿಎಫ್​: ಚಾಪ್ಟರ್​ 2’ ಡೈಲಾಗ್​; ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್

ಯಾವ ತಾರೆಯೊಂದಿಗೆ ಬಾಲಿವುಡ್​ ಪದಾರ್ಪಣೆ ಮಾಡಲು ಇಚ್ಛಿಸುತ್ತೀರಿ ಎಂಬ ಪ್ರಶ್ನೆಗೆ ಯಶ್ ಉತ್ತರ ಏನಿತ್ತು? ಹಳೆಯ ವಿಡಿಯೋ ಮತ್ತೆ ವೈರಲ್

Follow us on

Click on your DTH Provider to Add TV9 Kannada