KGF 2: ‘ಕೆಜಿಎಫ್ ಚಾಪ್ಟರ್ 2’ ಒಟಿಟಿ ರಿಲೀಸ್ ಬಗ್ಗೆ ಹೆಚ್ಚಿದ ಕುತೂಹಲ; ಎಲ್ಲಿ, ಯಾವಾಗ ರಿಲೀಸ್ ಆಗಲಿದೆ ಯಶ್ ನಟನೆಯ ಚಿತ್ರ?

KGF Chapter 2 OTT Release | Amazon Prime Video: ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ದಾಖಲೆ ಬರೆಯುತ್ತಿರುವ ‘ಕೆಜಿಎಫ್ ಚಾಪ್ಟರ್ 2’ ಒಟಿಟಿ ರಿಲೀಸ್ ಬಗ್ಗೆ ಇದೀಗ ಕುತೂಹಲ ಗರಿಗೆದರಿದೆ. ‘ಕೆಜಿಎಫ್ ಚಾಪ್ಟರ್ 1’ರ ಒಟಿಟಿ ಹಕ್ಕು ಪಡೆದುಕೊಂಡಿದ್ದ ಅಮೆಜಾನ್ ಪ್ರೈಮ್ ಎರಡನೇ ಭಾಗದ ಹಕ್ಕುಗಳನ್ನೂ ಪಡೆದಿದೆ ಎಂದು ವರದಿಗಳು ಹೇಳಿವೆ. ಈ ಬಗ್ಗೆ ಅಧಿಕೃತವಾಗಿ ಇನ್ನಷ್ಟೇ ಘೋಷಣೆಯಾಗಬೇಕಿದೆ.

KGF 2: ‘ಕೆಜಿಎಫ್ ಚಾಪ್ಟರ್ 2’ ಒಟಿಟಿ ರಿಲೀಸ್ ಬಗ್ಗೆ ಹೆಚ್ಚಿದ ಕುತೂಹಲ; ಎಲ್ಲಿ, ಯಾವಾಗ ರಿಲೀಸ್ ಆಗಲಿದೆ ಯಶ್ ನಟನೆಯ ಚಿತ್ರ?
‘ಕೆಜಿಎಫ್ ಚಾಪ್ಟರ್ 2’ ಚಿತ್ರದಲ್ಲಿ ಯಶ್, ರವೀನಾ ಟಂಡನ್, ಸಂಜಯ್ ದತ್
Follow us
TV9 Web
| Updated By: shivaprasad.hs

Updated on: Apr 16, 2022 | 6:22 PM

ಅಭಿಮಾನಿಗಳು ದೀರ್ಘಕಾಲದಿಂದ ಕಾದಿದ್ದ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಏಪ್ರಿಲ್ 14ರಂದು ತೆರೆಕಂಡಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಶ್ವಾದ್ಯಂತ ರಿಲೀಸ್ ಆಗಿರುವ ಚಿತ್ರವನ್ನು ದಾಖಲೆಯ ಮಟ್ಟದಲ್ಲಿ ಜನರು ವೀಕ್ಷಿಸುತ್ತಿದ್ದಾರೆ. ಈ ನಡುವೆ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಕುತೂಹಲ ಮೂಡಿದೆ. ಈ ಹಿಂದೆ ‘ಕೆಜಿಎಫ್ 2’ ಚಿತ್ರತಂಡ ಸ್ಯಾಟಲೈಟ್​​ ಹಕ್ಕುಗಳ ಒಪ್ಪಂದದ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು. ಜೀ ಸಂಸ್ಥೆ ದಕ್ಷಿಣ ಭಾರತದ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿದೆ. ಆದರೆ ಇದುವರೆಗೆ ಒಟಿಟಿ ಹಕ್ಕುಗಳ ಬಗ್ಗೆ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಮೂಲಗಳ ಪ್ರಕಾರ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಪಡೆದುಕೊಂಡಿದೆ.

ಮಾಧ್ಯಮ ವರದಿಗಳ ಪ್ರಕಾರ ಭಾರತದಲ್ಲಿ ಬಹುಜನಪ್ರಿಯವಾಗಿರುವ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ‘ಕೆಜಿಎಫ್ ಚಾಪ್ಟರ್ 2’ ರಿಲೀಸ್ ಆಗಲಿದೆ. ಈ ಹಿಂದೆ ‘ಕೆಜಿಎಫ್ ಚಾಪ್ಟರ್ 1’ ಅಮೆಜಾನ್​ನಲ್ಲೇ ತೆರೆಕಂಡಿತ್ತು. ಮೊದಲ ಭಾಗವು ಜಾಗತಿಕವಾಗಿ ತಲುಪಲು ಒಟಿಟಿಯ ಕೊಡುಗೆಯೂ ದೊಡ್ಡದಿದೆ. ಭಾರತದಲ್ಲಿ ಅಮೆಜಾನ್ ಪ್ರೈಮ್ ಪ್ರಾಬಲ್ಯ ಹೊಂದಿದ್ದು, ಅದರ ಚಂದಾದಾರರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ‘ಕೆಜಿಎಫ್ 2’ ಚಿತ್ರವನ್ನು ಅದೇ ಖರೀದಿಸಿದೆ ಎಂದು ವರದಿಗಳು ಹೇಳಿವೆ. ಆದರೆ ಬಿಡುಗಡೆಯ ದಿನಾಂಕ ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ.

ಈ ನಡುವೆ ಅಮೆಜಾನ್ ಪ್ರೈಮ್​ಗೆ ನೆಟ್ಟಿಗರು ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಸಂಸ್ಥೆ ಉತ್ತರಿಸುತ್ತಾ, ‘ನಿಮ್ಮ ಕಾತರ ನಮಗರ್ಥವಾಗುತ್ತದೆ.. ನಮ್ಮಿಂದ ಇನ್ನಷ್ಟೇ ಈ ಬಗ್ಗೆ ಅಧಿಕೃತ ಮಾಹಿತಿ ಬರಬೇಕಿದೆ. ನಿರೀಕ್ಷಿಸಿ..’ ಎಂದು ಪ್ರತ್ಯುತ್ತರ ಬರೆದಿದೆ. ಒಟ್ಟಿನಲ್ಲಿ ‘ಕೆಜಿಎಫ್ 2’ ಯಶಸ್ಸಿನ ಬೆನ್ನಲ್ಲೇ ಅದರ ಒಟಿಟಿ ರಿಲೀಸ್ ಬಗ್ಗೆಯೂ ದೊಡ್ಡ ಮಟ್ಟದ ನಿರೀಕ್ಷೆ ಮೂಡಿರುವುದು ಸುಳ್ಳಲ್ಲ.

‘ಕೆಜಿಎಫ್ ಚಾಪ್ಟರ್ 2’ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್​ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಭುವನ್ ಗೌಡ ಛಾಯಾಗ್ರಹಣ ಮಾಡಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಯಶ್​, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಅಚ್ಯುತ್ ಕುಮಾರ್ ಮೊದಲಾದ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.

‘ಕೆಜಿಎಫ್ ಚಾಪ್ಟರ್ 2’ ಬಾಕ್ಸಾಫೀಸ್​ನಲ್ಲಿ ಎರಡೇ ದಿನಕ್ಕೆ 240 ಕೋಟಿ ರೂಗಳನ್ನು ಗಳಿಸಿದೆ. ಇದು ಭಾರತದ ಅಂಕಿಅಂಶ ಮಾತ್ರವಾಗಿದ್ದು, ವಿಶ್ವದ ಕಲೆಕ್ಷನ್ ಸೇರಿದರೆ ಈ ಮೊತ್ತ 300 ಕೋಟಿ ರೂ ದಾಟಲಿದೆ ಎನ್ನುತ್ತಿದ್ದಾರೆ ಗಲ್ಲಾಪೆಟ್ಟಿಗೆ ವಿಶ್ಲೇಷಕರು. ಶನಿವಾರ ಹಾಗೂ ಭಾನುವಾರ ರಜಾದಿನಗಳಾದ್ದರಿಂದ ಚಿತ್ರದ ಗಳಿಕೆ ಮತ್ತಷ್ಟು ಏರಲಿದೆ.

ಇದನ್ನೂ ಓದಿ: ‘ಕೆಜಿಎಫ್​ 2’ ಚಿತ್ರದ ಮುಂದುವರಿದ ಭಾಗವೇ ‘ಸಲಾರ್​’? ‘ಕೆಜಿಎಫ್​ 3’ ಪ್ರಶ್ನೆಗೆ ಉತ್ತರ ಹುಡುಕಿದ ಫ್ಯಾನ್ಸ್​

KGF Chapter 2: ಬಾಕ್ಸಾಫೀಸ್​ನಲ್ಲಿ ತೂಫಾನ್- ಎರಡೇ ದಿನದಲ್ಲಿ ₹ 240 ಕೋಟಿ ಬಾಚಿದ ‘ಕೆಜಿಎಫ್ ಚಾಪ್ಟರ್ 2’; ವಿಶ್ವಾದ್ಯಂತ ಗಳಿಸಿದ್ದೆಷ್ಟು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ