AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2: ಬಾಕ್ಸಾಫೀಸ್​ನಲ್ಲಿ ತೂಫಾನ್- ಎರಡೇ ದಿನದಲ್ಲಿ ₹ 240 ಕೋಟಿ ಬಾಚಿದ ‘ಕೆಜಿಎಫ್ ಚಾಪ್ಟರ್ 2’; ವಿಶ್ವಾದ್ಯಂತ ಗಳಿಸಿದ್ದೆಷ್ಟು?

KGF Chapter 2 Box Office Collection Day 2 | Yash: ಚಿತ್ರತಂಡ ಭಾರತದಲ್ಲಿ ಯಶ್ ನಟನೆಯ ಚಿತ್ರವು ಎರಡು ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಬಹಿರಂಗಗೊಳಿಸಿದೆ. ದೇಶಾದ್ಯಂತ ಎಲ್ಲಾ ಭಾಷೆಗಳಲ್ಲಿ ಸೇರಿಸಿ ‘ಕೆಜಿಎಫ್ 2’ ಚಿತ್ರವು 240 ಕೋಟಿ ರೂ ಬಾಚಿಕೊಂಡಿದೆ. ವಿಶ್ವಾದ್ಯಂತ ಯಶ್ ನಟನೆಯ ಚಿತ್ರ ಗಳಿಸಿದ್ದೆಷ್ಟು? ಇಲ್ಲಿದೆ ಲೆಕ್ಕಾಚಾರ.

KGF Chapter 2: ಬಾಕ್ಸಾಫೀಸ್​ನಲ್ಲಿ ತೂಫಾನ್- ಎರಡೇ ದಿನದಲ್ಲಿ ₹ 240 ಕೋಟಿ ಬಾಚಿದ ‘ಕೆಜಿಎಫ್ ಚಾಪ್ಟರ್ 2’; ವಿಶ್ವಾದ್ಯಂತ ಗಳಿಸಿದ್ದೆಷ್ಟು?
ಕೆಜಿಎಫ್​ ಚಾಪ್ಟರ್​ 2
TV9 Web
| Updated By: shivaprasad.hs|

Updated on:Apr 16, 2022 | 4:29 PM

Share

ಯಶ್ (Yash) ಅಭಿನಯದ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಬಾಕ್ಸಾಫೀಸ್ ಧೂಳೀಪಟ ಮಾಡುತ್ತಿದೆ. ಚಿತ್ರಕ್ಕೆ ಎಲ್ಲೆಡೆಯಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಯಿ ಮಾತಿನ ಪ್ರಚಾರ ಮತ್ತಷ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುತ್ತಿದೆ. ಇದರ ಪರಿಣಾಮ ಈಗಾಗಲೇ ಭಾನುವಾರದವರೆಗಿನ ಶೋಗಳು ಬಹುತೇಕ್ ಬುಕ್ ಆಗಿವೆ. ಕನ್ನಡ ಚಿತ್ರಗಳಿಗೆ ಹೆಚ್ಚಾಗಿ ವೀಕ್ಷಕರಿರದ ತಮಿಳುನಾಡಿನಲ್ಲಿ ತೆರೆ ಕಂಡ 2, 3 ಹಾಗೂ 4ನೇ ದಿನವೂ ಮುಂಜಾನೆಯ ಶೋಗಳನ್ನು ಏರ್ಪಡಿಸಲಾಗಿದೆ. ವಿದೇಶಗಳಲ್ಲೂ ಚಿತ್ರದ ಸ್ಕ್ರೀನ್​ಗಳ ಸಂಖ್ಯೆ ಹೆಚ್ಚುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲೂ ಚಿತ್ರದ ಶೋಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇದರ ಪರಿಣಾಮ ಬಾಕ್ಸಾಫೀಸ್​ನಲ್ಲಿ (KGF Chapter 2 Box Office Collection) ಹಲವು ದಾಖಲೆಗಳನ್ನು ಬರೆಯುತ್ತಿದೆ ‘ಕೆಜಿಎಫ್ ಚಾಪ್ಟರ್ 2’. ಇದೀಗ ಚಿತ್ರತಂಡ ಭಾರತದಲ್ಲಿ ಯಶ್ ನಟನೆಯ ಚಿತ್ರವು ಎರಡು ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಬಹಿರಂಗಗೊಳಿಸಿದೆ. ದೇಶಾದ್ಯಂತ ಎಲ್ಲಾ ಭಾಷೆಗಳಲ್ಲಿ ಸೇರಿಸಿ ‘ಕೆಜಿಎಫ್ 2’ ಚಿತ್ರವು 240 ಕೋಟಿ ರೂ ಬಾಚಿಕೊಂಡಿದೆ.

ಬಾಕ್ಸಾಫೀಸ್ ಲೆಕ್ಕಾಚಾರದ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’, ‘ಕೆಜಿಎಫ್ ಚಾಪ್ಟರ್ 2’ ಎರಡು ದಿನಗಳಲ್ಲಿ ಭಾರತದಲ್ಲಿ ಒಟ್ಟು 240 ಕೋಟಿ ರೂಗಳನ್ನು ಗಳಿಸಿದೆ’ ಎಂದು ಬರೆದಿದೆ.

ಚಿತ್ರತಂಡ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಹಂಚಿಕೊಂಡ ಟ್ವೀಟ್:

ವಿಶ್ವಾದ್ಯಂತ 300 ಕೋಟಿ ರೂ ಕಲೆಕ್ಷನ್ ಮಾಡಿದ ‘ಕೆಜಿಎಫ್ ಚಾಪ್ಟರ್ 2’:

ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿರುವುದು ಎರಡು ದಿನದಲ್ಲಿ ಭಾರತದಲ್ಲಿ ಗಳಿಸಿದ ಮೊತ್ತ. ವಿಶ್ವಾದ್ಯಂತ ತೆರೆಕಂಡಿರುವ ‘ಕೆಜಿಎಫ್ 2’ ಕಲೆಕ್ಷನ್ 300 ಕೋಟಿ ರೂ ದಾಟಿದೆ ಎನ್ನುತ್ತಾರೆ ವಿಶ್ಲೇಷಕರು. ಬಾಕ್ಸಾಫೀಸ್ ತಜ್ಞ ರಮೇಶ್ ಬಾಲಾ ಪ್ರಕಾರ, ‘ಕೆಜಿಎಫ್ ಚಾಪ್ಟರ್ 2’ ತೆರೆಕಂಡ ಎರಡೇ ದಿನಕ್ಕೆ ಮುನ್ನೂರು ಕೋಟಿ ಕ್ಲಬ್ ಸೇರಿದೆ. ಮೊದಲ ದಿನ ಚಿತ್ರವು ಭಾರತದಲ್ಲಿ 134 ಕೋಟಿ ರೂ ಗಳಿಸಿತ್ತು. ಜಾಗತಿಕ ಲೆಕ್ಕವನ್ನು ಸೇರಿಸಿದರೆ ಈ ಮೊತ್ತ 165 ಕೋಟಿ ರೂ ದಾಟಿತ್ತು. ಅದರಂತೆ ಎರಡನೇ ದಿನದ ಲೆಕ್ಕಾಚಾರದಲ್ಲಿ ದೇಶದಲ್ಲಿಯೇ 240 ಕೋಟಿ ರೂ ಮೊತ್ತವನ್ನು ಯಶ್ ನಟನೆಯ ಚಿತ್ರ ಗಳಿಸಿದ್ದು, ಒಟ್ಟಾರೆ ಕಲೆಕ್ಷನ್ 300 ಕೋಟಿ ರೂ ದಾಟಿದೆ.

ಈ ಕುರಿತ ಟ್ವೀಟ್ ಇಲ್ಲಿದೆ:

‘ಕೆಜಿಎಫ್ ಚಾಪ್ಟರ್ 2’ಗೆ ದೀರ್ಘ ವೀಕೆಂಡ್ ಸಿಕ್ಕಿರುವುದರಿಂದ ಬಾಕ್ಸಾಫೀಸ್​ನಲ್ಲಿ ಇನ್ನೆರಡು ದಿನಗಳ ಕಾಲ ದೊಡ್ಡ ಮೊತ್ತವನ್ನೇ ನಿರೀಕ್ಷಿಸಬಹುದು. ಶನಿವಾರ ಹಾಗೂ ಭಾನುವಾರ ಶುಕ್ರವಾರಕ್ಕಿಂತ ಕಲೆಕ್ಷನ್ ಉತ್ತಮವಾಗಿರಲಿದೆ ಎಂದು ಬಾಕ್ಸಾಫೀಸ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಿಂದಿಯಲ್ಲಿ 2 ದಿನಕ್ಕೆ 100 ಕೋಟಿ ರೂ. ಕಲೆಕ್ಷನ್​ ಮಾಡಿದ ‘ಕೆಜಿಎಫ್​ 2’ ಚಿತ್ರ; ಇಲ್ಲಿದೆ ಪಕ್ಕಾ ಲೆಕ್ಕ

The Delhi Files: ‘ದಿ ಕಾಶ್ಮೀರ್ ಫೈಲ್ಸ್’ ನಂತರ ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರ ಅನೌನ್ಸ್; ಇದೂ ಇತಿಹಾಸದಲ್ಲಿ ದಾಖಲಾಗದ ಕತೆಯೇ?

Published On - 4:12 pm, Sat, 16 April 22