The Delhi Files: ‘ದಿ ಕಾಶ್ಮೀರ್ ಫೈಲ್ಸ್’ ನಂತರ ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರ ಅನೌನ್ಸ್; ಇದೂ ಇತಿಹಾಸದಲ್ಲಿ ದಾಖಲಾಗದ ಕತೆಯೇ?
The Kashmir Files | Vivek Agnihotri: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಯಶಸ್ಸು ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಯವರ ಮುಂದಿನ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿತ್ತು. ಕಳೆದ ಕೆಲವು ಸಮಯದಿಂದ ಈ ಬಗ್ಗೆ ಚರ್ಚೆಯಾಗುತ್ತಲೂ ಇತ್ತು. ಇದೀಗ ಸ್ವತಃ ನಿರ್ದೇಶಕರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ‘ದಿ ದೆಹಲಿ ಫೈಲ್ಸ್’ (The Delhi Files) ಅನೌನ್ಸ್ ಮಾಡಿದ್ದಾರೆ.
ಕೊರೊನಾ ನಂತರದ ಕಾಲಘಟ್ಟದಲ್ಲಿ ತೆರೆಕಂಡ ಹಿಂದಿ ಚಿತ್ರಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಗಮನಾರ್ಹವಾಗಿ ಗಳಿಕೆ ಮಾಡಿದ ಚಿತ್ರಗಳು ಕೇವಲ ಬೆರಳೆಣಿಕೆಯಷ್ಟು. ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಹೊರತಾಗಿ ಬೇರೆ ಸ್ಟಾರ್ ನಟರ ಚಿತ್ರಗಳಿಲ್ಲ ಎಂದೇ ಹೇಳಬೇಕು. ಆದರೆ ವಿವೇಕ್ ರಂಜನ್ ಅಗ್ನಿಹೋತ್ರಿ (Vivek Ranjan Agnihotri) ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಮಾರ್ಚ್ 11ರಂದು ತೆರೆಕಂಡಿದ್ದ ಚಿತ್ರ ದಾಖಲೆ ಬರೆದಿತ್ತು. ‘ರಾಧೆ ಶ್ಯಾಮ್’ನಂತಹ ಸ್ಟಾರ್ ಚಿತ್ರದ ಎದುರಿಗೆ ತೆರೆಕಂಡು ಮೊದಲ ದಿನ ಕೇವಲ 3 ಕೋಟಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿದ್ದ ‘ದಿ ಕಾಶ್ಮೀರ್ ಫೈಲ್ಸ್’, ನಂತರ ಸಿಕ್ಕ ಧನಾತ್ಮಕ ಪ್ರತಿಕ್ರಿಯೆ ಹಾಗೂ ಸರ್ಕಾರಗಳ ಬೆಂಬಲದಿಂದ ಭರ್ಜರಿ ಗಳಿಸಿತ್ತು. ಪರಿಣಾಮವಾಗಿ ಚಿತ್ರವು ಬಾಕ್ಸಾಫೀಸ್ನಲ್ಲಿ ಹತ್ತುಹಲವು ದಾಖಲೆ ಬರೆಯಿತು. ಇದುವರೆಗೆ ಒಟ್ಟಾರೆ ಚಿತ್ರದ ಕಲೆಕ್ಷನ್ ಭಾರತದಲ್ಲಿಯೇ 251 ಕೋಟಿ ರೂ ದಾಟಿದೆ. ಕೇವಲ ಹಿಂದಿಯಲ್ಲಿ ಮಾತ್ರ ತೆರೆಕಂಡಿದ್ದ ಈ ಚಿತ್ರ ದಕ್ಷಿಣದ ರಾಜ್ಯಗಳಲ್ಲಿ ಉತ್ತಮವಾಗಿ ಗಳಿಕೆ ಮಾಡಿದ್ದು ವಿಶೇಷ. ಈ ಚಿತ್ರದ ಯಶಸ್ಸು ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಯವರ ಮುಂದಿನ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿತ್ತು. ಕಳೆದ ಕೆಲವು ಸಮಯದಿಂದ ಈ ಬಗ್ಗೆ ಚರ್ಚೆಯಾಗುತ್ತಲೂ ಇತ್ತು. ಇದೀಗ ಸ್ವತಃ ನಿರ್ದೇಶಕರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ‘ದಿ ದೆಹಲಿ ಫೈಲ್ಸ್’ (The Delhi Files) ಅನೌನ್ಸ್ ಮಾಡಿದ್ದಾರೆ.
ಸ್ವತಂತ್ರ ಭಾರತದ ಪ್ರಮುಖ ಘಟನೆಗಳನ್ನು ಅದರಲ್ಲೂ ಇತಿಹಾಸದಲ್ಲಿ ದಾಖಲಾಗದ ವಿಷಯಗಳನ್ನು ಚಿತ್ರದ ಮೂಲಕ ತೆರೆದಿಡಲು ವಿವೇಕ್ ಅಗ್ನಿಹೋತ್ರಿ ಈ ಹಿಂದೆಯೇ ನಿರ್ಧರಿಸಿದ್ದರು. ಅದರಂತೆ ಮೊದಲ ಚಿತ್ರವಾಗಿ ‘ದಿ ತಾಷ್ಕೆಂಟ್ ಫೈಲ್ಸ್’ ತೆರೆಕಂಡಿತ್ತು. ಎರಡನೇ ಚಿತ್ರವಾಗಿ ‘ದಿ ಕಾಶ್ಮೀರ್ ಫೈಲ್ಸ್’ ತೆರೆಕಂಡಿತ್ತು. ಇದೀಗ ‘ದಿ ದೆಹಲಿ ಫೈಲ್ಸ್’ ಘೋಷಣೆಯಾಗಿದೆ.
ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ವಿವೇಕ್ ಅಗ್ನಿಹೋತ್ರಿ, ‘‘ದಿ ಕಾಶ್ಮೀರ್ ಫೈಲ್ಸ್ ಚಿತ್ರವು ಯಶಸ್ಸು ಕಾಣಲು ಕಾರಣರಾದ ಎಲ್ಲರಿಗೂ ಧನ್ಯವಾದಗಳು. ಕಳೆದ ನಾಲ್ಕು ವರ್ಷಗಳಿಂದ ಪ್ರಾಮಾಣಿಕವಾಗಿ ಹಾಗೂ ಸತತ ಪರಿಶ್ರಮದ ಮೂಲಕ ಚಿತ್ರದಲ್ಲಿ ತೊಡಗಿಸಿಕೊಂಡಿದ್ದೆವು. ಕಾಶ್ಮೀರಿ ಹಿಂದೂಗಳ ಪರಿಸ್ಥಿತಿಯನ್ನು ಎಲ್ಲರಿಗೂ ತಲುಪಿಸುವುದು ಅದರ ಉದ್ದೇಶವಾಗಿತ್ತು. ಇದೀಗ ಹೊಸ ಚಿತ್ರಕ್ಕೆ ಕೆಲಸ ಮಾಡುವ ಸಮಯ’’ ಎಂದು ಟ್ವೀಟ್ ಮಾಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಟ್ವೀಟ್ ಇಲ್ಲಿದೆ:
I thank all the people who owned #TheKashmirFiles. For last 4 yrs we worked very hard with utmost honesty & sincerity. I may have spammed your TL but it’s important to make people aware of the GENOCIDE & injustice done to Kashmiri Hindus.
It’s time for me to work on a new film. pic.twitter.com/ruSdnzRRmP
— Vivek Ranjan Agnihotri (@vivekagnihotri) April 15, 2022
‘ದಿ ದೆಹಲಿ ಫೈಲ್ಸ್’ ಕತೆ ಏನು?
ಈ ಬಾರಿ ಟ್ವೀಟ್ನಲ್ಲಿ ಹೊಸ ಚಿತ್ರದ ಕತಾ ವಸ್ತುವಿನ ಬಗ್ಗೆ ವಿವೇಕ್ ಅಗ್ನಿಹೋತ್ರಿ ಗುಟ್ಟುಬಿಟ್ಟುಕೊಟ್ಟಿಲ್ಲ. ಹೀಗಾಗಿ ಚಿತ್ರದ ಕತಾ ವಸ್ತುವಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಜನರು ಕುತೂಹಲಗೊಂಡಿದ್ದಾರೆ. ಆದರೆ 2021ರಲ್ಲಿ ವಿವೇಕ್ ಅಗ್ನಿಹೋತ್ರಿ ‘ದಿ ದೆಹಲಿ ಫೈಲ್ಸ್’ ಬಗ್ಗೆ ಬರೆದುಕೊಂಡಿದ್ದರು. ಆಗ ಸಿಖ್ ಬಾಲಕನೊಬ್ಬ ಅಸಹಾಯಕನಾಗಿ ಅಳುತ್ತಿರುವ, ಹಿಂಬದಿಯಲ್ಲಿ ರಾಷ್ಟ್ರ ಲಾಂಛನವಿರುವ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದರು. ‘ದೆಹಲಿ ಫೈಲ್ಸ್’ನಲ್ಲಿ ಜೀವಿಸುವ ಹಕ್ಕಿನ ಬಗ್ಗೆ ಹೇಳುವುದಾಗಿ ವಿವೇಕ್ ಬರೆದುಕೊಂಡಿದ್ದರು. ಈ ಚಿತ್ರವೂ ಸ್ವತಂತ್ರ ಭಾರತದಲ್ಲಿ ನಡೆದ, ಇದುವರೆಗೆ ಯಾರೂ ಹೇಳದ ಕತೆ ಎಂದಿದ್ದರು ವಿವೇಕ್ ಅಗ್ನಿಹೋತ್ರಿ.
ವಿವೇಕ್ ಅಗ್ನಿಹೋತ್ರಿ ಹಳೆಯ ಟ್ವೀಟ್ ಇಲ್ಲಿದೆ:
Few years back, I started telling untold stories of independent India.
1. #TheTashkentFiles – Right To Truth. 2. #TheKashmirFiles – Right To Justice (releasing soon)
Happy to announce the last & the boldest of the trilogy:
3. #TheDelhiFiles – Right To Life.
Pl bless us. pic.twitter.com/gBJtX4ilZR
— Vivek Ranjan Agnihotri (@vivekagnihotri) September 13, 2021
ಹೊಸ ಚಿತ್ರದ ಮತ್ತಷ್ಟು ಮಾಹಿತಿ ಘೋಷಣೆ ಯಾವಾಗ?
ಪ್ರಸ್ತುತ ವಿವೇಕ್ ಅಗ್ನಿಹೋತ್ರಿ ‘ದಿ ದೆಹಲಿ ಫೈಲ್ಸ್’ ಬಗ್ಗೆ ಯಾವ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ‘ದಿ ಕಾಶ್ಮೀರ್ ಫೈಲ್ಸ್’ ನಂತರ ಅವರ ವ್ಯಾಪ್ತಿ ಹಿರಿದಾಗಿದ್ದು, ಚಿತ್ರತಂಡದಲ್ಲಿ ಬದಲಾವಣೆಯಾದರೂ ಅಚ್ಚರಿಯಿಲ್ಲ. ಹೀಗಾಗಿ ‘ದಿ ದೆಹಲಿ ಫೈಲ್ಸ್’ ಕತೆ ಸಿಖ್ ಹಿನ್ನೆಲೆ ಹೊಂದಿದ್ದರೂ, ಈ ಹಿಂದೆ ಘೋಷಿಸಿದ ಚಿತ್ರತಂಡವೇ ಇದಕ್ಕೂ ಕೆಲಸ ಮಾಡಲಿದೆಯೇ ಎಂಬುದು ಖಚಿತವಾಗಿಲ್ಲ. ಇದನ್ನು ಶೀಘ್ರದಲ್ಲೇ ನಿರ್ದೇಶಕರು ಬಹಿರಂಗಪಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:
‘ಸ್ಟ್ರಾಂಗ್ ಬಾಡಿ, ಸ್ಟ್ರಾಂಗ್ ಮನಸ್ಸು’; ವಿಡಿಯೋ ಸಹಿತ ಸಾಕ್ಷಿ ತೋರಿಸಿದ ನಟಿ ಸಮಂತಾ