ದಿ ಕಾಶ್ಮೀರ್ ಫೈಲ್ಸ್ ವೀಕ್ಷಿಸಿದ ನಂತರ ಮುಸ್ಲಿಂ ಯುವಕನ ಮೇಲೆ ಕತ್ತಿಯಿಂದ ಹಲ್ಲೆ; ಪೊಲೀಸರು ಬಿಚ್ಚಿಟ್ಟರು ಘಟನೆಯ ಬೆಚ್ಚಿಬೀಳಿಸುವ ಸತ್ಯಾಂಶ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರ್ಗಾಂವ್ ಗ್ರಾಮದಲ್ಲಿ ಬುಧವಾರ ಸಂಜೆ 18 ವರ್ಷದ ಅಮಾನುಲ್ಲಾ ಇರ್ಫಾನ್ ಎಂಬ ಯುವಕನ ಮೇಲೆ 30 ವರ್ಷದ ಹೊನ್ನಪ್ಪ ಬೋವಿ ಎಂಬುವವರು ಜೇಬಿನಲ್ಲಿ ಇಡುವ ಚಿಕ್ಕ ಕತ್ತಿಯಿಂದ ಕತ್ತಿನ ಭಾಗಕ್ಕೆ ಹಲ್ಲೆ ನಡೆಸಿದ್ದರು.
ಬಾಲಿವುಡ್ನ ದಿ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾ ವೀಕ್ಷಿಸಿದ ನಂತರ 18 ವರ್ಷದ ಮುಸ್ಲಿಂ ಯುವಕನ ಮೇಲೆ ಹಿಂದೂ ವ್ಯಕ್ತಿಯೊಬ್ಬ ಕತ್ತಿಯಿಂದ ಹಲ್ಲೆ ಮಾಡಿದ್ದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು. ಮತ್ತು ಹಲವು ಕಡೆ ಈ ಬಗ್ಗೆ ವ್ಯಾಪಕ ಆಕ್ರೋಶ, ವಿರೋಧ ವ್ಯಕ್ತವಾಗಿತ್ತು. ಸದ್ಯ ಈ ಪ್ರಕರಣ ಸಂಬಂಧ ಕರ್ನಾಟಕ ಪೊಲೀಸರು(Karnataka Police) ಫ್ಯಾಕ್ಟ್ ಚೆಕ್(Fact Check)ಮಾಡಿದ್ದಾರೆ. ಪ್ರಕರಣದ ಸತ್ಯಾಂಶ ಬಯಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರ್ಗಾಂವ್ ಗ್ರಾಮದಲ್ಲಿ ಬುಧವಾರ ಸಂಜೆ 18 ವರ್ಷದ ಅಮಾನುಲ್ಲಾ ಇರ್ಫಾನ್ ಎಂಬ ಯುವಕನ ಮೇಲೆ 30 ವರ್ಷದ ಹೊನ್ನಪ್ಪ ಬೋವಿ ಎಂಬುವವರು ಜೇಬಿನಲ್ಲಿ ಇಡುವ ಚಿಕ್ಕ ಕತ್ತಿಯಿಂದ ಕತ್ತಿನ ಭಾಗಕ್ಕೆ ಹಲ್ಲೆ ನಡೆಸಿದ್ದರು. ಈ ಘಟನೆ ರಾಜ್ಯದಲ್ಲಿ ನಡೆಯುತ್ತಿದ್ದ ಗಲಭೆಗೆ ತಿರುಗಿಕೊಂಡಿದ್ದು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ನಂತರ ಮುಸ್ಲಿಂ ಯುವಕನ ಮೇಲೆ ಹಿಂದೂ ವ್ಯಕ್ತಿ ಹಲ್ಲೆ ಮಾಡಿದ್ದಾರೆಂದು ಪ್ರಕರಣವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಸದ್ಯ ಈ ಪ್ರಕರಣ ಸಂಬಂಧ ಕರ್ನಾಟಕ ಪೊಲೀಸರ ಫ್ಯಾಕ್ಟ್ ಚೆಕ್ ತಂಡ ಪರಿಶೀಲನೆ ನಡೆಸಿದ್ದು ಘಟನೆಯ ಸತ್ಯಾಂಶ ಬಯಲು ಮಾಡಿದ್ದಾರೆ. ಈ ಪ್ರಕರಣದ ಹಿಂದಿರುವ ಕಥೆಯು ಸಂಪೂರ್ಣವಾಗಿ ಸುಳ್ಳು ಮತ್ತು ಕಿಡಿಗೇಡಿಗಳು ಬೇಕೆಂದೆ ಘಟನೆಯನ್ನು ತಿರುಚಿರುವುದು ಕಂಡು ಬಂದಿದೆ. ಜನರ ದಾರಿ ತಪ್ಪಿಸಲು ಈ ಪ್ರಕರಣದಲ್ಲಿ ಪ್ರಯತ್ನಿಸಲಾಗಿದೆ ಎಂಬ ಸತ್ಯ ಹೊರ ಬಿದ್ದಿದೆ.
ಹಾಗಾದ್ರೆ ಹಲ್ಲೆ ನಡೆದದ್ದು ಏಕೆ? ಆರೋಪಿ ಹೊನ್ನಪ್ಪ ಬೋವಿ ಮತ್ತು ಹಲ್ಲೆಗೆ ಒಳಗಾದ ಇರ್ಫಾನ್ ನೆರೆಹೊರೆಯವರು. ಇರ್ಫಾನ್ ಹಾಗೂ ಆರೋಪಿ ಹೊನ್ನಪ್ಪರ ನಡುವೆ ಗಲಾಟೆ ನಡೆದಿತ್ತು. ಹೊನ್ನಪ್ಪ ತಾಯಿಯ ಮೇಲೆ ದೌರ್ಜನ್ಯ ನಡೆಸಿದ ಹಿನ್ನೆಲೆ ಇರ್ಫಾನ್ ಮನೆಯ ಮುಂದೆ ಚಾಕುವಿನಿಂದ ಹೊನ್ನಪ್ಪ ಹಲ್ಲೆ ನಡೆಸಿದ್ದರು. ಸದ್ಯ ಇರ್ಫಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಹೊನ್ನಪ್ಪ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಈ ಪ್ರಕರಣಕ್ಕೂ ಕಾಶ್ಮೀರ್ ಫೈಲ್ಸ್ ಸನಿಮಾಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಳಿಯಾಳ ಪಿಎಸ್ ಸಿಆರ್ ನಲ್ಲಿ ಎಫ್ ಐಆರ್ ದಾಖಲಾಗಿದೆ.
ಯಾರೋ ಈ ಸುಳ್ಳು ಮಾಹಿತಿಯನ್ನು ಹಂಚಿದ್ದಾರೆ ಮತ್ತು ಈ ಸುಳ್ಳು ಸುದ್ದಿಯ ಹಿಂದೆ ಯಾರಿದ್ದಾರೆಂದು ನಾವು ತನಿಖೆ ನಡೆಸುತ್ತಿದ್ದೇವೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಕೋಮು ಸೌಹಾರ್ದತೆಯನ್ನು ಹರಡಿದೆ. ಇದು ಸರಿಯಲ್ಲ ಎಂದು ಪಿಎಸ್ಐ ಶಿವಾನಂದ ತಿಳಿಸಿದ್ದಾರೆ.
Muslim youth attacked with sword by man returning after watching ‘Kashmiri Files’ : True facts – Karnataka State Police FactCheck https://t.co/LISeRioqmD
— DGP KARNATAKA (@DgpKarnataka) April 16, 2022
ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಕೆಎಸ್ ಈಶ್ವರಪ್ಪ ಮನೆಗೆ ವಿವಿಧ ಸ್ವಾಮೀಜಿಗಳು ಭೇಟಿ
ನಿಮ್ಮ ಟೈಮ್ಲೈನ್ : ಅದ್ವೈತದಲ್ಲಿರುವುದು ಬರೀ ಚೈತನ್ಯ! ಇನ್ನು ಹಿಂದೂಮುಸ್ಲಿಂ, ಗಂಡುಹೆಣ್ಣು ಎಲ್ಲಿ ನುಸಳಬೇಕು ಮಣ್ಣು?